ಬದಿಯಡ್ಕದಲ್ಲಿ ಕುಡಿಯುವ ನೀರಿನ ಬಾವಿಗೆ ಮಲಿನ ಜಲ: ಫಲಾನುಭವಿಗಳಿಗೆ ಸಮಸ್ಯೆ

ಬದಿಯಡ್ಕ: ಕಾಸರಗೋಡು ಬ್ಲಾಕ್ ಪಂಚಾಯತ್ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷರ ಕ್ವಾರ್ಟರ್ಸ್‌ನ ಮಲಿನ ಜಲ  ಸಮೀಪದ  ನಿವಾಸಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿರುವುದಾಗಿ ದೂರಲಾಗಿದೆ.   ಪವಿತ್ರವಾದ ಬಾವಿಯ ನೀರನ್ನು ಕುಡಿಯುತ್ತಿದ್ದವರಿಗೆ ಹಲವು ವರ್ಷಗಳಿಂದ ನೀರಿನ ರುಚಿಯಲ್ಲಿ ವ್ಯತ್ಯಾಸಉಂಟಾದ ಹಿನ್ನೆಲೆಯಲ್ಲಿ ಕಲೆಕ್ಟರೇಟ್, ಪಂಚಾಯತ್, ಮಲಿನೀಕರಣ ನಿಯಂತ್ರಣ ಮಂಡಳಿಗೆ ದೂರು ನೀಡಲಾಗಿದೆ. ಕುಡಿಯುವ ನೀರಿನಲ್ಲಿ ಮಲಿನ ಜಲ ಬೆರಕೆಯಾಗುತ್ತಿದೆಯೆಂಬ ಸಂಶಯವನ್ನು ತಿಳಿಸಿದ್ದು, ಬಳಿಕ ಮಲಿನೀಕರಣ ನಿಯಂತ್ರಣ ಮಂಡಳಿ  ಬಾವಿ ನೀರನ್ನು ಸಂಗ್ರಹಿಸಿ  ಪರಿಶೀಲಿಸಿ ಆ ನೀರನ್ನು ಕುಡಿಯಕೂಡದೆಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಆ ಬಾವಿಯ …

ನಿಧನ ರಿಜಿಸ್ಟರ್‌ನಲ್ಲಿ ಮೃತಪಟ್ಟ ಮಹಿಳೆಯ ಪತಿಯ ಹೆಸರು ಬದಲಾಯಿಸಿ ವಂಚನೆ: ತನಿಖೆ ಆರಂಭ

ಉಪ್ಪಳ:  ರಿಜಿಸ್ಟರ್‌ನಲ್ಲಿ ಮೃತಪಟ್ಟ ಮಹಿಳೆಯ ಪತಿಯ ಹೆಸರನ್ನು ತಿದ್ದುಪಡಿಮಾಡಿ ವಂಚನೆ ನಡೆಸಿರುವುದಾಗಿ ದೂರಲಾಗಿದೆ. ಪೈವಳಿಕೆ ಪಂಚಾಯತ್ ಕಾರ್ಯದರ್ಶಿ ಕಾಸರಗೋಡು ಎಎಸ್‌ಪಿ ಅಶೋಕ್ ಅಚ್ಯುತನ್‌ರಿಗೆ ನೀಡಿದ ದೂರಿನ ಪ್ರಕಾರ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2011ರ  ನಿಧನ ರಿಜಿಸ್ಟರ್‌ನಲ್ಲಿ  ವಂಚನೆ ನಡೆಸಿರು ವುದಾಗಿ ದೂರಲಾಗಿದೆ. 2011 ಅಗೋಸ್ತ್ 17ರಂದು ಮೃತಪಟ್ಟ ಕಮಲ ಎಂಬವರ ಪತಿಯ  ಹೆಸರು ತುಕ್ರ ಎಂದು ದಾಖಲಿಸಲಾಗಿತ್ತು. ಇದನ್ನು ತಿರುಚಿ ಗುರುವ ಎಂದು ಬರೆದು ವಂಚನೆ ನಡೆಸಲಾಗಿದೆ ಎಂಬುದಾಗಿ ದೂರಲಾಗಿದೆ. ಈ ವಂಚನೆ …

