ಉಪ್ಪಳ ನಿವಾಸಿಯನ್ನು ಅಪಹರಿಸಿ ಕೊಲೆಗೈದ ಪ್ರಕರಣ: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ  ಕಣ್ಣೂರಿನಿಂದ ಬಂಧನ

ಕುಂಬಳೆ: ಉಪ್ಪಳ ಬಳಿಯ ಸೋಂಕಾಲ್ ನಿವಾಸಿಯನ್ನು ಮನೆಯಿಂದ ಅಪಹರಿಸಿಕೊಂ ಡೊಯ್ದು ಗಂಭೀರ ಹಲ್ಲೆ ನಡೆಸಿ ಕೊಲೆಗೈದ ಪ್ರಕರಣದಲ್ಲಿ ಕಳೆದ ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮಂಗಲ್ಪಾಡಿ ಪೆರಿಂಗಡಿ ಪಳ್ಳಿ ಹೌಸ್‌ನ ಅಬ್ದುಲ್ ರುಮೀದ್ (29)ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಗಲ್ಫ್‌ಗೆ ಪರಾರಿಯಾಗಿದ್ದ ಈತ ನಿನ್ನೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಈ ವೇಳೆ ವಿಮಾನ ನಿಲ್ದಾಣ ಅಧಿಕಾರಿಗಳು ತಡೆದು ನಿಲ್ಲಿಸಿ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ  ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್ ನೇತೃತ್ವದಲ್ಲಿ  …

ಉದ್ಯಾವರದಲ್ಲಿ ಭಂಡಾರ ಮನೆಯಿಂದ ಕಳವು: ಸಿಸಿ ಟಿವಿಯಲ್ಲಿ ವ್ಯಕ್ತಿಯ ದೃಶ್ಯ ಪತ್ತೆ

ಮಂಜೇಶ್ವರ: ಉದ್ಯಾವರ ಮಾಡದಲ್ಲಿರುವ ಶ್ರೀ ಅರಸುಕೃಪಾ ಜೈ ವೀರ ಮಾರುತಿ ವ್ಯಾಯಾಮ ಶಾಲೆಯಿಂದ ಕಾಣಿಕೆ ಹಣ ಕಳವಿಗೀ ಡಾದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿರುವಾಗಲೇ ಇನ್ನೊಂದು ಕಳವು ಬಗ್ಗೆ ದೂರು ನೀಡಲಾಗಿದೆ. ಉದ್ಯಾವರ ಮಾಡ ಶ್ರೀ ಭಗವತೀ ಭಂಡಾರಮನೆಯಿಂದ ಕಳವು ನಡೆದಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ಲಭಿಸಿದೆ.  ಭಂಡಾರಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ ಸುಮಾರು 3000 ರೂಪಾಯಿಗಳ ವಿವಿಧ ವಸ್ತುಗಳನ್ನು ದೋಚಿರುವುದಾಗಿ ಭಂಡಾರಮನೆಯ ಪದಾಧಿಕಾರಿಗಳು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ತಿಂಗಳ ೧೬ರಂದು ಭಂಡಾರಮನೆಗೆ …

ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಆಟೋರಿಕ್ಷಾ ಮಗುಚಿ 8 ಮಂದಿಗೆ ಗಾಯ

ಕಾಸರಗೋಡು: ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಆಟೋರಿಕ್ಷಾ ನಿಯಂತ್ರಣ ತಪ್ಪಿ ಮಗುಚಿದೆ ೭ ವಿದ್ಯಾರ್ಥಿಗಳು ಹಾಗೂ ಚಾಲಕ ಗಾಯಗೊಂಡಿದ್ದಾರೆ. ಇವರನ್ನು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 9.45ರ ವೇಳೆ ಕಾಸರಗೋಡು ನಗರದ ಎಂ.ಜಿ ರಸ್ತೆಯ ಫೋರ್ಟ್ ರೋಡ್ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ. ಮೆಡೋನ್ಹಾ ಶಾಲೆಯ ವಿದ್ಯಾರ್ಥಿಗಳಾದ ಆರಾಧ್ಯ (12), ಅಥರ್ವ (6), ಅರ್ವಿನ್ (7), ನಗರಸಭಾ ಸರಕಾರಿ ಯುಪಿ ಶಾಲೆಯ ಮರಿಯಂ (10), ದೀಪ್ನ (12), ಅನಶ್ವರ (10), ಇಯಾನ್ ಸುನಿಲ್ (6) ಹಾಗೂ ಚಾಲಕ ಉಮೇಶ್‌ರಿಗೂ …

