ಧಾರಾಕಾರ ಮಳೆ: ಗುಡ್ಡೆ ಕುಸಿದು ಬಾವಿ ಮುಚ್ಚುಗಡೆ; ಮನೆಗೆ ಹಾನಿ

ಮಂಜೇಶ್ವರ: ಧಾರಾಕಾರ ಮಳೆಗೆ ಬಂಗ್ರಮಂಜೇಶ್ವರದಲ್ಲಿ ಗುಡ್ಡೆ ಕುಸಿದು ಬಾವಿ ಮುಚ್ಚುಗಡೆಗೊಂ ಡಿದೆ. ಇದೇ ವೇಳೆ ಮಣ್ಣು ಕುಸಿದುಬಿದ್ದು ಮನೆಗೂ  ಹಾನಿ ಸಂಭವಿಸಿದೆ.    ಕನಿಲ ಭಂಡಾರ ನಿಲಯದ ಪುರುಷೋತ್ತಮ ಎಂಬವರ ಮನೆಗೆ ಸಮೀಪದ ಗುಡ್ಡೆ ಕುಸಿದುಬಿದ್ದಿದೆ.   ನಿನ್ನೆ ಮುಂಜಾನೆ ಗುಡ್ಡೆ ಕುಸಿದುಬಿದ್ದು ಮನೆ ಮುಂಭಾಗದ ಲ್ಲಿರುವ ಬಾವಿ  ಪೂರ್ಣವಾಗಿ ಮುಚ್ಚುಗಡೆಗೊಂಡಿದೆ. ಇಂದು ಮುಂಜಾನೆ ಗುಡ್ಡೆ ಕುಸಿದು ಮನೆಮೇಲೆ ಬಿದ್ದು ಅಡುಗೆಕೋಣೆಗೆ ಹಾನಿ ಸಂಭವಿಸಿದೆ.   ಇದರಿಂದ ಎಂಟು ಮಂದಿಯ ಕುಟುಂಬವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದ. ಇದೇ ವೇಳೆ ಸಮೀಪದ ಇತರ …

ಹಲಸಿನ ಮರದಿಂದ ಬಿದ್ದು ಗಾಯಗೊಂಡಿದ್ದ ಬಸ್ ಚಾಲಕ ಮೃತ್ಯು

ಉಪ್ಪಳ: ವರ್ಕಾಡಿ ನೀರೊಳಿಕೆಯಲ್ಲಿ ಹಲಸಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಸ್ ಚಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಂಗಳೂರು ಕುಲಶೇಖರ ಕಕ್ಕೆಬೆಟ್ಟು ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುವ ದಿ| ಕೃಷ್ಣ ನಾಯಕ್‌ರ ಪುತ್ರ ಅವಿನಾಶ್ ನಾಯಕ್ (32) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಮಂಗಳೂರು-ಬೆಳಗಾವಿ ರೂಟ್‌ನಲ್ಲಿ  ಸಂಚರಿಸುವ ಖಾಸಗಿ ಬಸ್ ಚಾಲಕನಾಗಿದ್ದರು. ಇವರು ವರ್ಕಾಡಿ ನೀರೊಳಿಕೆಯಲ್ಲಿರುವ ಪತ್ನಿ ಮನೆಗೆ ಜೂನ್ ೧೪ರಂದು ಬಂದಿದ್ದರು. ಅಂದು ಮಧ್ಯಾಹ್ನ ಅಲ್ಲಿ ಹಲಸಿನ ಕಾಯಿ ಕೊಯ್ಯಲೆಂದು ಮರವೇರಿದ್ದರು. ಈ …