ಶಬರಿಮಲೆ ದೇಗುಲ ತುಪ್ಪ ಮಾರಾಟಗೈದು ಕಳಪೆ ಖರೀದಿ ಪತ್ತೆ: ಸಮಗ್ರ ತನಿಖೆ

ಶಬರಿಮಲೆ: ಶಬರಿಮಲೆ ದೇಗುಲದ ಚಿನ್ನ ಕಳವು ನಡೆದ ಬೆನ್ನಲ್ಲೇ  ದೇಗುಲಕ್ಕೆ ಪೂರೈಸಲಾಗಿರುವ ತುಪ್ಪವನ್ನು ಗುಪ್ತವಾಗಿ ಮಾರಾಟ ಮಾಡಿ ಅದರ ಬದಲು ಕಳಪೆ ಗುಣಮಟ್ಟದ ತುಪ್ಪವನ್ನು ಸನ್ನಿಧಾನಕ್ಕೆ ತಲುಪಿಸಲಾಗಿದೆ ಎಂಬ ವಿಷಯ ಈಗ ಬೆಳಕಿಗೆ ಬಂದಿದೆ. ಆಬಗ್ಗೆ ಸಮಗ್ರ ತನಿಖೆಗೆ ಆರೋಗ್ಯ, ಮುಜರಾಯಿ ಖಾತೆಗೆ ಕೆ.ಮುರಳೀಧರನ್ ನಿರ್ದೇಶ ನೀಡಿದ್ದಾರೆ. ಮುಜರಾಯಿ ಇಲಾಖೆಯ ಕಾರ್ಯದರ್ಶಿಗೆ ತನಿಖೆಯ ಹೊಣೆಗಾರಿಕೆ ವಹಿಸಿಕೊಡಲಾಗಿದೆ. ಶಬರಿಮಲೆಗೆ ಅಗತ್ಯವಿರುವ ತುಪ್ಪವನ್ನು ಮಿಲ್ಮಾದಿಂದ ಪೂರೈಸಲಾಗುತ್ತಿದೆ. ಆದರೆ ಆ ತುಪ್ಪವನ್ನು ಗುಪ್ತವಾಗಿ ಮಾರಾಟಮಾಡಿ ಕಳಪೆ ಗುಣಮಟ್ಟದ ತುಪ್ಪವನ್ನು ಖರೀದಿಸಲಾಗಿತ್ತೆಂದೂ, ತುಪ್ಪ …

ವೈದ್ಯ ಮನೆಯೊಳಗೆ ಮೃತಪಟ್ಟು ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ವೈದ್ಯರೊಬ್ಬರು ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಗರದ ಬಟ್ಟಂಪಾರೆಯಲ್ಲಿ ಕೃಷ್ಣ ಥಿಯೇಟರ್ ಸಮೀಪ ವಾಸಿಸುತ್ತಿದ್ದ ವರ್ಕಾಡಿ ಕೊಣಿಬೈಲು ನಿವಾಸಿ ಡಾ| ರಾಜೇಂದ್ರ ಶೆಟ್ಟಿ (73) ಮೃತಪಟ್ಟ ವ್ಯಕ್ತಿ.  ನಿನ್ನೆ ಬೆಳಿಗ್ಗೆ  ಮನೆಯ ಶೌಚಾಲಯದಲ್ಲಿ  ಮೃತಪಟ್ಟ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಡಾ| ರಾಜೇಂದ್ರ ಶೆಟ್ಟಿ  ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಅವರಿಗೆ ಫೋನ್ ಕರೆ ಮಾಡಿದರೂ  ಸ್ವೀಕರಿಸದ ಹಿನ್ನೆಲೆ ಯಲ್ಲಿ ಸಂಬಂಧಿಕರು ಮನೆಗೆ ತಲುಪಿ ನೋಡಿದಾಗ ಇವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. …

ಅಪಾಯಕಾರಿ ರೀತಿಯಲ್ಲಿ ಸಂಚರಿಸಿದ ಥಾರ್‌ಜೀಪು ತಡೆದು ನಿಲ್ಲಿಸಿದ ನಾಗರಿಕರು :ಮದ್ಯದಮಲಿನಲ್ಲಿದ್ದ ಚಾಲಕ ಕಸ್ಟಡಿಗೆ

ಕಾಸರಗೋಡು: ಮದ್ಯದ ಅಮಲಿ ನಲ್ಲಿ  ಅಪಾಯಕರ ರೀತಿಯಲ್ಲಿ ಥಾರ್‌ಜೀಪು  ಚಲಾಯಿಸಿದ ವ್ಯಕ್ತಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ. ತಮಿಳುನಾಡಿನ ಧರ್ಮಪುರಿ ನಿವಾಸಿ ಬಿ. ಶ್ಯಾಮ್‌ರಾಜ್ (55) ಎಂಬಾತ ಪೊಲೀಸ್ ಕಸ್ಟಡಿಯಲ್ಲಿರುವ ವ್ಯಕ್ತಿ.  ಎದ್ದು ನಿಲ್ಲಲು ಕೂಡಾ ಸಾಧ್ಯವಾಗದ ರೀತಿಯಲ್ಲಿ  ಈತ ಮದ್ಯದಮಲಿ ನಲ್ಲಿದ್ದನು. ನಿನ್ನೆ ಸಂಜೆ ಈತ ಅಪರಿಮಿತ ವೇಗದಲ್ಲಿ ಜೀಪು ಚಲಾಯಿಸುತ್ತಿದ್ದನೆನ್ನಲಾಗಿದೆ. ಜೀಪಿನ ಒಂದು ಟಯರ್ ಹಾನಿಗೀಡಾದ  ಸ್ಥಿತಿಯಲ್ಲಿತ್ತು. ಇದು ಗಮನಕ್ಕೆ ಬಂದ ನಾಗರಿಕರು ಪರಪ್ಪ ಶಾಲೆ ಸಮೀಪ ಜೀಪನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ನಾಗರಿಕರು …

ಬಿಜೆಪಿಯಿಂದ ಗುರುನಮನ

ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಹಾಗೂ ಪಂಚಾಯತ್ ಸಮಿತಿ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುಗಳಾಗಿ ಮಾರ್ಗದರ್ಶನ ಮಾಡಿದ, ಮಾಡುತ್ತಿರುವ ಗುರುಗಳನ್ನು ಗುರು ಪೂರ್ಣಿಮೆ ಪ್ರಯುಕ್ತ ಗೌರವಿಸಲಾಯಿತು.ಭರತನಾಟ್ಯ ಗುರು ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ, ಉಳುವಾನ ಶಂಕರ ಭಟ್, ರಾಘವ ಮಾಸ್ಟರ್ ಬೆರಿಪದವು, ಆನಂದ ಮಾಸ್ಟರ್ ತೂಮಿನಾಡು, ಬಾಯರು ರಮೇಶ್ ಶೆಟ್ಟಿ, ಸಂಜೀವ ಶೆಟ್ಟಿ ಮಾಡ, ಲಲಿತ ಟೀಚರ್, ರಾಮಚಂದ್ರ ಆಚಾರ್ಯ, ಚಂದ್ರಶೇಖರ ನಾಯಕ್, ಜೋಕಿಮ್ ಮೊಂತೇರೊ, ವಸಂತ ಭಟ್, ರಾಧಾಕೃಷ್ಣ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಮೊದಲಾದವರನ್ನು ಸನ್ಮಾನಿಸಿ ಗುರು …

ಕಾಸರಗೋಡು ರೈಲ್ವೇ ಪಾರ್ಸೆಲ್ ಕಚೇರಿ ಮುಂದುವರಿಕೆ: ಅಧಿಕಾರಿಗಳ ಭರವಸೆ

ಕಾಸರಗೋಡು: ಕಾಸರಗೋಡು ರೈಲ್ವೇ ಪಾರ್ಸೆಲ್ ಕಚೇರಿ ಇದೀಗಿನ ರೀತಿಯಲ್ಲೇ ಮುಂದುವರಿಯಲಿದೆಯೆಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.  ರೈಲ್ವೇ ಡಿವಿಶನ್ ಮೆನೇಜರ್ ಮಧುಕರ ರೌತ್, ಎಡಿಆರ್‌ಎಂ ಮುಹಮ್ಮದ್ ಇಸ್ಲಾಂ, ಸೀನಿಯರ್ ಡಿವಿಶನ್ ಕಮರ್ಶಿಯಲ್ ಮೆನೇಜರ್ ಬಾಲಮುರುಗನ್, ಮಿಥುನ್, ಶೈಲೇಶ್ ಕುಮಾರ್ ಎಂಬಿವರು ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ  ಪ್ಯಾಸೆಂಜರ್ಸ್ ಅಸೋಸಿಯೇಶನ್  ವಿವಿಧ ಬೇಡಿಕೆ  ಮುಂದುವರಿಸಿ ಮನವಿ ಸಲ್ಲಿಸಿದ್ದು,   ಮನವಿಯನ್ನು ಸ್ವೀಕರಿಸಿದ ಅಧಿಕಾರಗಳು ಪಾರ್ಸೆಲ್ ಕಚೇರಿ ಮುಂದುವರಿಸುವ  ಬಗ್ಗೆ ಭರವಸೆ ನೀಡಿದ್ದಾರೆ. ಸಂಜೆ ಹೊತ್ತಿನಲ್ಲಿ ಕಲ್ಲಿಕೋಟೆಯಿಂದ ಕಣ್ಣೂರುವರೆಗೆ …

ಅಭಿಭಾಷಕ ಪರಿಷತ್‌ನಿಂದ ಗುರುವಂದನೆ

ಕಾಸರಗೋಡು: ಗುರು ಪೂರ್ಣಿಮೆಯಂದು ಭಾರತೀಯ ಅಭಿಭಾಷಕ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಗುರುವಂದನಾ ಕಾರ್ಯಕ್ರಮ ವನ್ನು ಏರ್ಪಡಿಸಲಾಯಿತು. ಕಾಸರಗೋಡಿನ ಹಿರಿಯ ವಕೀಲರಾದ ಐ.ವಿ. ಭಟ್ ಹಾಗೂ ಅಡೂರು ಉಮೇಶ್ ನಾಯï್ಕರನ್ನು ಅವರ ನಿವಾಸಗಳಿಗೆ ತೆರಳಿ ಗೌರವಿಸಲಾಯಿತು. ಅಭಿಭಾಷಕ ಪರಿಷತ್ ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಬಿ. ರವೀಂದ್ರನ್, ಜಿಲ್ಲಾ ಅಧ್ಯಕ್ಷ ಅಡ್ವಕೇಟ್ ಎ.ಸಿ ಅಶೋಕ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಅಡ್ವಕೇಟ್ ನವೀನ್ ರಾಜ್, ಅಡ್ವಕೇಟ್ ಕರುಣಾ ಕರ ನಂಬಿಯಾರ್ ಮಾತನಾಡಿದರು. ರಾಜೇಶ್, ವಕೀಲರಾದ ಪ್ರಕಾಶ್ ರಾವ್, ಜಾಹ್ನವಿ …

ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನಿಂದ  ತ್ಯಾಜ್ಯ ನೀತಿ ಉಲ್ಲಂಘನೆ ಪತ್ತೆ: ದಂಡ ವಸೂಲಿ

ಕಾಸರಗೋಡು:  ಸ್ಥಳೀಯಾ ಡಳಿತ ಇಲಾಖೆಯ ಜಿಲ್ಲಾ ಎನ್ಫೋರ್ಸ್‌ಮೆಂಟ್ ಸ್ಕ್ವಾಡ್ ವಿವಿಧ ಸ್ಥಳೀಯಾಡಳಿತ ಸಂಸ್ಥೆ ವ್ಯಾಪ್ತಿಯಲ್ಲಿ ನಡೆಸಿದ ತಪಾಸಣೆಗಳಲ್ಲಿ ತ್ಯಾಜ್ಯ ಸಂಸ್ಕರಣೆ ವಲಯದ ಕಾನೂನು ಉಲ್ಲಂಘನೆಗಳನ್ನು ಪತ್ತೆಹಚ್ಚಿ ದಂಡ ಹೇರಿದೆ. ದೇಲಂಪಾಡಿ ಪಂಚಾಯತ್‌ನ ಅಡೂರ್‌ನಲ್ಲಿರುವ ಸ್ಟೋರ್, ಹೋಟೆಲ್, ಮಾರ್ಟ್ ಎಂಬೀ ಸಂಸ್ಥೆಗಳಲ್ಲೂ, ಬದಿಯಡ್ಕದ ಅಪಾರ್ಟ್‌ಮೆಂಟ್‌ನಲ್ಲೂ, ಮಧೂರಿನ ಪಟ್ಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲೂ ಅವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆ ನಡೆಸಿರುವುದನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ 2೦,೦೦೦ ರೂ. ದಂಡ ಹೇರಲಾಗಿದೆ. ಕುಂಬಳೆಯ ರಸ್ತೆಯಲ್ಲಿ ಕೆರೆ ನಿರ್ಮಿಸಿ ಅದಕ್ಕೆ ತ್ಯಾಜ್ಯವನ್ನು ತಂದು ಹಾಕಲು …

ಕಟ್ಟೆ ಬಜಾರ್ ತಿರುವಲ್ಲಿ ಅಪಘಾತ ಭೀತಿ ಬಾಯ್ದೆರೆದ ಚರಂಡಿ ದುರಸ್ತಿಗೊಳಿಸಲು ಒತ್ತಾಯ

ಮಂಜೇಶ್ವರ: ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಬಂಗ್ರ ಮಂಜೇಶ್ವರ ರಸ್ತೆಯ ಕಟ್ಟೆಬಜಾರ್ ತಿರುವು ವಾಹನ ಸವಾರರಲ್ಲಿ ಆತಂಕವನ್ನು ಉಂಟುಮಾಡುತ್ತಿದೆ. ಈ ತಿರುವಿನ ಇಕ್ಕೆಡೆಗಳಲ್ಲಿ ರಸ್ತೆಗೆ ತಾಗಿಕೊಂಡು ತೆರೆದ ಸ್ಥಿತಿಯಲ್ಲಿರುವ ಚರಂಡಿ ವಾಹನ ಸವಾರರಲ್ಲಿ ಆತಂಕ ವನ್ನುಂಟುಮಾಡಿದೆ. ಮಂಜೇಶ್ವರ ಭಾಗದಿಂದ ಹೊಸಂಗಡಿ ಕಡೆಗೆ ಸಂಚರಿಸುವಾಗ ತಿರುವಿನಲ್ಲಿ ಎದುರಿನಿಂದ ಬರುವ ವಾಹನಕ್ಕೆ ಸೈಡು ನೀಡುವ ವೇಳೆ ಚರಂಡಿಗೆ ಬಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ. ಕೆಲವರು ಕೂದಲೆಳೆ ಅಂತರದಿAದ ಪಾರಾಗಿದ್ದಾರೆ. ಈ ಪರಿಸರದಲ್ಲಿ ಚರಂಡಿಯಲ್ಲಿ ಗಿಡ, ಪೊದೆಗಳು ತುಂಬಿ ಚರಂಡಿ ಗಮನಕ್ಕೆ ಬಾರದೆ ಇನ್ನಷ್ಟು …