ದೇರಂಬಳ ಹೊಳೆಗೆ ಬಿದ್ದ ಯುವತಿಯ ಪ್ರಾಣ ರಕ್ಷಿಸಿದ ಯುವಕ: ಹೊಳೆಗೆ ಸಂಕ ಬೇಡಿಕೆಗೆ ಸ್ಪಂದಿಸದ ಅಧಿಕಾರಿಗಳು

ಉಪ್ಪಳ: ಅಡಿಕೆ ಮರದ ಸಂಕದ ಮೇಲೆ  ನಡೆದುಹೋಗುತ್ತಿದ್ದಾಗ  ಆಯತಪ್ಪಿ ಹೊಳೆಗೆ ಬಿದ್ದ ಯುವತಿಯನ್ನು ಯುವಕನೋರ್ವ ಅತೀ ಸಾಹಸದಿಂದ ರಕ್ಷಿಸಿದ ಘಟನೆ ನಡೆದಿದೆ. ಮೀಂಜ ಬಳಿಯ ದೇರಂಬಳದಲ್ಲಿ ನಿನ್ನೆ ಸಂಜೆ ಸುಮಾರು 4 ಗಂಟೆ ವೇಳೆ ಈ ಘಟನೆ ನಡೆದಿದೆ. ದೇರಂಬಳ ತಜಂಕುರಿಯ ಐತಪ್ಪ  ಪೂಜಾರಿಯವರ ಪುತ್ರಿ ಸುಶ್ಮಿತಾ (23) ಹೊಳೆಗೆ ಬಿದ್ದಿದ್ದು, ಈಕೆಯನ್ನು ಸ್ಥಳೀಯ ನಿವಾಸಿ ಉದಯಕುಮಾರ್ ಶೆಟ್ಟಿ (40) ಎಂಬವರು ಅತೀ ಸಾಹಸದಿಂದ ರಕ್ಷಿಸಿದ್ದಾರೆ. ಪುತ್ತೂರಿನ ಕಾಲೇಜಿನಲ್ಲಿ  ಕಲಿಯುತ್ತಿರುವ ಸಹೋದರಿ ನಿಶ್ಮಿತಾಳನ್ನು ಜೋಡುಕಲ್ಲಿನಿಂದ ಕರೆದುಕೊಂಡು  ಮನೆಗೆ  …

ವಾಹನ ತಪಾಸಣೆ ವೇಳೆ ಪೊಲೀಸರನ್ನು ಕಡಿದು ಕೊಲೆಗೈಯ್ಯಲು ಯತ್ನ: ನೆಕ್ರಾಜೆ, ಕಲ್ಲೂರಾವಿ ನಿವಾಸಿಗಳು ಸೆರೆ

ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಮಧ್ಯೆ ಪೊಲೀಸರನ್ನು ಕಡಿದು ಕೊಲ್ಲಲು ಯತ್ನ ನಡೆದಿದೆ. ಘಟನೆಯಲ್ಲಿ ನರಹತ್ಯಾ ಯತ್ನಕ್ಕೆ ಕೇಸು ದಾಖಲಿಸಿದ ಪೊಲೀಸರು ಮೂರು ಮಂದಿಯನ್ನು ಬಂಧಿಸಿದ್ದಾರೆ. ಬದಿಯಡ್ಕ, ನೆಕ್ರಾಜೆ ನಿವಾಸಿ ಗಳಾದ ಸಫ್ವಾನ್, ಅಮೀರ್, ಕಾಞಂಗಾಡ್ ಕಲ್ಲೂರಾವಿಯ ಮುಹಮ್ಮದ್ ಶಮೀನ್ ಎಂಬವರನ್ನು ಬಂಧಿಸಲಾಗಿದೆ. ಎ.ಆರ್ ಕ್ಯಾಂಪ್‌ನ ಪೊಲೀಸ್ ಸಂದೀಪ್‌ರಿಗೆ ಗಾಯವುಂ ಟಾಗಿದೆ. ಇಂದು ಮುಂಜಾನೆ 1.30ರ ವೇಳೆ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಅಕ್ರಮ ಘಟನೆ ನಡೆದಿದೆ. ಕಂಟ್ರೋಲ್ …

