ಯುವಕ ಮನೆಯ ಹಾಲ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆ

ಕುಂಬಳೆ: ಯುವಕನೋರ್ವ ಮನೆಯ ಹಾಲ್‌ನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇಚ್ಲಂಗೋಡು ಚಿತ್ತೂರು ಎಂಬಲ್ಲಿನ ದಿ| ಕುಂಞಿಪಳ್ಳಿ ಎಂಬವರ ಪುತ್ರ ಅಬ್ದುಲ್ ಸಲೀಂ (33)  ಸಾವಿಗೀಡಾದ ಯುವಕನಾಗಿ ದ್ದಾರ.  ಇವರ ತಾಯಿ ಆಯಿಷಾಬಿ  ಮಗಳ ಮನೆಗೆ ತೆರಳಿದ್ದರು. ಇದರಿಂದ ಅಬ್ದುಲ್ ಸಲೀಂ ಮಾತ್ರವೇ ನಿನ್ನೆ ರಾತ್ರಿ ಮನೆಯಲ್ಲಿದ್ದರು. ಇಂದು ಬೆಳಿಗ್ಗೆ ಸ್ಥಳೀಯರು ಇಲ್ಲಿಗೆ ತಲುಪಿ ನೋಡಿದಾಗ ಅಬ್ದುಲ್ ಸಲೀಂ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

ಪಾರ್ಟ್‌ಟೈಮ್ ಉದ್ಯೋಗದ ಭರವಸೆ ನೀಡಿ ಯುವಕನಿಂದ 24.07 ಲಕ್ಷ ರೂ. ಲಪಟಾವಣೆ

ಕಾಸರಗೋಡು: ಪಾರ್ಟ್‌ಟೈಮ್ ಕೆಲಸ ನೀಡುವ ಭರವಸೆಯೊಡ್ಡಿ ಯುವಕನಿಂದ 24.07 ಲಕ್ಷ ರೂ.  ಎಗರಿಸಿದ ದೂರಿನಂತೆ ಓರ್ವನ ವಿರುದ್ಧ ಕಾಸರಗೋಡು ಸೈಬರ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಡೂರು ಪಾಂಡಿ ಕೊಟ್ಟುಂಬಯಲ್ ನಿವಾಸಿಯಾದ ಯುವಕ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆರೋಪಿ ನನ್ನನ್ನು ಸಂಪರ್ಕಿಸಿ ಪಾರ್ಟ್‌ಟೈಮ್ ಉದ್ಯೋಗ ನೀಡುವುದಾಗಿ ಮತ್ತು ಅದರಿಂದ ಭಾರೀ ಕಮಿಷನ್ ಲಭಿಸಲಿದೆ ಎಂಬ ಭರವಸೆ ನೀಡಿ  2025 ಆಗಸ್ಟ್ 21ರಿಂದ 2025 ಡಿಸೆಂಬರ್ 30ರ …

ಮನೆಗೆ ಅಬಕಾರಿ ದಾಳಿ: 100 ಲೀಟರ್ ಹುಳಿರಸ, 2 ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆ: ಓರ್ವ ಸೆರೆ

ಕಾಸರಗೋಡು: ಓಣಂ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಂತೆ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಸಿ.ಕೆ.ವಿ.ಸುರೇಶ್ (ಗ್ರೇಡ್) ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯೊಂದರಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಗಾಗಿ ಸಿದ್ಧಪಡಿಸಲಾಗಿದ್ದ 100 ಲೀಟರ್  ಹುಳಿರಸ ಹಾಗೂ ಎರಡು ಲೀಟರ್ ಕಳ್ಳಭಟ್ಟಿ ಸಾರಾಟಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ  ಬಳಾಲ್ ಗ್ರಾಮದ  ಕನಕಪಳ್ಳಿ ತಟ್ಟ ನಿವಾಸಿ ಕುಂಞಿ ಕೃಷ್ಣನ್.ಕೆ (54) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊ ಳ್ಳಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ …

ಪಾಲಕ್ಕಾಡ್ ರೈಲ್ವೇ ವಿಭಾಗವನ್ನು ವಿಭಜಿಸಿದ ತೀರ್ಮಾನದ ವಿರುದ್ಧ ಕೇರಳದಿಂದ ತೀವ್ರ ಪ್ರತಿಭಟನೆ

ತಿರುವನಂತಪುರ: ಉಳ್ಳಾಲದಿಂದ ಮಂಗಳೂರು ತನಕದ ರೈಲು ನಿಲ್ದಾಣಗಳನ್ನು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈರುತ್ಯ ವಲಯದಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿದ ರೈಲ್ವೇ ಇಲಾಖೆಯ ತೀರ್ಮಾನದ ವಿರುದ್ಧ ಕೇರಳ ತೀವ್ರ ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿದೆ.  ಇಂತಹ ತೀರ್ಮಾನದಿಂದ ಪಾಲ್ಘಾಟ್ ರೈಲ್ವೇ ವಿಭಾಗಕ್ಕೆ ಮಾತ್ರವಲ್ಲ ಕೇರಳಕ್ಕೂ  ತೀವ್ರ ಆರ್ಥಿಕ ನಷ್ಟ ಉಂಟುಮಾಡ ಲಿದೆ. ಮಾತ್ರವಲ್ಲ ರೈಲ್ವೇ ಪ್ರಯಾಣಿಕರನ್ನೂ ಇದು ತೀವ್ರ ಆತಂಕಕ್ಕೊಳಪಡಿಸಿದೆ. ಇಂತಹ ತೀ ರ್ಮಾನವನ್ನು ಸುತರಾಂ ಅಂಗೀಕರಿಸು ವಂತಿಲ್ಲವೆಂದೂ ಕೇರಳ ಸರಕಾರ ಹಾಗೂ ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ …

ಗೋಣಿಚೀಲದಲ್ಲಿ ಮೃತದೇಹ ಪತ್ತೆ: ನಾಪತ್ತೆಯಾದ ಮಹಿಳೆಯದ್ದಾಗಿರಬೇಕೆಂಬ ಶಂಕೆ; ಪತಿ ನಾಪತ್ತೆ

ಮಲಪ್ಪುರಂ: ತಿರೂರು ಹೊಳೆ ಸಮೀಪ ಗೋಣಿಚೀಲದಲ್ಲಿ ಕಟ್ಟಿ ಇರಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಲ್ಲುಕಟ್ಟಿ ಮುಳುಗಿಸಿಟ್ಟ ರೀತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನ ಮೀನುಗಾರಿಕೆಗೆ ಹೋಗಲಿದ್ದ ‘ಸಮರ್‌ಕಂದ್’ ಎಂಬ ದೋಣಿಯ ಕಾರ್ಮಿಕರು ಈ ಗೋಣಿ ಚೀಲವನ್ನು ಪತ್ತೆಹಚ್ಚಿದ್ದಾರೆ. ಅದರೊಳಗೆ ಮನುಷ್ಯರ ಶರೀರವಿದೆಯೆಂದು ಖಚಿತವಾದ ಬಳಿಕ ಮೀನು ಕಾರ್ಮಿಕರು ತಿರೂರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತಲುಪಿ ಪರಿಶೀಲಿಸಿದಾಗ ಗೋಣಿಚೀಲದೊಳಗೆ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಇತ್ತೀಚೆಗೆ ನಾಪತ್ತೆಯಾದ ಪಡಿಞಾರೆಕರೆ ಬೀಚ್ ನಿವಾಸಿ ಫೌಸಿಯ (37)ರ ಮೃತದೇಹವಿದಾಗಿರಬೇಕೆಂದು ಪೊಲೀಸರು ಶಂಕೆ …

ರೈಲಿನಲ್ಲಿ ಮಹಿಳೆಯರ ಮುಂದೆ ಲೈಂಗಿಕ ಚೇಷ್ಠೆ: ಮಧ್ಯವಯಸ್ಕ ಸೆರೆ

ಕಾಸರಗೋಡು: ರೈಲಿನಲ್ಲಿ ಮಹಿಳೆಯರ ಮುಂದೆ ಲೈಂಗಿಕ ಚೇಷ್ಠೆ ಮಾಡಿದ ಮಧ್ಯವಯಸ್ಕನನ್ನು ಸೆರೆಹಿಡಿಯಲಾಗಿದೆ. ಕಣ್ಣೂರು ಜೋಸ್‌ಗಿರಿ ನಿವಾಸಿ ಜೋಸ್ ಮ್ಯಾಥ್ಯು (53) ಎಂಬಾತನನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಇಂದು ಮುಂಜಾನೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಒಕ್ಕಾ ಎಕ್ಸ್‌ಪ್ರೆಸ್ ತಲುಪಿದಾಗ  ಈತ ಪ್ರಯಾಣಿಕೆಯರೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಓರ್ವೆ ಯುವತಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದು, ಕೂಡಲೇ ಎಸ್‌ಐ ಸನಿಲ್ ಕುಮಾರ್ ನೇತೃತ್ವದ ಪೊಲೀಸರು ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ.  ಅನಂತರ ಈತನನ್ನು ರೈಲಿನಿಂದಿಳಿಸಿ ಠಾಣೆಗೆ ಕೊಂಡೊಯ್ದು ನೋಟೀಸು …

ಬಾಯಾರು ನಿವಾಸಿಯ ಲ್ಯಾಪ್‌ಟಾಪ್ ರೈಲಿನಲ್ಲಿ ಕಳವುಗೈದ ಆರೋಪಿ ಬಂಧನ: ಇನ್ನೊಂದು ಸಾಧನೆಗೈದ ಆರ್‌ಪಿಎಫ್, ರೈಲ್ವೇ ಪೊಲೀಸ್

 ಕಾಸರಗೋಡು: ರೈಲು ಪ್ರಯಾ ಣಿಕನ ಲ್ಯಾಪ್‌ಟಾಪ್ ಕಳವುಗೈದ ಪ್ರಕರಣದಲ್ಲಿ ಆರೋಪಿಯನ್ನು ಗಂಟೆಗಳೊಳಗೆ ಸೆರೆಹಿಡಿದು  ರೈಲ್ವೇ ಪೊಲೀಸ್ ಹಾಗೂ ಆರ್‌ಪಿಎಫ್ ಇನ್ನೊಂದು ಸಾಧನೆಗೈದಿದೆ.  ಚೆರ್ವತ್ತೂರು ಪಡನ್ನ ನಿವಾಸಿ ಕೆ.ಸುಧಾಕರನ್ (56) ಎಂಬಾತನನ್ನು ಬಂಧಿಸಲಾಗಿದೆ.  ಬಾಯಾರು ಬೆರಿಪದವು ಬಳ್ಳೂರು ನಿವಾಸಿ ಇಬ್ರಾಹಿಂ ಇಶಾನ್ ಎಂಬವರ ೮೦ ಸಾವಿರ ರೂಪಾಯಿ ಮೌಲ್ಯದ  ಲ್ಯಾಪ್‌ಟಾಪ್‌ನ್ನು ಸುಧಾಕರನ್ ಕಳವುಗೈದಿದ್ದಾನೆನ್ನಲಾಗಿದೆ.  ಇಬ್ರಾಹಿಂ ಇಶಾನ್  ಎರಡು ದಿನಗಳ ಹಿಂದೆ ಕಲ್ಲಿಕೋಟೆ ಫರೂಕ್‌ನಿಂದ ಏರನಾಡ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದು, ಕಣ್ಣೂರಿಗೆ ತಲುಪಿದಾಗಲೇ ಅವರ ಲ್ಯಾಪ್‌ಟಾಪ್ ಸಹಿತ ಬ್ಯಾಗ್ ಕಳವಿಗೀಡಾಗಿರುವುದು …