ಗಾಳಿ ಮಳೆಗೆ ಕುಸಿದ ಮನೆ: ಒಳಗೆ ಸಿಲುಕಿಕೊಂಡ ತಾಯಿ, ಪುತ್ರಿಯ ರಕ್ಷಣೆ

ಕಾಸರಗೋಡು: ಗಾಳಿ ಹಾಗೂ ಮಳೆಗೆ   ಕರಿಂದಳ ಕಾಟಿಪೊಯಿಲ್‌ನಲ್ಲಿ ಮನೆ ಸಂಪೂರ್ಣ ಹಾನಿಯಾಗಿದೆ. ನಿದ್ರಿಸುತ್ತಿದ್ದ ತಾಯಿ ಹಾಗೂ ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ  ಪಾರಾಗಿದ್ದಾರೆ. ಇಂದು ಮುಂಜಾನೆ 3 ಗಂಟೆಗೆ ಮನೆ ಕುಸಿದುಬಿದ್ದಿದೆ. ಕಾಟಿಪೊಯಿಲ್‌ನ ಕೆ.ಸಿ.ಸುಂದರನ್‌ರ ಹೆಂಚು ಹಾಸಿದ ಮನೆ ಗಾಳಿಗೆ ಕುಸಿದುಬಿದ್ದಿದ್ದು ಇದರೊಳಗೆ ಸಿಲುಕಿಕೊಂಡ ಸುಂದರನ್‌ನ ಪತ್ನಿ ಮಿನಿ, ಪುತ್ರಿ ಶ್ರೀನಂದ ಎಂಬಿವರನ್ನು ನೆರೆಮನೆ ನಿವಾಸಿಗಳು ರಕ್ಷಿಸಿದರು.  ನೆರೆಮನೆ ನಿವಾಸಿಯಾದ ಮಣಿ ಯಾನೆ ರಾಧಾಕೃಷ್ಣನ್ ಕುಸಿದುಬಿದ್ದ ಮನೆಯೊಳಗೆ ನುಸುಳಿ ಸಾಹಸಿಕವಾಗಿ ಒಳಗಿದ್ದವರನ್ನು ರಕ್ಷಿಸಿದ್ದಾರೆ. ಸುಂದರನ್ ಸೆಕ್ಯುರಿಟಿ ನೌಕರನಾಗಿದ್ದು ಈವೇಳೆ …

ನೀಟ್ ಪರೀಕ್ಷೆ ಅವ್ಯವಹಾರ: ಉಪವಾಸ ಸತ್ಯಾಗ್ರಹ ನಿರತ ವಾಂಗ್ಚುಕ್ ಆಸ್ಪತ್ರೆಗೆ; ಪ್ರತಿಭಟನೆಗಾರರನ್ನು ತೆರವುಗೊಳಿಸಲೆತ್ನಿಸಿದ ಪೊಲೀಸರು

ನವದೆಹಲಿ: ನೀಟ್ ಪರೀಕ್ಷೆ ಯಲ್ಲಿ ನಡೆದ ಅವ್ಯವಹಾರದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂಬ ಬೇಡಿಕೆ ಮುಂದಿರಿಸಿ ಕಾಕ್ರೋಚ್ ಜನತಾಪಾರ್ಟಿ (ಸಿಜೆಪಿ) ದಿಲ್ಲಿಯ ಜಂತರ್ ಮಂಥರ್‌ನಲ್ಲಿ ನಡೆಸುವ ಚಳವಳಿಗೆ ಬೆಂಬಲ ಸೂಚಿಸಿ ಅಲ್ಲಿ ಕಳೆದ ೨೧ ದಿನಗಳಿಂದ ಅನಿರ್ಧಿ ಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದ ಲಡಾಕ್‌ನ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಪೊಲೀಸರು ಪ್ರತಿಭಟನಾ ಸ್ಥಳದಿಂದ ದೆಹಲಿಯ ರಾಮ್‌ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವೈದ್ಯರ ಸಲಹೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಇಂತಹ …

ಮಸೀದಿಯ ಕಾಣಿಕೆ ಹುಂಡಿ ಕಳವು: ಆರೋಪಿಗಾಗಿ ಶೋಧ

ಹೊಸದುರ್ಗ: ಕೋಟಚ್ಚೇರಿ ಟ್ರಾಫಿಕ್ ಸರ್ಕಲ್ ಸಮೀಪದ  ಬದ್ರಿಯಾ ಮಸೀದಿಯಲ್ಲಿ ಸ್ಥಾಪಿಸಿದ್ದ ಕಾಣಿಕೆ ಹುಂಡಿ  ಕೆಡವಿ ಹಣ ಕಳವು ನಡೆಸಿದ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.  ಮಸೀದಿ ಪರಿಸರದಲ್ಲಿ ಸ್ಥಾಪಿಸಿದ್ದ  ಕ್ಯಾಮರಾದಲ್ಲಿ ಆರೋಪಿಯೆಂದು ಸಂಶಯಿಸುವ ವ್ಯಕ್ತಿಯ   ದೃಶ್ಯಗಳು ಸೆರೆಯಾಗಿದ್ದು ಅದನ್ನು  ಪೊಲೀಸರು ಬಹಿರಂಗಪಡಿಸಿದ್ದಾರೆ.  ಚಿತ್ರದಲ್ಲಿ ಕಾಣುವ ವ್ಯಕ್ತಿಯ ಕುರಿತು ಮಾಹಿತಿ ಲಭಿಸಿದವರು ಸಮೀಪದ ಪೊಲೀಸ್ ಠಾಣೆಗೆ  ಅಥವಾ ಹೊಸದುರ್ಗ ಠಾಣೆಗೆ ಮಾಹಿತಿ ನೀಡಬೇಕಾಗಿ ಪೊಲೀಸರು ವಿನಂತಿಸಿದ್ದಾರೆ.

