ಸ್ನೇಹಿತೆಯ 16ರ ಹರೆಯದ ಮಗಳಿಗೆ ಕಿರುಕುಳ ನೀಡಿದ ಯುವತಿ ಸೆರೆ: ಆರೋಪಿ ಯುವತಿ ವಿರುದ್ಧ 4ಪೋಕ್ಸೋ ಪ್ರಕರಣಗಳು
ಕಾಸರಗೋಡು: ಸ್ನೇಹಿತೆಯ 16ರ ಹರೆಯದ ಮಗಳಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಯುವತಿ ಸೆರೆಗೀಡಾಗಿದ್ದಾಳೆ. ತಳಿಪರಂಬ ಪುಳಿಪರಂಬ್ ನಿವಾಸಿಯಾದ ಸ್ನೇಹ ಮೆರ್ಲಿ (25) ಎಂಬಾಕೆಯನ್ನು ಮಾತಿಲ್ ಪೊಲೀಸರ ಸಹಾಯ ದೊಂ ದಿಗೆ ಮೇಲ್ಪರಂಬ ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಪಿ. ರಾಘವನ್ ನೇತೃತ್ವದ ತಂಡ ಬಂಧಿಸಿದೆ. 4 ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾದ ಸ್ನೇಹ ಮೆರ್ಲಿ ಮಾತಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿ ದ್ದಾಳೆಂಬ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ದಾಳಿ ವೇಳೆ ಯುವತಿ ಸೆರೆಗೀಡಾಗಿ ದ್ದಾಳೆ. …