ಕಾಸರಗೋಡು ಶ್ರೀ ಗಣೇಶೋತ್ಸವ ಗಣಪತಿ ವಿಗ್ರಹ ರಚನೆ ಮುಹೂರ್ತ

ಕಾಸರಗೋಡು: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ರಾಜಾಂಗಣ ದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ೭೧ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಗಣಪತಿ ವಿಗ್ರಹ ತಯಾರಿ ಮುಹೂರ್ತ ಉಳಿಯತ್ತಡ್ಕ ಬ್ರಹ್ಮಶ್ರೀ ಕೇಶವ ಆಚಾರ್ಯರ ನಿವಾಸದಲ್ಲಿ ನೆರವೇರಿತು.ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ್ ವಿಟ್ಲ, ಅಧ್ಯಕ್ಷ ಸತೀಶ್ ಕಾಮತ್, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ಕೆ.ಆರ್, ಕೋಶಾಧಿಕಾರಿ ಉಪೇಂದ್ರ ಆಚಾರ್ಯ, ಗಣೇಶೋತ್ಸವ ಸಮಿತಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕಮಲಾಕ್ಷನ್ ಕೆ.ಎನ್, ಟ್ರಸ್ಟ್ ಖಜಾಂಚಿ ಸಂದೀಪ್ ಭಟ್, ಸಮಿತಿ ಸದಸ್ಯರಾದ …

ಬಿಜೆಪಿ ಸಂಘಟನಾ ಮಂಡಲ  ಅಧ್ಯಯನ ಶಿಬಿರ ಇಂದಿನಿಂದ

ಕಾಸರಗೋಡು: ಜಿಲ್ಲೆಯ ವಿವಿಧ ಸಂಘಟನಾ ಮಂಡಲಗಳಲ್ಲಿ ಬಿಜೆಪಿ ಮಂಡಲ ಸಮಿತಿಗಳ ಆಶ್ರಯ ದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ್ ಮಹಾ ಅಭಿಯಾನದ ಅಧ್ಯಯನ ಶಿಬಿರಗಳು ಇಂದು, ನಾಳೆ ಜರಗಲಿವೆ.ಕುಂಬಳೆ ಸಂಘಟನಾ ಮಂ ಡಲದ ಅಧ್ಯಯನ ಶಿಬಿರ ಎಣ್ಮಕಜೆ ಪಂಚಾಯತ್‌ನ ಪೆರ್ಲ ಶಂಕರ ಸದನದಲ್ಲಿ ನಡೆಯಲಿದೆ. ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನವ್ಯಾ ಹರಿದಾಸ್ ಉದ್ಘಾಟಿಸುವರು. ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಕಲ್ಲಿಕೋಟೆ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಪಾಲ್ಗೊಳ್ಳುವರು. ತೃಕರಿಪುರ ಸಂಘಟನಾ ಮಂಡಲದ ಅಧ್ಯಯನ ಶಿಬಿರ …

ಕಾಸರಗೋಡು ಸಿಟಿ ಗೋಲ್ಡ್‌ನಲ್ಲಿ ಹಿಸ್ತಾರ ಪ್ರೀಮಿಯಂ ಜ್ಯುವೆಲ್ಲರಿ ಎಕ್ಸಿಬಿಶನ್ ಆರಂಭ

ಕಾಸರಗೋಡು: ಆಭರಣ ಪ್ರೇಮಿಗಳು ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿದ್ದ ‘ಹಿಸ್ತಾರ’ ಪ್ರೀಮಿಯಂ ಜ್ಯುವೆಲ್ಲರಿ ಎಕ್ಸಿಬಿಶನ್ ಕಾಸರಗೋಡು ಸಿಟಿ ಗೋಲ್ಡ್ ಶೋರೂಂನಲ್ಲಿ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಗಣ್ಯರಾದ ಖದೀಜ ಜಾಫರ್, ಜಾಫರ್ ಕಮಾಲ್ ಎಂಬಿವರು ಜಂಟಿಯಾಗಿ ಉದ್ಘಾಟನೆ ನಿರ್ವಹಿಸಿದರು. ಸಿಟಿ ಗೋಲ್ಡ್ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಾಂಚ್ ಮೆನೇಜರ್ ತಂಜೀದ್, ನಿರ್ದೇಶಕರಾದ ಇರ್ಶಾದ್, ನೌಶಾದ್, ದಿಲ್ಶಾದ್ ಭಾಗವಹಿಸಿದರು. ಎಕ್ಸಿಬಿಶನ್‌ನ ಮೊದಲ ಚಿನ್ನ ಮಾರಾಟವನ್ನು ಸಿ.ಎಂ. ಅಬ್ದುಲ್ ರಹಿಮಾನ್, ದ್ವಿತೀಯ ಚಿನ್ನಾಭರಣ ಮಾರಾಟವನ್ನು ಶುಹೈಬ್, ನಾಸಿಯಾ ಎಂಬಿವರಿಗೆ ನೀಡಿ ನಿರ್ವಹಿಸಿದರು. ಅಲ್ಲದೆ …

ನಾರಾಯಣಿ ಅಮ್ಮ ನಿಧನ

ಬೋವಿಕ್ಕಾನ: ಮಲ್ಲ ಬಾದಿಯಡ್ಕದ ಕಣ್ಣನ್ ನಾಯರ್‌ರ ಪತ್ನಿ ನಾರಾಯಣಿ ಅಮ್ಮ (85) ನಿಧನ ಹೊಂದಿದರು. ಮೃತರು ಮಕ್ಕಳಾದ ಕಮಲಾಕ್ಷಿ, ಬಾಲಕೃಷ್ಣನ್, ಶಾಂತ ಕುಮಾರಿ, ನಾರಾಯಣನ್, ಅಳಿಯ-ಸೊಸೆಯಂದಿರಾದ ಮಧು ಮುಳಿಯಾರು, ವತ್ಸಲ, ಶ್ರೀಲತ (ಕಾರವಲ್ ಆನ್‌ಲೈನ್ ಮೀಡಿಯಾ), ಸಹೋದರಿಯರಾದ ಕಾರ್ತ್ಯಾಯಿನಿ, ಗೀತ (ತಂಬಾಯಿ), ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಸಹೋದರ ಮಾಧವನ್ ನಾಯರ್, ಇತರ ಸಹೋದರಿಯರಾದ ಶಾರದ, ಜಾನಕಿ, ಮೀನಾಕ್ಷಿ ಎಂಬಿವರು ಈ ಹಿಂದ ನಿಧನಹೊಂದಿದ್ದಾರೆ.

ಮುಹಮ್ಮದ್ ಹಾಜಿ ನಿಧನ

ಕುಂಬಳೆ: ಕುಂಬಳೆಯ ಹಿರಿಯ ವ್ಯಾಪಾರಿ ಹಾಗೂ ಬದರಿಯಾ ನಗರ ವೆಲ್ಫೇರ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಮುಹಮ್ಮದ್ ಹಾಜಿ (67) ನಿಧನ ಹೊಂದಿದರು.  ಮೃತರು ಪತ್ನಿ ಫಾತಿಮಾ, ಮಕ್ಕಳಾದ ಸಾಬಿರ, ಜಾಫರ್, ಮುಸ್ತಫ, ಶಾಕೀರ, ಸಲಾಹುದ್ದೀನ್, ಶುಹೈಬ್, ಶಮೀಮ್, ಆಸಿಫ್, ಶಿಮ್ನಾ, ಸಹೋದರ ಮೊದೀನ್, ಸಹೋದರಿ ನಫೀಸ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.