ಉದ್ಯಾವರದಲ್ಲಿ ವ್ಯಾಯಾಮ ಶಾಲೆಯಿಂದ ಹಣ ಕಳವು

ಮಂಜೇಶ್ವರ: ಉದ್ಯಾವರ ಮಾಡದಲ್ಲಿರುವ ಶ್ರೀ ಅರಸುಕೃಪಾ ಜೈ ವೀರಮಾರುತಿ ವ್ಯಾಯಾಮ ಶಾಲೆಯಿಂದ ಕಳವು ನಡೆದಿದೆ. ನಿನ್ನೆ ರಾತ್ರಿ  ವ್ಯಾಯಾಮ ಶಾಲೆಯ ಬಾಗಿಲು ಮುರಿದು ಕಳ್ಳರು ಒಳಗೆ ನುಗ್ಗಿ  ಕಳವು ನಡೆಸಿರುವುದಾಗಿ ತಿಳಿದು ಬಂದಿದೆ.  ವ್ಯಾಯಾಮ ಶಾಲೆಯೊ ಳಗಿದ್ದ ಕಾಣಿಕೆ ಹುಂಡಿಯನ್ನು ಕಳವು ನಡೆಸಿದ ಕಳ್ಳರು ಬಳಿಕ ಅದರಿಂದ ಹಣವನ್ನು ದೋಚಿ ದ್ದಾರೆ. ಪಾತ್ರೆ  ಸಮೀಪದ ಪೊದೆಯೊ ಳಗೆ ಪತ್ತೆಯಾಗಿದೆ. ಇದರಲ್ಲಿ ಸುಮಾರು ೫೦೦೦ ರೂಪಾಯಿಗಳಿದ್ದಿರಬ ಹುದೆಂದು ಅಂದಾಜಿಸಲಾಗಿದೆ. ಇಂದು ಬೆಳಿಗ್ಗೆ ವ್ಯಾಯಾಮ ಶಾಲೆಯ ಪದಾಧಿಕಾರಿಗಳು ಅಲ್ಲಿಗೆ ತಲುಪಿದಾಗಲೇ …

ಶಸ್ತ್ರಚಿಕಿತ್ಸೆ ಮಧ್ಯೆ ಬಾಲಕ ಮೃತ್ಯು  ಹೃದಯಾಘಾತ ಸಾವಿಗೆ ಕಾರಣವೆಂದು ಮರಣೋತ್ತರ ಪರೀಕ್ಷಾ ವರದಿ

ಕಾಸರಗೋಡು:  ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಧ್ಯೆ ೯ ವರ್ಷದ ಬಾಲಕ ಮೃತಪಟ್ಟ ಘಟನೆಯಲ್ಲಿ ಮರಣೋತ್ತರ ಪರೀಕ್ಷಾ ಪ್ರಾಥಮಿಕ ವರದಿ ಲಭ್ಯವಾಗಿದೆ. ಬೇಡಗಂ  ತಲೇಕುನ್ನು ನಿವಾಸಿ ಮುಹಮ್ಮದ್ ಇಯಾಸ್ ಎಂಬ ಬಾಲಕ ಮೃತಪಟ್ಟಿರುವುದು ಶಸ್ತ್ರಚಿಕಿತ್ಸೆ ಮಧ್ಯೆ ಉಂಟಾದ ಹೃದಯಾಘಾತ ದಿಂದಾಗಿದೆಯೆಂದು ಪ್ರಾಥಮಿಕ ವರದಿಯಲ್ಲಿ ಸೂಚಿಸಲಾ ಗಿದೆ. ಇದೇ ವೇಳೆ ಶಸ್ತ್ರಚಿಕಿತ್ಸೆ ವೇಳೆ ಲೋಪ ಅಥವಾ  ತಾಂತ್ರಿಕ ಲೋಪ ಪತ್ತೆಹಚ್ಚಲು ಸಾಧ್ಯವಾಗಿಲ್ಲವೆಂದು ತನಿಖಾಧಿಕಾರಿಗೆ ಲಭಿಸಿದ ಪ್ರಾಥಮಿಕ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸ್ ಸರ್ಜನ್ ತನಿಖಾ ತಂಡಕ್ಕೆ ನೀಡಿದ …

