ಯುವಕನನ್ನು ಕಾರಿನಲ್ಲಿ ಅಪಹರಿಸಿ ಕ್ವಾರ್ಟರ್ಸ್‌ನಲ್ಲಿ  ಬಾಲಕಿಯೊಂದಿಗೆ ನಗ್ನವಾಗಿ ನಿಲ್ಲಿಸಿ ವೀಡಿಯೋ ಚಿತ್ರೀಕರಣ: ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡ್ಡಿ 1 ಲಕ್ಷ  ರೂ. ಲಪಟಾವಣೆ

ಬದಿಯಡ್ಕ:  ಯುವಕನನ್ನು ಕಾರಿನಲ್ಲಿ ಅಪಹರಿಸಿ ಕ್ವಾರ್ಟರ್ಸ್‌ನ ಕೊಠಡಿಯಲ್ಲಿ ಕೂಡಿ ಹಾಕಿ ಪ್ರಾಯಪೂರ್ತಿಯಾಗದ ಬಾಲಕಿಯೊಂದಿಗೆ ನಗ್ನವಾಗಿ ನಿಲ್ಲಿಸಿ  ವೀಡಿಯೋ ಚಿತ್ರೀಕರಿಸಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡಿ 1,02,000 ರೂಪಾಯಿ ಅಪಹರಿಸಿರುವುದಾಗಿ ದೂರಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಸೇರಾಜೆ ನಿವಾಸಿ ಎ.ಎಸ್. ಸುಜಿತ್ ಎಂಬವರು ನೀಡಿದ ದೂರಿನಂತೆ  ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆಗೋಸ್ತ್ ೨೯ರಂದು ಸಂಜೆ  6 ಗಂಟೆಗೆ ಪೆರ್ಲ ಬಳಿಯ ಉಕ್ಕಿನಡ್ಕದಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಈ …

ಮನೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು

ಕುಂಬಳೆ: ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯನ್ನು ನೆರೆಮನೆಯವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ ಘಟನೆ ನಡೆದಿದೆ. ಕೊಪಾಡಿ ಸಿದ್ಧಿಬೈಲು ನಿವಾಸಿ ಪವನೇಶ್ (64) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಸಂಜೆ ಅವರ ಮನೆ ಕೊಠಡಿಯೊಳಗೆ  ಒರಗಿ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾ ಗಿದ್ದರು. ಅದನ್ನು ಕಂಡ ನೆರೆಮನೆಯ ಪ್ರಕಾಶ್ ಮತ್ತು ಇನ್ನೋರ್ವರು ಸೇರಿ ತಕ್ಷಣ ಆಸ್ಪತ್ರೆಗೆ ಸಾಗಿಸಿದರು. ವೈದ್ಯರು ಪರೀಕ್ಷಿಸಿದ ವೇಳೆ ಸಾವನ್ನಪ್ಪಿರು ವುದಾಗಿ ದೃಢಪಡಿಸಿದ್ದಾರೆ. ಈ ಬಗ್ಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. …

ವ್ಯಾಪಾರಿಗೆ ಹಲ್ಲೆಗೈದು ಕಾರು ಅಪಹರಣ: ಮೂವರ ವಿರುದ್ಧ ಕೇಸು

ಕುಂಬಳೆ: ವ್ಯಾಪಾರಿಯನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಹಲ್ಲೆಗೈದು ಅವರ ಕಾರನ್ನು ಅಪಹರಿಸಿಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ಮಂಗಲ್ಪಾಡಿಯ ಶಂಸೀರ್, ಅಯಾಸ್ ಸೇರಿದಂತೆ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ.  ಬಂದ್ಯೋಡು ಹಾಗೂ ಮಂಗಳೂರಿನಲ್ಲಿ ವ್ಯಾಪಾರ ನಡೆಸುವ ಮಳ್ಳಂಗೈಯ ಅಲಿ ಮುಕ್ತಾದ್ (34) ಎಂಬವರಿಗೆ ಹಲ್ಲೆಗೈದು ಅವರ ಕಾರನ್ನು ಅಪಹರಿಸಿದ ಸಂಬಂಧ ಈ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ.  ಈ ತಿಂಗಳ 31ರಂದು ಸಂಜೆ ಅಡ್ಕ ಗುರ್ಮೆ ಸಾರ್ವಜನಿಕ ಸ್ಮಶಾನ ಸಮೀಪ ಅಲಿ …

ಯುವತಿ ನಾಪತ್ತೆ: ಪ್ರಕರಣ ದಾಖಲು

ಕಾಸರಗೋಡು: ಯುವತಿ ನಾಪತ್ತೆಯಾದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಕೂಡ್ಲು ಮೀಪುಗುರಿ ನಿವಾಸಿ ಸುನಿತ (42) ನಾಪತ್ತೆಯಾಗಿದ್ದು, ಆ ಬಗ್ಗೆ ಅವರ ಪತಿ ಪ್ರಜೀಶ್ ಪಿ. ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆಗಸ್ಟ್ 30ರಂದು 5 ಗಂಟೆಗೆ ಮನೆಯಿಂದ  ಹೊರ ಹೋಗಿದ್ದ ಸುನಿತ ಬಳಿಕ ಮನೆಗೆ ಹಿಂತಿರುಗಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

ಕಣಿಪುರ ಕ್ಷೇತ್ರ ಸಮೀಪದ ಚರಂಡಿ ಅವ್ಯವಸ್ಥೆ: ಡಿಸಿಸಿ ಕಾರ್ಯದರ್ಶಿಯ ಕಾಲು ಸಿಲುಕಿ ಗಾಯ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ದ್ವಾರದ ಸಮೀಪ ಚರಂಡಿಯ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿರುವುದಾಗಿ ದೂರ ಲಾಗಿದೆ.  ಚರಂಡಿಗೆ ಪೂರ್ಣವಾಗಿ ಕಬ್ಬಿಣದ ಸರಳು ಅಳವಡಿಸದ ಹಿನ್ನೆಲೆಯಲ್ಲಿ ಈಗಾಗಲೇ ಹಲವರು ಕಾಲು ಸಿಲುಕಿ ಗಾಯಗೊಂಡಿದ್ದಾರೆ. ಇಂದು ಬೆಳಿಗ್ಗೆ ಡಿಸಿಸಿ ಕಾರ್ಯದರ್ಶಿ ಯೂ, ತಾಲೂಕು ಅಭಿವೃದ್ಧಿ ಸಮಿತಿಯ ಸದಸ್ಯನಾದ ಲಕ್ಷ್ಮಣ ಪ್ರಭು (48) ಅವರ ಕಾಲು ಚರಂಡಿಯಲ್ಲಿ   ಸಿಲುಕಿ ಗಾಯಗೊಂಡಿದ್ದಾರೆ.  ಬಳಿಕ ಇವರಿಗೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಕಾರು ನಿಲ್ಲಿಸಿ ಇಳಿದು ಮುಂದೆ ಸಾಗುತ್ತಿದ್ದಂತೆ ಕಾಲು …

ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ನಾಗರಹಾವು: ಆಚಾರ-ಅನುಷ್ಠಾನಗಳ ಪ್ರಕಾರ ಅಂತ್ಯಸಂಸ್ಕಾರ

ಕುಂಬಳೆ:  ಕುಂಬಳೆ   ಬಸ್ ನಿಲ್ದಾಣ ಸಮೀಪ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ನಾಗರ ಹಾವನ್ನು  ಆಚಾರ ಅನುಷ್ಠಾನಗಳ ಪ್ರಕಾರ ಅಂತ್ಯಸಂಸ್ಕಾರ ನಡೆಸಲಾಯಿತು. ಆದಿತ್ಯವಾರ ಸಂಜೆ ಇಲ್ಲಿನ ಹೊಸ ಬಸ್ ನಿಲ್ದಾಣ ಸಮೀಪ ನಾಗರಹಾವು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ವಿಷಯ ತಿಳಿದು  ಸೋಮವಾರದಂದು ಸ್ಥಳಕ್ಕೆ ತಲುಪಿದ ಪಂ. ಸದಸ್ಯ ಅಜಿತ್ ಕುಮಾರ್ ಆಚಾರ ಅನುಷ್ಠಾನಗಳ ಪ್ರಕಾರ ಸರ್ಪಸಂಸ್ಕಾರ ನಡೆಸಲು ವ್ಯವಸ್ಥೆ ಏರ್ಪಡಿಸಿದರು. ಇದಕ್ಕಾಗಿ  ಅರ್ಚಕರನ್ನು ಸ್ಥಳಕ್ಕೆ ಕರೆಸಿ  ಆಚಾರ ಅನುಷ್ಠಾನಗಳನ್ನು ಪೂರೈಸಿದ ಬಳಿಕ ಶ್ರೀಗಂಧದ ಕಟ್ಟಿಗೆಯಿಂದ  ಸಂಸ್ಕರಿಸಲಾಯಿತು. 10 ದಿನಗಳ …

ನಾಪತ್ತೆಯಾದ ಮಹಿಳೆ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಚೆರ್ಕಳಕ್ಕೆ ಸಮೀಪದ ಪಾಡಿ ಬೆಳ್ಳೂರು ನಗರ ಇಮ್ರಾನ್ ವಳಪ್ಪಿನಲ್ಲಿರುವ ಮನೆಯಿಂದ ಮೊನ್ನೆ ರಾತ್ರಿ ನಾಪತ್ತೆಯಾಗಿದ್ದ ದಾಕ್ಷಾಯಿಣಿ ಅಮ್ಮ (78) ಅವರ ಮೃತದೇಹ ಮನೆ ಸಮೀಪದ ಅಡಿಕೆ ತೋಟದ ಆವರಣವಿಲ್ಲದ ಬಾವಿಯಲ್ಲಿ ಪತ್ತೆಯಾಗಿದೆ. ಮೊನ್ನೆ ರಾತ್ರಿ ