ಜ್ವರ, ನ್ಯುಮೋನಿಯಾ ಬಾಧಿಸಿ ಯುವತಿ ಮೃತ್ಯು
ಬದಿಯಡ್ಕ: ಜ್ವರ ಹಾಗೂ ನ್ಯುಮೋನಿಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಕುಂಬ್ಡಾಜೆ ಮಲ್ಲಮೂಲೆ ನಿವಾಸಿಯೂ, ಬದಿಯಡ್ಕ ಚೆನ್ನಾರಕಟ್ಟೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ರೋಹಿಣಿ (35) ಮೃತಪಟ್ಟ ದುರ್ದೈವಿ. ತೀವ್ರ ಜ್ವರ ಹಾಗೂ ಕೆಮ್ಮು ಅನುಭವಗೊಂಡ ಇವರು ಒಂದು ವಾರ ಹಿಂದೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ವೇಳೆ ಜ್ವರ ಮತ್ತೆ ಉಲ್ಭಣಗೊಂಡು ಉಸಿರಾಟ ಸಮಸ್ಯೆ ಉಂಟಾಗಿತ್ತು. ಕೂಡಲೇ ಬದಿಯ ಡ್ಕದ ಆಸ್ಪತ್ರೆಗೂ, ನಂತರ ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ …