ಕರ್ಷಕಮೋರ್ಚಾ ವತಿಯಿಂದ ಕೃಷಿಕ ಅರುಣ್‌ಕುಮಾರ್‌ರಿಗೆ ಸನ್ಮಾನ

ಕಾಸರಗೋಡು: ಬಿಜೆಪಿ ಕಾಸರಗೋಡು ಮಂಡಲ ಕರ್ಷಕ ಮೋರ್ಚಾ ವತಿಯಿಂದ ಕೃಷಿಕರ ದಿನಾಚರಣೆ ಪ್ರಯುಕ್ತ ಕೂಡ್ಲು ತೈವಳಪ್ ನಿವಾಸಿ ಕೃಷಿಕ ಅರುಣ್ ಕುಮಾರ್‌ರನ್ನು ಸನ್ಮಾನಿಸಲಾಯಿತು. ಕರ್ಷಕಮೋರ್ಚಾ ಮಂಡಲ ಅಧ್ಯಕ್ಷೆ ಲೀಲಾ ಕೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳ ಮಜಲ್, ಮಹಿಳಾಮೋರ್ಚ ಕಾಸರಗೋಡು ಮಂಡಲ ಅಧ್ಯಕ್ಷೆ ಶ್ರೀವಿದ್ಯಾ, ಮೊಗ್ರಾಲ್ ಪುತ್ತೂರು ಪಂಚಾಯತ್ ಪ್ರಧಾನ ಕಾರ್ಯದರ್ಶಿ ಗಣೇಶ್, ಸಂಪತ್, ವಿಜು ಕುಮಾರ್, ಸರಳ ಉಪಸ್ಥಿತರಿದ್ದರು.
 

You cannot copy contents of this page