ಬೇಳ ಗ್ರಾಮ ಕಚೇರಿಗೆ ಕಳ್ಳರ ದಾಳಿ

ಬದಿಯಡ್ಕ: ನೀರ್ಚಾಲಿನಲ್ಲಿರುವ ಬೇಳ ಗ್ರಾಮ ಕಚೇರಿಗೆ ಕಳ್ಳರು ನುಗ್ಗಿದ್ದಾರೆ. ನಿನ್ನೆ ರಾತ್ರಿ ಕಚೇರಿಗೆ ಕಳ್ಳರು ನುಗ್ಗಿರುವು ದಾಗಿ ಅಂದಾಜಿಸಲಾಗಿದೆ. ಕಚೇರಿ ಯಲ್ಲಿದ್ದ ಮೂರು ಲ್ಯಾಪ್‌ಟೋಪ್ ಗಳನ್ನು  ಕಳವು   ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಬೇರೆ ಯಾವುದಾದರೂ ದಾಖಲೆಪತ್ರಗಳನ್ನು ಕಳವು ನಡೆಸಿದ್ದಾರೆಯೇ ಎಂಬುವುದನ್ನು ಇನ್ನಷ್ಟೇ ತಿಳಿಯಬೇಕಾಗಿದೆ. ಕಳವುಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಇಲ್ಲಿನ ಗ್ರಾಮಾಧಿಕಾರಿ ಶಶಿ ಎಂಬವರು ಇಂದು ಬೆಳಿಗ್ಗೆ ಕಚೇರಿಗೆ ತಲುಪಿದಾಗಲೇ ಕಳವು ವಿಷಯ ಅರಿವಿಗೆ ಬಂದಿದೆ. ಕಚೇರಿಯ …

ಕನ್ಯಪ್ಪಾಡಿಯಲ್ಲಿ ಅಂಗಡಿ ಮುಂದೆ ಮಲಗಿದ್ದ ಹಸುಗಳನ್ನು ಕಳವುಗೈದ ಇನ್ನೋರ್ವ ಆರೋಪಿ ಸೆರೆ: ಬಂಧಿತರ ಸಂಖ್ಯೆ ಮೂರಕ್ಕೆ

ಬದಿಯಡ್ಕ: ಕನ್ಯಪ್ಪಾಡಿಯಲ್ಲಿ ಅಂಗಡಿಯ ಮುಂದೆ ಮಲಗಿದ್ದ ಎರಡು ಹಸುಗಳನ್ನು ಕಳವುಗೈದು ಕಾರಿನಲ್ಲಿ  ಸಾಗಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬಂಧಿಸುವಲ್ಲಿ ಬದಿಯಡ್ಕ ಪೊಲೀಸರು ಯಶಸ್ವಿಯಾಗಿದ್ದಾರೆ.  ಮಂಗಳೂರು ಜೋಕಟ್ಟೆಯ ಮುಹಮ್ಮದ್ ಅಶ್ಫಾಕ್  (30) ಎಂಬಾತನನ್ನು ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ ಆರ್.ಪಿ. ಅನೂಪ್‌ಕೃಷ್ಣನ್ ಹಾಗೂ ತಂಡ ಬಂಧಿಸಿದೆ.  ಮತ್ತಿಬ್ಬರು ಆರೋಪಿಗಳಾದ ಜೋಕಟ್ಟೆಯ ರಾಸಿಕ್ (26), ಉಳ್ಳಾಲ ಅಳಿಕೆಯ ಮುಹಮ್ಮದ್ ಇರ್ಭಾಸ್ (25) ಎಂಬಿವರನ್ನು ಜುಲೈ 4ರಂದು ಬಂಧಿಸಲಾಗಿತ್ತು. ಜೂನ್ ೧೬ರಂದು ಮುಂಜಾನೆ 1 ಗಂಟೆ ವೇಳೆ ಕನ್ಯಪ್ಪಾಡಿ ರಹ್ಮತ್ ಮಂಜಿಲ್‌ನ ಕೆ.ಎಂ. …