ಪೋಕ್ಸೋ ಪ್ರಕರಣ: ಆರೋಪಿ ಕರ್ನಾಟಕ ನಿವಾಸಿಗೆ 6 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದ ಆರೋಪಿಗೆ ಹೊಸದುರ್ಗ ಫಾಸ್ಟ್ ಟ್ರಾಕ್ ಸ್ಪೆಷಲ್‌ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಎಂ. ಸುರೇಶ್ ಅವರು ಆರು ವರ್ಷ ಕಠಿಣ ಸಜೆ ಹಾಗೂ 30,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕರ್ನಾಟಕ ಬಾಳೆಹೊಸೂರು ಭೀರಪ್ಪ ದೇವಸ್ಥಾನ ಬಳಿಯ ಹೇಲಪ್ಪ ಸುಬ್ಬಣ್ಣ  ಇರೆಗಾರ (36) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೨೫ ಜುಲೈ ೧೬ರಂದು ಮೇಲ್ಪರಂಬ ಪೊಲೀಸ್ …

ವರ್ಕಾಡಿ ಪಂಚಾಯತ್ ದೂರು ಪರಿಹಾರ ಅದಾಲತ್  80ಕ್ಕೂ ಹೆಚ್ಚು ದೂರುಗಳಿಗೆ ಒಂದೇ ಸೂರಿನಡಿ ಪರಿಹಾರ

ವರ್ಕಾಡಿ: ಸ್ಥಳೀಯಾಡಳಿತ ಸಂಸ್ಥೆಗಳು ಜನಸಾಮಾನ್ಯರ ಸಂಕಷ್ಟ, ಸಮಸ್ಯೆ ಹಾಗೂ ಅಹವಾಲುಗಳನ್ನು ಸೂಕ್ಷ್ಮವಾಗಿ ಗುರುತಿಸಿ, ಅವುಗಳಿಗೆ ತ್ವರಿತ ಹಾಗೂ ಸೂಕ್ತ ಪರಿಹಾರ ಒದಗಿಸುವುದರಲ್ಲೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ ಮತ್ತು ‘ರಾಮರಾಜ್ಯ’ ಪರಿಕಲ್ಪನೆಗಳ ನಿಜವಾದ ಸಾಕಾರತೆ ಅಡಗಿದೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಹೇಳಿದರು. ಬಹುಕಾಲಗಳಿಂದ ವಿವಿಧ ಸಮಸ್ಯೆಗಳಿಗೆ ವಿವಿಧ ಸರಕಾರಿ ಕಚೇರಿಗಳಲ್ಲಿ ಅಲೆದಾಡುತ್ತಿರುವ ಜನರಿಗೆ, ಅವರ ಅಹವಾಲು ಗಳನ್ನು ಒಂದೇ ಸೂರಿನಡಿ ಆಲಿಸಿ ಸಂಬAಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳುವ …

ಕರ್ಷಕಮೋರ್ಚಾ ವತಿಯಿಂದ ಕೃಷಿಕ ಅರುಣ್‌ಕುಮಾರ್‌ರಿಗೆ ಸನ್ಮಾನ

ಕಾಸರಗೋಡು: ಬಿಜೆಪಿ ಕಾಸರಗೋಡು ಮಂಡಲ ಕರ್ಷಕ ಮೋರ್ಚಾ ವತಿಯಿಂದ ಕೃಷಿಕರ ದಿನಾಚರಣೆ ಪ್ರಯುಕ್ತ ಕೂಡ್ಲು ತೈವಳಪ್ ನಿವಾಸಿ ಕೃಷಿಕ ಅರುಣ್ ಕುಮಾರ್‌ರನ್ನು ಸನ್ಮಾನಿಸಲಾಯಿತು. ಕರ್ಷಕಮೋರ್ಚಾ ಮಂಡಲ ಅಧ್ಯಕ್ಷೆ ಲೀಲಾ ಕೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳ ಮಜಲ್, ಮಹಿಳಾಮೋರ್ಚ ಕಾಸರಗೋಡು ಮಂಡಲ ಅಧ್ಯಕ್ಷೆ ಶ್ರೀವಿದ್ಯಾ, ಮೊಗ್ರಾಲ್ ಪುತ್ತೂರು ಪಂಚಾಯತ್ ಪ್ರಧಾನ ಕಾರ್ಯದರ್ಶಿ ಗಣೇಶ್, ಸಂಪತ್, ವಿಜು ಕುಮಾರ್, ಸರಳ ಉಪಸ್ಥಿತರಿದ್ದರು.