ಪಾನ್ ಮಸಾಲೆ ತಯಾರಿ ಘಟಕಕ್ಕೆ ಬಂಡವಾಳ ಹೂಡಿದ ವ್ಯಕ್ತಿ ಸೆರೆ

ಕಾಸರಗೋಡು: ಮೈಲಾಟಿಯಲ್ಲಿ ಫಿನೋಯಿಲ್ ಮಾರಾಟ ಕೇಂದ್ರದ ಮರೆಯಲ್ಲಿ   ಅನಧಿಕೃತವಾಗಿ ನಡೆಸಲಾ ಗುತ್ತಿದ್ದ ನಿಷೇದಿತ ಪಾನ್ ಮಸಾಲೆ ತಯಾರಿ ಘಟಕಕ್ಕೆ ಅಗತ್ಯದ ಆರ್ಥಿಕ ಬಂಡವಾಳ ಹೂಡಿದ ಆರೋಪಿಯನ್ನು ಮೇಲ್ಪರಂಬ ಎಸ್‌ಐ ಸುರೇಶ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.  ಕಾಸರಗೋಡು ನುಳ್ಳಿಪ್ಪಾಡಿ ಪೆಟ್ರೋಲ್ ಬಂಕ್ ಬಳಿಯ ನಿವಾಸಿ ಸುಹೈಲ್ (34) ಬಂಧಿತ ವ್ಯಕ್ತಿಯಾಗಿದ್ದಾನೆ. ಈತನನ್ನು ನ್ಯಾಯಾಂಗಬಂಧನದಲ್ಲಿರಿಸಲಾಗಿದೆ. ಈತ ಅನಧಿಕೃತ ಪಾನ್ ಮಸಾಲೆ ತಯಾರಿ ಘಟಕಕ್ಕೆ ಹಣ ಹೂಡುತ್ತಿದ್ದ ಮುಖ್ಯಸ್ಥನಾಗಿದ್ದಾನೆ. ಇದರಲ್ಲಿ ಇನ್ನೋರ್ವನ ಪಾಲುದಾರಿಕೆಯೂ ಇದೆ. ಆತ ತಲೆಮರಿಸಿಕೊಂಡಿರು ವುದಾಗಿ ತನಿಖೆಯಲ್ಲಿ …

ಮುಸ್ಲಿಂ ಲೀಗ್ ಮುಖಂಡ ನಿಧನ

ಕಾಸರಗೋಡು: ಮುಸ್ಲಿಂ ಲೀಗ್ ಮುಖಂಡ ಹಾಗೂ ದೀರ್ಘ ಕಾಲ ಎಸ್‌ಟಿಯು ಜಿಲ್ಲಾಧ್ಯಕ್ಷರಾಗಿದ್ದ ಅಣಂಗೂರು ಬೆದಿರ ನಿವಾಸಿ ಇ. ಅಬ್ದುಲ್ ರಹಿಮಾನ್ ಕುಂಞಿ ಮಾಸ್ತರ್ (86) ನಿಧನ ಹೊಂದಿ ದರು.  ಕೊಲ್ಲಂ ನಿವಾಸಿಯಾದ ಅಬ್ದುಲ್ ರಹಿಮಾನ್ ಅಧ್ಯಾಪಕರಾಗಿ ಕಾಸರಗೋಡಿಗೆ ತಲುಪಿದ್ದರು. ಅಧ್ಯಾಪನದ ಜೊತೆಗೆ ಸಾಮಾಜಿಕ- ರಾಜಕೀಯ ರಂಗಗಳಲ್ಲೂ ಸಕ್ರಿಯರಾದರು. ಮುಸ್ಲಿಂ ಲೀಗ್ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ, ಕಾಸರಗೋಡು ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ದುಡಿದಿದ್ದರು.