ಉದ್ಯಾವರ ಮಾಡದ ವ್ಯಾಯಾಮ ಶಾಲೆಯಿಂದ ಕಳವು: ಆರೋಪಿಗಳಿಗಾಗಿ ತನಿಖೆ ತೀವ್ರ

ಮಂಜೇಶ್ವರ: ಉದ್ಯಾವರಮಾಡ ದಲ್ಲಿರುವ ಶ್ರೀ ಅರಸುಕೃಪಾ ಜೈ ವೀರಮಾರುತಿ ವ್ಯಾಯಾಮ ಶಾಲೆಯಿಂದ ಕಾಣಿಕೆಹುಂಡಿ ಕಳವುಗೈದ  ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಲುಪಿ ಪರಿಶೀಲನೆ ನಡೆಸಿದೆ. ವ್ಯಾಯಾಮ ಶಾಲೆಯ ಸಿಸಿ ಕ್ಯಾಮರಾದಲ್ಲಿ ಸೆರೆ ಯಾದ  ವ್ಯಕ್ತಿಯನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ 17ರಂದು  ರಾತ್ರಿ ವ್ಯಾಯಾಮ ಶಾಲೆಯಿಂದ ಕಳವು ನಡೆದಿದೆ. ವ್ಯಾಯಾಮ ಶಾಲೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಅಲ್ಲಿನ ಕಾಣಿಕೆಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ.   ಹುಂಡಿಯ ಪಾತ್ರೆ  …

ಬೇಳದಿಂದ ಬೈಕ್ ಕಳವು ನಡೆಸಿದ ಇಬ್ಬರು ಆರೋಪಿಗಳ ಬಂಧನ

ನೀರ್ಚಾಲು: ಬೇಳ ಚಿಮಿಣಿಯಡ್ಕದಲ್ಲಿ ಮನೆ ಸಮೀಪ ನಿಲ್ಲಿಸಿದ್ದ ಬೈಕ್ ಕಳವುಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗ ಳನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮಧೂರು ಪಟ್ಲ ಕೊಲ್ಯ ನಿವಾಸಿ ಗಣೇಶ್ ಯಾನೆ ಅಪ್ಪು, ಪೆರಿಯಡ್ಕ ಮನ್ಸೂರ್ ಹೌಸ್‌ನ ಮನ್ಸೂರ್ ಎಂಬಿವರನ್ನು ಇನ್‌ಸ್ಪೆಕ್ಟರ್ ಆರ್.ಪಿ. ಅನೂಪ್‌ಕೃಷ್ಣರ ನೇತೃತ್ವ ದಲ್ಲಿರುವ ಪೊಲೀಸ್ ತಂಡ ಬಂಧಿಸಿದೆ. ಈತಿಂಗಳ ೮ರಂದು ರಾತ್ರಿ ಚಿಮಿಣಿಯಡ್ಕದ ಸಿ.ಎಚ್. ಪ್ರಣಯ್ ಎಂಬವರ ತಂದೆಯ ಮಾಲಕತ್ವದ ಲ್ಲಿರುವ ಬೈಕ್ ಕಳವಿಗೀಡಾಗಿತ್ತು. ಮನೆಯ ಹಿತ್ತಿಲಲ್ಲಿ ನಿಲ್ಲಿಸಿದ್ದ ಬೈಕ್‌ನ್ನು  ಆರೋಪಿಗಳು ಕಳವು ನಡೆಸಿದ್ದರು. ಈ …

ಮಂಜೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವ ನೂತನ ಪದಾಧಿಕಾರಿಗಳ ಆಯ್ಕೆ

ಹೊಸಂಗಡಿ: ಮಂಜೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮಹಾಸಭೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಿತು. ಸಭೆಯಲ್ಲಿ ವರದಿ ವಾಚನ, 45ನೇ ವರ್ಷದ ಲೆಕ್ಕ ಪತ್ರ ಮಂಡನೆ ಹಾಗೂ ನೂತನ ಸಮಿತಿ ಆಯ್ಕೆ ನೆರವೇರಿತು. ನೂತನ ಅಧ್ಯಕ್ಷರಾಗಿ ಯಾದವ ಬಡಾಜೆ, ಪ್ರ. ಕಾರ್ಯದರ್ಶಿಯಾಗಿ ಕಮಲಾಕ್ಷ ತೂಮಿನಾಡು, ಕೋಶಾಧಿಕಾರಿಯಾಗಿ ಅಶೋಕ್ ದೇವಾಡಿಗ ಆಯ್ಕೆಯಾ ದÀರು. ಗಣೇಶೋತ್ಸವ ಸೆಪ್ಟೆಂಬರ್ 14ರಿಂದ 17ರ ತನಕ ನಡೆಯಲಿದೆ.

