ವ್ಯಾಪಾರಿಯನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಹಲ್ಲೆಗೈದು ಕಾರು ಸಹಿತ ತಂಡ ಪರಾರಿ
ಕುಂಬಳೆ: ಬಂದ್ಯೋಡಿನಲ್ಲಿ ವ್ಯಾಪಾರಿಯನ್ನು ತಡೆದು ನಿಲ್ಲಿಸಿ ಹಲ್ಲೆಗೈದ ಬಳಿಕ ಅವರ ಕಾರನ್ನು ತಂಡ ಅಪಹರಿಸಿರುವುದಾಗಿ ದೂರಲಾಗಿದೆ. ವ್ಯಾಪಾರಿಯ ಐಫೋನ್‌ನ್ನು ತಂಡ ಕಸಿದುಕೊಂಡಿದೆ. ಬಂದ್ಯೋಡು ಹಾಗೂ ಮಂಗಳೂರಿನಲ್ಲಿ ವ್ಯಾಪಾರ ಸಂಸ್ಥೆ ನಡೆಸುವ ಮಳ್ಳಂಗೈಯ ಅಲಿ ಮುಕ್ತಾದ್ (34)ರ ಮೇಲೆ ತಂಡ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಅಡ್ಕ ಗುರ್ಮೆ ಸಾರ್ವಜನಿಕ ಸ್ಮಶಾನದ ಸಮೀಪ ಘಟನೆ ನಡೆದಿದೆ. ಅಲಿ ಮುಕ್ತಾದ್ ಬಂದ್ಯೋಡಿನಿಂದ ಮನೆಗೆ ಕಾರಿನಲ್ಲಿ ತೆರಳುತ್ತಿದ್ದರು.ಗುರ್ಮೆಗೆ ತಲುಪಿದಾಗ …
Read more “ವ್ಯಾಪಾರಿಯನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಹಲ್ಲೆಗೈದು ಕಾರು ಸಹಿತ ತಂಡ ಪರಾರಿ”