ಹೊಟ್ಟೆಗೆ ವಿಷ ಸೇರಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು

ಕಾಸರಗೋಡು: ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ  ತೋರೋತ್ತ್ ಎಂಬಲ್ಲಿ ಯುವತಿಯೋರ್ವೆ ಹೊಟ್ಟೆಗೆ ವಿಷ ಸೇರಿ ಮೃತಪಟ್ಟ ಘಟನೆ ನಡೆದಿದೆ.   ತೋರೋತ್ತ್‌ನ ಟಿ. ಅಶೋಕನ್‌ರ ಪುತ್ರಿ ಟಿ. ಅನಶ್ವರ (19) ಮೃತಪಟ್ಟ ಯುವತಿಯಾಗಿದ್ದಾಳೆ. ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಚಿಕಿತ್ಸೆ ಮಧ್ಯೆ ನಿಧನ ಸಂಭವಿಸಿದೆ.   ಪ್ಲಸ್‌ಟು ಶಿಕ್ಷಣದ ಬಳಿಕ ಉನ್ನತ ಶಿಕ್ಷಣಕ್ಕೆ ಅನಶ್ವರ ಸಿದ್ಧತೆ ನಡೆಸುತ್ತಿದ್ದಳು. ನಿನ್ನೆ ಮುಂಜಾನೆ ೨ ಗಂಟೆ ವೇಳೆ ಹೊಟ್ಟೆನೋವು ಅನುಭವಗೊಂಡ ಹಿನ್ನೆಲೆಯಲ್ಲಿ ಈಕೆಯನ್ನು ಕುಂಡಂಗುಳಿಯ ಕ್ಲಿನಿಕ್‌ವೊಂದಕ್ಕೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಅನಂತರ ಬೇಡಗಂ …

ಸಮಾರಂಭದಲ್ಲಿ ಆಹಾರ ಸೇವಿಸಿ ಅಸ್ವಸ್ಥಗೊಂಡ 74 ಮಂದಿ ಪೈಕಿ ಐವರಿಗೆ ಶಿಗೆಲ್ಲಾ ಪೊಸಿಟಿವ್

ಕಾಸರಗೋಡು: ನೀಲೇಶ್ವರ ನಗರಸಭೆಯ ವ್ಯಾಪ್ತಿಗೊಳಪಟ್ಟ ಚಾತಮತ್ತ್‌ನಲ್ಲಿ ನಡೆದ  ಸಮಾರಂಭ ವೊಂದರಲ್ಲಿ ಆಹಾರ ಸೇವಿಸಿದ ಬಳಿಕ ವಾಂತಿಭೇದಿಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟವರಲ್ಲಿ ಐದು ಮಂದಿಯಲ್ಲಿ ಶಿಗೆಲ್ಲಾ ಪೊಸಿಟಿವ್ ಸೋಂಕು ಪತ್ತೆಯಾಗಿದೆ. ಈ ಸಮಾರಂಭದಲ್ಲಿ ಏರ್ಪಡಿಸ ಲಾದ  ಔತಣಕೂಟದಲ್ಲಿ ಭಾಗವಹಿಸಿ ದ್ದವರಲ್ಲಿ 74 ಮಂದಿ ತೀವ್ರ ವಾಂತಿಭೇದಿ ಇತ್ಯಾದಿ ದೈಹಿಕ ಅಸ್ವಸ್ಥತೆ ಅನುಭವಗೊಂಡಿದ್ದು ಅವರನ್ನು ವಿವಿಧ ಆಸ್ಪತ್ರೆಗಳಲ್ಲಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇವರೆಲ್ಲರ  ದೇಹದ ಸ್ಯಾಂಪಲ್ ಗಳನ್ನು ಕಣ್ಣೂರಿನ ರೀಜಿ ನಲ್  ಲ್ಯಾಬ್‌ಗೆ ಪರೀಕ್ಷೆಗಾಗಿ ಕಳುಹಿಸಿ ಕೊ ಡಲಾಗಿತ್ತು.  ಇದರ ವರದಿ …

