ಅಂತಾರಾಷ್ಟ್ರೀಯ ಮಾದಕವಿರೋಧಿ ದಿನದಂಗವಾಗಿ ಜಾಗೃತಿ ಜಾಥಾ

ಮಂಜೇಶ್ವರ: ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗ ವಾಗಿ, ಲಹರಿಮುಕ್ತ ಸಮಾಜ ನಿರ್ಮಾ ಣದ ಸಂಕಲ್ಪದೊAದಿಗೆ ಮಂಜೇಶ್ವರ ಪೊಲೀಸ್ ಠಾಣೆ ಮತ್ತು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ತೂಫಾನ್ ದಿ ನಾರ್ಕೋ ಹಂಟ್’ ಅಭಿಯಾನ ಯಶಸ್ವಿಯಾಗಿ ನಡೆಯಿತು. ಉಪ್ಪಳದಿಂದ ತಲಪಾಡಿವರೆಗೆ ನಡೆದ ಲಹರಿವಿರೋಧಿ ಜಾಗೃತಿ ಜಾಥಾಕ್ಕೆ ಕಾಸರಗೋಡು ಎಎಸ್‌ಪಿ ಅಚ್ಯುತ್ ಅಶೋಕ್ ನೇತೃತ್ವ ವಹಿಸಿದ್ದರು.
ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿ ಮಾತನಾಡಿದರು. 3 ಗಂಟೆಗೆ ಆರಂಭವಾದ ಜಾಥಾದಲ್ಲಿ ಶಾಲಾ ವಿದ್ಯಾರ್ಥಿಗಳು, ಎಸ್‌ಪಿಸಿ ಕೆಡೆಟ್‌ಗಳು, ಟ್ರೋಮಾಕೇರ್ ಸದಸ್ಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ‘ಸೇ ನೋ ಟು ಡ್ರಗ್ಸ್’ ಎಂಬ ಘೋಷವಾಕ್ಯದಡಿ ಎಲ್ಲರೂ ಒಗ್ಗೂಡಿ ಮಾದಕ ವಿರೋಧಿ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಸೈಫುಲ್ಲಾ ತಂಙಳ್, ವ್ಯಾಪಾರಿ ಸಂಘಟನಾ ನೇತಾರರಾದ ಹಮೀದ್ ಹೊಸಂಗಡಿ, ಹಸೈನಾರ್, ಅಜೀಜ್ ಮರಿಕೆ, ಮಂಜೇಶ್ವರ ಎಸ್‌ಐ ಮತ್ತು ಜನಮೈತ್ರಿ ಪೊಲೀಸ್ ವಿಭಾಗದ ಮಧು ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.

RELATED NEWS

You cannot copy contents of this page