ಮಧೂರು: ಬೀದಿಬದಿ ವಿಶ್ರಾಂತಿ ಕೇಂದ್ರ ತೆರೆಯಲು ವ್ಯಾಪಾರಿಗಳ ಆಗ್ರಹ

ಮಧೂರು: ಮಧೂರು ಪಂಚಾಯತ್ ವತಿಯಿಂದ ಮಧೂರು ಕ್ಷೇತ್ರ ಪರಿಸರದಲ್ಲಿ ನಿರ್ಮಿಸಿದ ಬೀದಿಬದಿ ವಿಶ್ರಾಂತಿ ಕೇಂದ್ರವನ್ನು ತೆರೆದು ಕಾರ್ಯಾಚರಿಸುವಂತೆ ಮಾಡಬೇಕೆಂದು ಮಧೂರು ವ್ಯಾಪಾರಿ ವ್ಯವಸಾಯಿ ಘಟಕ ಸಮ್ಮೇಳನ ಆಗ್ರಹಿಸಿದೆ. ಮಧೂರು ಕ್ಷೇತ್ರಕ್ಕೆ ತಲುಪುವ ಭಕ್ತರಿಗೆ ಇದು ಬಹಳ ಉಪಪ್ರದವಾಗಲಿದ್ದು, ಈಗ ವಿಶ್ರಾಂತಿ ಕೇಂದ್ರವಿಲ್ಲದೆ ಸಮಸ್ಯೆಯಾಗಿದೆಯೆಂದು ವ್ಯಾಪಾರಿಗಳು ತಿಳಿಸಿದ್ದಾರೆ.

ರಾಮಾಯಣ ಮಾಸಾಚರಣೆ ಮನೆ ಮನೆ ಭಜನಾ ಸಂಕೀರ್ತನಕ್ಕೆ ಚಾಲನೆ

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ಸಮಿತಿ ಆಶ್ರಯದಲ್ಲಿ ರಾಮಾಯಣ ಮಸಾಚರಣೆಯ ಅಂಗವಾಗಿ ಒಂದು ತಿಂಗಳ ಪರ್ಯಂತ ಮನೆ ಮನೆ ಭಜನಾ ಸಂಕೀರ್ತಾನಾ ಯಾನ ಆರಂಭಗೊAಡಿತು. ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಪರಿಸರದ ಹಿರಿಯ ಭಜಕರಾದ ಸರ್ವೋತ್ತಮ ಕಾಮತ್‌ರ ನಿವಾಸದಲ್ಲಿ ಕಾಮತ್ ದಂಪತಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಕೆ. ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಕೆ. ಎನ್. ರಾಮಕೃಷ್ಣ ಹೊಳ್ಳ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ …

ವಿದ್ಯುತ್ ಕಡಿತ: ಡಿವೈಎಫ್‌ಐಯಿಂದ ಉಪ್ಪಳದಲ್ಲಿ ಪ್ರತಿಭಟನೆ

ಉಪ್ಪಳ: ವಿದ್ಯುತ್ ಕಡಿತ ದಿನವೂ  ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಜನವಿರೋಧಿ ನೀತಿ ವಿರುದ್ಧ ಡಿವೈಎಫ್‌ಐ ಮಂಜೇಶ್ವರ ಬ್ಲೋಕ್ ಸಮಿತಿ ನೇತೃತ್ವದಲ್ಲಿ ನಿನ್ನೆ ಉಪ್ಪಳ ಕೆಎಸ್‌ಇಬಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ತಾಲೂಕು ಕಚೇರಿ ಆವರಣದಿಂದ ಆರಂಭಗೊಂಡ ಮೆರವಣಿಗೆಯನ್ನು ವಿದ್ಯುತ್ ಕಚೇರಿ ಎದುರಲ್ಲಿ ಪೊಲೀಸರು ತಡೆದರು. ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಾದಿಕ್ ಚೆರುಗೋಳಿ ಉದ್ಘಾಟಿಸಿದರು. ದೀಕ್ಷಿತ್ ಉಪ್ಪಳ ಅಧ್ಯಕ್ಷತೆ ವಹಿಸಿ ದರು. ಬ್ಲೋಕ್ ಕಾರ್ಯದರ್ಶಿ ಉದಯ ಸಿ.ಎಚ್, ಉಪಾಧ್ಯಕ್ಷ ರಮೇಶ್ ಟಿ, ಸದಸ್ಯರಾದ ನೌಶಾದ್, ಮಹೇಶ್ ಕುಮಾರ್,ಇಕ್ಭಾಲ್ ಮಾತನಾಡಿದರು. …