ಮಂಗಳೂರು-ದ.ಕ. ನೂತನ ಖಾಝಿ ಅಧಿಕಾರ ಸ್ವೀಕಾರ ಇಂದು

 ಮಂಗಳೂರು: ದಕ್ಷಿಣಕನ್ನಡ- ಮಂಗಳೂರು ಜಂಟಿ ಖಾಝಿಯಾಗಿ ಪಾಣಕ್ಕಾಡ್ ನಾಸರ್ ಹಯ್ ಶಿಹಾಬುದ್ದೀನ್ ತಂಙಳ್ ಇಂದು ಅಧಿಕಾರ ಸ್ವೀಕರಿಸುವರು. ಮಂಗಳೂರಿನ ಸೀನತ್ ಬಕ್ಷ್ ಯತೀಂಖಾನ ಸಭಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ತ್ವಾಕ ಅಹಮ್ಮದ್ ಮುಸ್ಲಿ ಯಾರ್ ಅಲ್ ಅಸ್ಹರಿಯವರ ನಿಧನದ ಹಿನ್ನೆಲೆಯಲ್ಲಿ ನೂತನ ಖಾಝಿಯವರ ಆಯ್ಕೆ ನಡೆದಿದೆ. ಸುನ್ನಿ ಮಹಲ್ ಫೆಡರೇಶನ್ ಮಲಪ್ಪುರಂ ಜಿಲ್ಲಾ ಅಧ್ಯಕ್ಷ ರಾಗಿದ್ದಾರೆ.

ಮೊಟ್ಟೆ ವ್ಯಾಪಾರದ ಮರೆಯಲ್ಲಿ ಎಂಡಿಎಂಎ ಮಾರಾಟ: ಯುವಕ ಸೆರೆ

ಕಾಸರಗೋಡು: ಮೊಟ್ಟೆ ಮಾರಾ ಟದ ಮರೆಯಲ್ಲಿ ಮಾದಕ ಪದಾರ್ಥ ಮಾರಾಟ ನಡೆಸಿದ ಯುವಕ ಸೆರೆಯಾಗಿ ದ್ದಾನೆ. ನೀಲೇಶ್ವರ ಚಿರಪ್ಪುರ ನಿವಾಸಿ ಅಮೀರ್ (೪೦) ಸೆರೆಯಾದ ವ್ಯಕ್ತಿ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆ ಯಲ್ಲಿ ನೀಲೇಶ್ವರ ಇನ್ಸ್‌ಪೆಕ್ಟರ್ ಕೆ. ಮುರಳೀ ಧರನ್‌ರ ನಿರ್ದೇಶ ಪ್ರಕಾರ ಎಸ್‌ಐ ಕೆ.ವಿ. ರತೀಶ್ ಹಾಗೂ ತಂಡ ಆರೋಪಿ ಯನ್ನು ಸೆರೆ ಹಿಡಿದಿದೆ. ನಿನ್ನೆ ಸಂಜೆ ಯುವಕನ ಮನೆಯಲ್ಲಿ ನಡೆಸಿದ ದಾಳಿಯಲ್ಲಿ ಮಂಚದಡಿಯಲ್ಲಿ ಬಚ್ಚಿಟ್ಟಿದ್ದ ೧ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಅಮೀರ್ ಮಾದಕ ಪದಾರ್ಥ ಮಾರಾಟ …

ಯುವತಿಯ ಪ್ರಾಣ ರಕ್ಷಿಸಿದ ಉದಯ ಕುಮಾರ್ ಶೆಟ್ಟಿಯವರಿಗೆ ಬಿರುವೆರ್ ಕುಡ್ಲ ವತಿಯಿಂದ ಗೌರವ

ಉಪ್ಪಳ: ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ಸದಸ್ಯ ಐತಪ್ಪ ಪೂಜಾರಿ ದೇರಂಬಳ ಇವರ ಪುತ್ರಿ ಸುಶ್ಮಿತಾ ಸೋಮವಾರ ಜೋಡುಕಲ್ಲುನಿಂದ ಸಹೋದರಿಯ ಜೊತೆ ಮನೆಗೆ ನಡೆದು ಹೋಗುತ್ತಿದ್ದ ವೇಳೆ ತಾತ್ಕಾಲಿಕ ಕಂಗಿನ ಸೇತುವೆ ಯಿಂದ ಆಯತಪ್ಪಿ ದೇರಂಬಳ ಹೊಳೆಗೆ ಬಿದ್ದಿದ್ದು, ಈಕೆಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿಯವÀರ ಸಾಹಸವನ್ನು ಗುರುತಿಸಿ ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ವತಿಯಿಂದ ನಿನ್ನೆ ಸಂಜೆ ಸುಶ್ಮಿತರ ಮನೆಯಲ್ಲಿ ಗೌರವಧನವನ್ನಿತ್ತು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಗೌರವಾಧ್ಯಕ್ಷ ಶೀನಪ್ಪ ಪೂಜಾರಿ ಅಲಾರು, …