ಮನೆಗೆ ನುಗ್ಗಿ ಯುವತಿ, ಸ್ನೇಹಿತನ ವೀಡಿಯೋ ಚಿತ್ರೀಕರಣ: ಲೈಂಗಿಕ ಸಂಪರ್ಕಕ್ಕೆ ನಿರಾಕರಿಸಿದಾಗ ವೀಡಿಯೋ ಪ್ರಚಾರ ಮಾಡುವುದಾಗಿ ಬೆದರಿಕೆ; ಇಬ್ಬರು ಪೊಲೀಸ್ ಕಸ್ಟಡಿಗೆ

ಮಂಜೇಶ್ವರ: ರಾತ್ರಿ ಹೊತ್ತಿನಲ್ಲಿ ಮನೆಗೆ ಅತಿಕ್ರಮಿಸಿ ನುಗ್ಗಿದ ತಂಡ  ಯುವತಿ ಹಾಗೂ ಆಕೆಯ ಸ್ನೇಹಿತನ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 27ರ ಹರೆಯದ ಗೃಹಿಣಿಯ ದೂರಿನಂತೆ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳಾದ ಇಬ್ಬರು ಪೊಲೀಸರ ಕಸ್ಟಡಿಯಲ್ಲಿರುವುದಾಗಿ ಸೂಚನೆಯಿದೆ. ಜೂನ್ 23ರಂದು ರಾತ್ರಿ 10.30ರ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಯುವತಿಯ ಮನೆಗೆ ಅತಿಕ್ರಮಿಸಿದ ನುಗ್ಗಿದ ಆರೋಪಿಗಳು ಯುವತಿ ಹಾಗೂ ಆಕೆಯ ಸ್ನೇಹಿತನ ವೀಡಿಯೋ …

13ರ ಬಾಲಕನಿಗೆ  ಹಲ್ಲೆ: ಹಲವು ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾದ ಉಸ್ತಾದ್ ವಿರುದ್ಧ ಇನ್ನೊಂದು ಕೇಸು

ಕಾಸರಗೋಡು: 15ಕ್ಕೂ ಅಧಿಕ ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾದ ಮಲಪ್ಪುರಂ, ವಳಾಂಜೇರಿ ಆದವನಾಡ್ ಉಸ್ತಾದ್ ವಿರುದ್ಧ ಬೇಕಲ ಪೊಲೀಸರು ಇನ್ನೊಂದು ಕೇಸು ದಾಖಲಿಸಿದ್ದಾರೆ. 13ರ ಹರೆಯದ ಬಾಲಕನನ್ನು ಹಲವು ದಿನಗಳ ಕಾಲ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದನೆಂಬ ದೂರಿನಂತೆ ಎಂ.ಕೆ. ಮೊಹಮ್ಮದ್ ಉಸ್ತಾದ್ ವಿರುದ್ಧ ಕೇಸು ದಾಖಲಿಸಲಾಗಿದೆ. ಇದರೊಂದಿಗೆ ಬೇಕಲ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧವಿರುವ ಪ್ರಕರಣಗಳ ಸಂಖ್ಯೆ ಮೂರು ಆಗಿ ಹೆಚ್ಚಳಗೊಂಡಿದೆ. ಈ ಮೊದಲು ಎರಡು ಪೋಕ್ಸೋ ಕೇಸುಗಳನ್ನೂ ಈತನ ವಿರುದ್ಧ ನೋಂದಾಯಿಸಲಾಗಿತ್ತು. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ …

ಮಾದಕ ಪದಾರ್ಥ ಸಹಿತ ಯುವಕ ಸೆರೆ

ಬದಿಯಡ್ಕ: ಮಾದಕ ವಸ್ತುವಾದ ಎಂಡಿಎಂಎ ಸಹಿತ ಯುವಕನೋರ್ವ ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ಚರ್ಲಡ್ಕ ನಿವಾಸಿ ಅಬ್ದುಲ್ ಜವಾದ್ ಸಿ.ಎಂ. ಬಂಧಿತ ವ್ಯಕ್ತಿ. ಈತನ ಕೈವಶ 0.49 ಗ್ರಾಂ ಮಾದಕ ಪದಾರ್ಥವನ್ನು ವಶಪಡಿಸಲಾಗಿದೆ. ನಿನ್ನೆ ರಾತ್ರಿ 9 ಗಂಟೆ ವೇಳೆ ನೆಲ್ಲಿಕಟ್ಟೆ ಸಮೀಪದ ಚೆನ್ನಡ್ಕದಲ್ಲಿ ಬದಿಯಡ್ಕ ಠಾಣೆ ಎಸ್‌ಐ ರೂಪೇಶ್ ನೇತೃತ್ವದಲ್ಲಿ ಗಸ್ತು ನಡೆಸುತ್ತಿದ್ದಾಗ ಪೊಲೀಸರ ವಾಹನವನ್ನು ಕಂಡು ಓಡಿ ಪರಾರಿಯಾಗಲೆತ್ನಿಸಿದ್ದಾನೆ. ಈ ವೇಳೆ ಶಂಕೆ ತೋರಿ ಬೆನ್ನಟ್ಟಿ ತಪಾಸಣೆ ನಡೆಸಿದಾಗ ಪ್ಯಾಂಟ್‌ನ ಜೇಬಿನಿಂದ ಮಾದಕವಸ್ತು …

ಹಿರಿಯ ಯಕ್ಷಗಾನ ಕಲಾವಿದ ಮಧೂರು ವೆಂಕಟಕೃಷ್ಣ ನಿಧನ

ಮಧೂರು: ಹಿರಿಯ ಯಕ್ಷಗಾನ ಪ್ರಸಂಗಕರ್ತ, ಅರ್ಥದಾರಿ ಹಾಗೂ ನಿವೃತ್ತ ಮಾರಾಟ ತೆರಿಗೆ ಅಧಿಕಾರಿ ಯಾಗಿದ್ದ  ಮಧೂರು  ಂಕಟಕೃಷ್ಣ (87) ನಿಧನಹೊಂದಿದರು.  ವಯೋಸಹಜ ಅಸೌಖ್ಯದಿಂದಿದ್ದ ಇವರು ನಿನ್ನೆ ಸಂಜೆ ಮಧೂರಿನ ಸ್ವ-ಗೃಹದಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ ಸುಮಿತ್ರ, ಮಕ್ಕಳಾದ ಜ್ಯೋತಿಲಕ್ಷ್ಮಿ, ಮುರಳೀಮಾಧವ (ಯಕ್ಷಗಾನ ಕಲಾವಿದ), ಡಾ| ನಾರಾಯಣ, ಅಳಿಯ ಡಾ| ನಾಗ ಭೂಷಣ್ (ಬೆಂಗಳೂರು), ಸೊಸೆಯಂ ದಿರಾದ  ಸಂಧ್ಯಾ, ಡಾ| ದೀಪ್ತಿ, ಸಹೋದರಿ ಮೀನಾಕ್ಷಿ ಶಿಬರೂರಾಯ (ಪೆರುದಡಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರಿಯರಾದ ಪಾರ್ವತಿ ಸರಳಾಯ, …

ಕತ್ತಿ ತೋರಿಸಿ ಬೆದರಿಸಿ ಮಹಿಳೆಯ ಚಿನ್ನಾಭರಣ ಅಪಹರಣ: ಆರೋಪಿಗಳಿಗಾಗಿ ಶೋಧ

ಮಂಜೇಶ್ವರ: ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಸರ ಅಪಹರಣ ಘಟನೆಗಳು  ಹೆಚ್ಚುತ್ತಿದ್ದು, ಸ್ಥಳೀಯರು ಬೀತಿಯಲ್ಲಿದ್ದಾರೆ. ಈ ತಿಂಗಳ 22ರಂದು ಹೊಸಂಗಡಿಯ ಎಸ್‌ಬಿಐ ಬ್ಯಾಂಕ್ ಸಮೀಪ ಸರ್ವೀಸ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಬಳಿ ಬಂದ ಸ್ಕೂಟರ್ ಸವಾರರು ಆಕೆಯ ಕುತ್ತಿಗೆಯಲ್ಲಿದ್ದ ಎರಡೂಕಾಲು ಪವನ್ ಚಿನ್ನದ ಸರವನ್ನು  ಲೂಟಿಗೈದ ಘಟನೆ ನಡೆದಿದ್ದು, ಇದರಲ್ಲಿ ಓರ್ವನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇದೇ ರೀತಿಯ ಘಟನೆ ನಿನ್ನೆ ಬೆಳಿಗ್ಗೆ ಉಪ್ಪಳ ರೈಲ್ವೇ ನಿಲ್ದಾಣ ಪರಿಸರದ ಬಳಿ ನಡೆದಿದೆ. ಮೀನು ಮಾರುಕಟ್ಟೆಯಿಂದ ಮನೆಗೆ ತೆರಳುತ್ತಿದ್ದ …

ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಹೊಳೆ ಹೊಯ್ಗೆ ಸಾಗಾಟ: ಓರ್ವ ಸೆರೆ

ಕುಂಬಳೆ: ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಹೊಳೆ ಹೊಯ್ಗೆ ಸಾಗಾಟಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಓರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೀಂಜ ಜೋಡುಕಲ್ಲು ನವೋದಯ ನಗರದ ಗಿರೀಶ್ ಎ (40) ಎಂಬಾತ ಬಂಧಿತ ಆರೋಪಿ. ಕೇರಳ ನದಿ ಸಂರಕ್ಷಣೆ ಕಾನೂನಿಗೆ ವಿರುದ್ಧವಾಗಿ  ಲಾರಿಯಲ್ಲಿ ಹೊಳೆ ಹೊಯ್ಗೆಯನ್ನು ಕದ್ದು ಸಾಗಿಸಿದ ಸೆಕ್ಷನ್ ಪ್ರಕಾರ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೇರೂರು ಗ್ರಾಮದ ಚಿನ್ನಮೊಗರು ಎಂಬಲ್ಲಿ ಕುಂಬಳೆ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಆ ದಾರಿಯಾಗಿ ಬರುತ್ತಿದ್ದ ಟಿಪ್ಪರ್ ಲಾರಿಯನ್ನು ತಡೆದು …

ಲಾಲ್‌ಭಾಗ್- ಕುರುಡಪದವು ರಸ್ತೆ ಅಭಿವೃದ್ಧಿಗೆ 1 ತಿಂಗಳ ಆಯುಷ್ಯ: ಡಾಮರು ಎದ್ದು ಶೋಚನೀಯ ಸ್ಥಿತಿಗೆ ತಲುಪಿದ ರಸ್ತೆ : ಕಳಪೆ ಕಾಮಗಾರಿ ಆರೋಪ

ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್‌ಭಾಗ್-ಕುರುಡಪದವು ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಅಮ್ಮೇರಿ ತನಕ ಅಭಿವೃದ್ದಿಗೊಳಿಸಿದ ರಸ್ತೆ ಒಂದೇ ತಿಂಗಳಲ್ಲೇ ಅಲ್ಲಲ್ಲಿ ಡಾಮಾರು ಎದ್ದು ಶೋಚನೀಯಾವಸ್ಥೆಗೆ ತಲುಪಿದೆ. ಇದು ಕಳಪೆ ಕಾಮಗಾರಿಯಿಂದ ಎಂದು ಊರವರು ಆರೋಪಿಸಿದ್ದಾರೆ. ಅಲ್ಲದೆ ಪ್ರತಿಭಟನೆಗೂ ಸಿದ್ದತೆ ನಡೆಸಲಾಗುತ್ತಿದೆ. ಸುಮಾರು ನಾಲ್ಕುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಮುಕ್ಕಾಲು ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ದಿಗೊಳಿಸಲಾಗಿದೆ. ಆದರೆ ಒಂದು ತಿಂಗಳಲ್ಲೇ ಹದಗೆಡಲು ಆರಂಭಿಸಿದ್ದು, ಊರವರಲ್ಲಿ ಆತಂಕ ಉಂಟುಮಾಡಿದೆ. ಈ ರಸ್ತೆಯಲ್ಲಿ ವ್ಯವಸ್ಥಿತ ಚರಂಡಿ, ಸಂಕ, ತಡೆಗೋಡೆಗಳು ನಿರ್ಮಿಸದಿರುವುದು …

ಜಯಂತಿ ಶೆಟ್ಟಿ ನಿಧನ

ಉಪ್ಪಳ: ಮಂಗಲ್ಪಾಡಿ ತಿಂಬರ ನಿವಾಸಿ ನವಿ ಮುಂಬಯಿ ಬೇಲಾಪುರ್‌ನಲ್ಲಿ ವಾಸವಾಗಿರುವ ಹಿರಿಯ ಹೋಟೆಲ್ ಉದ್ಯಮಿ, ದಾನಿ ಸಂಜೀವ ಶೆಟ್ಟಿ ತಿಂಬರ ರವರ ಪತ್ನಿ ಜಯಂತಿ ಶೆಟ್ಟಿ (63) ನಿನ್ನೆ ಮುಂಜಾನೆ ಮುಂಬಯಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ಅರುಣ್ ಶೆಟ್ಟಿ, ಅಜಿತ್ ಶೆಟ್ಟಿ, ಅಶ್ವಿಥ್ ಶೆಟ್ಟಿ, ಸೊಸೆಯಂದಿರಾದ ಕಲ್ಪಿತ, ಶಮಿತ, ಸೌಮ್ಯ, ಸಹೋದರ ರಮೇಶ ಆಳ್ವ ತಿಂಬರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೋಪಾಲ ಶ್ರೀ ಮಹಾವಿಷ್ಣು ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ರಚನೆ

ಎಡನೀರು: ಮುಳಿಯಾರು ಪಂಚಾಯತ್ ವ್ಯಾಪ್ತಿಯ ಎಡನೀರು ಮೋಪಾಲ ಶ್ರೀ ಮಹಾವಿಷ್ಣು ದೇವಸ್ಥಾನದ ಪುನರ್ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಬ್ರಹ್ಮಕಲಶ ಸಮಿತಿ ರಚನೆ ಎಡನೀರು ಮಠದಲ್ಲಿ ನಡೆಯಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಆಶೀರ್ವಚನ ನೀಡಿದರು. ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಭಟ್ ಅಧ್ಯಕ್ಷತೆ ವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿಗೆ ಮಧು ಸೂದನ ಆಯರ್‌ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ವಾಮನ ಆಚಾರ್ಯ ಬೋವಿಕ್ಕಾನ ಪ್ರಧಾನ ಕಾರ್ಯದರ್ಶಿಯಾಗಿ, ಈಶ್ವರ ಭಟ್ ವಡಕ್ಕೇಮೂಲೆ ಕೋಶಾಧಿಕಾರಿಯಾಗಿ ಆಯ್ಕೆಯಾದರು. ಅಲ್ಲದೆ ೧೦೧ …

ಚೆರ್ಕಳ ಪೇಟೆಯಲ್ಲಿ ಹೆದ್ದಾರಿ ನಿರ್ಮಾಣ ವಿಳಂಬಗತಿಯಲ್ಲಿ: ಮರ್ಚೆಂಟ್ಸ್ ಅಸೋಸಿಯೇಶನ್‌ನಿಂದ ಪ್ರತಿಭಟನಾ ಉಪವಾಸ ಮುಷ್ಕರ

ಚೆರ್ಕಳ: ಚೆರ್ಕಳ ಪೇಟೆಯಲ್ಲಿ ಹೆದ್ದಾರಿ ನಿರ್ಮಾಣ, ನಿರ್ಮಾಣದಲ್ಲಿ ತಾರತಮ್ಯ ನೀತಿ ಮುಂದುವರಿಸಿದರೆ ಅನಿರ್ದಿಷ್ಟಾವಧಿ ಕಾಲ ಮುಷ್ಕರ ಆರಂಭಿಸುವುದಾಗಿ ಶಾಸಕ ಕಲ್ಲಟ್ರ ಮಾಹಿನ್ ಎಚ್ಚರಿಸಿದ್ದಾರೆ. ನಾಲ್ಕು ವರ್ಷ ಪೂರ್ತಿಗೊಂಡರೂ ಅರ್ಧ ಕೆಲಸ ಕೂಡ ಮುಗಿಸಲು ಸಾಧ್ಯವಾಗದೆ ಜಿಲ್ಲಾಡಳಿತ ಸಮಯಾಸಮಯಗಳಲ್ಲಿ ನೀಡುತ್ತಿರುವ ನಿರ್ದೇಶಗಳನ್ನೆಲ್ಲ ಗಾಳಿಗೆ ತೂರಿ ಎನ್‌ಎಚ್ 66 ಚೆಂಗಳ-ನೀಲೇಶ್ವರ ರೀಚ್‌ನ ನಿರ್ಮಾಣ ಹೊಣೆಯಿರುವ ಮೆಗಾ ಕನ್‌ಸ್ಟ್ರಕ್ಷನ್ ಕಂಪೆನಿಯ ನೀತಿರಹಿತವಾದ ಕ್ರಮವನ್ನು ಪ್ರಶ್ನಿಸಿ ಚೆರ್ಕಳ ಮರ್ಚೆಂಟ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಚೆರ್ಕಳದಲ್ಲಿ ಜನಪರ ಒಕ್ಕೂಟ ನಡೆಸಿದ ಏಕ ದಿನ ಉಪವಾಸ ಮುಷ್ಕರವನ್ನು …