ನಿಯಂತ್ರಣ ತಪ್ಪಿ ಕಾರು ಟೈಲರ್ ಅಂಗಡಿಗೆ ಢಿಕ್ಕಿ: ಅಪಾಯದಿಂದ ಪಾರು

ಮಂಜೇಶ್ವರ: ಕಟ್ಟೆಬಜಾರ್ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತಿದ್ದ ಟೈಲರ್ ಅಂಗಡಿಗೆ ಹಾಗೂ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಇಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಶನಿವಾರ ಮಧ್ಯಾಹ್ನ ಹೊಸಂಗಡಿಯಿAದ ಬಂಗ್ರಮAಜೇಶ್ವರ ದಾರಿಯಾಗಿ ತೆರಳುತ್ತಿದ್ದ ಕಾರು ಕಟ್ಟೆ ಬಜಾರ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪರಿಸರದಲ್ಲಿ ಕಾರ್ಯಚರಿಸುತ್ತಿದ್ದ ಕಡಂಬಾರ್ ನಿವಾಸಿ ಫೆಲಿಕ್ಸ್ ಡಿಸೋಜಾರ ಅಂಗಡಿಯ ಗೋಡೆಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಅಂಗಡಿ ಬಳಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ಗೂ ಡಿಕ್ಕಿಹೊಡೆದಿದೆ. ಇದರಿಂದ ಅಂಗಡಿ, ಸ್ಕೂಟರ್, ಕಾರು …

ಕುಂಬಳೆ ಭಾಸ್ಕರನಗರದಲ್ಲಿ ಮತ್ತೆ ಕಾರು ತೋಡಿಗೆ ಮಗುಚಿ ಮೂವರಿಗೆ ಗಾಯ

ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ  ಕುಂಬಳೆ ಸಮೀಪ ಭಾಸ್ಕರನಗರದಲ್ಲಿ ಪದೇ ಪದೇ ವಾಹನಗಳು ಅಪಘಾತಕ್ಕೀಡಾಗು ತ್ತಿರುವುದು ಪ್ರಯಾಣಿಕರು ಹಾಗೂ ನಾಗರಿಕರಿಗೆ ಆತಂಕ ಮೂಡಿಸಿದೆ.  ನಿನ್ನೆ ಮಧ್ಯಾಹ್ನವೂ ಇಲ್ಲಿ ಕಾರೊಂದು ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.  ನಿಯಂತ್ರಣ ತಪ್ಪಿದ ಕಾರು  ತೋಡಿಗೆ ಮಗುಚಿಬಿದ್ದಿದೆ. ಇದರಿಂದ ಗಾಯಗೊಂಡ ಕಳತ್ತೂರು ಉಳ್ವಾರಿನ ಮುಹಮ್ಮದ್, ಪತ್ನಿ ಮರಿಯುಮ್ಮ, ಪುತ್ರ ಜಲೀಲ್ ಎಂಬಿವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಕುಂಬಳೆಯಿಂದ ನಾಯ್ಕಾಪು ಭಾಗಕ್ಕೆ ಇವರು ಪ್ರಯಾಣಿಸುತ್ತಿದ್ದರು.  ಕಳೆದ ಒಂದು …

ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಕಾಳಹಸ್ತೇಂದ್ರ ಶ್ರೀ ಭೇಟಿ

ಹೊಸಂಗಡಿ: ಅನಂತಶ್ರೀ ವಿಭೂಶಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆ ಈ ತಿಂಗಳ ೨೯ರಿಂದ ಸೆ.೨೬ರ ತನಕ ಆನೆಗುಂದಿ ಪಡು ಕುತ್ಯಾರು ಸರಸ್ವತೀ ಪೀಠದಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಚಿತ್ತೈಸಿದರು. ಈ ವೇಳೆ ಚಾತುರ್ಮಾಸ್ಯ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಕ್ಷೇತ್ರ ಆಡಳಿತ ಸಮಿತಿ, ಮಹಿಳಾ ಸಂಘ, ಓಜ ಸಾಹಿತ್ಯ ಕೂಟ, ಗುರುಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಭಾಗವಹಿಸಿದರು.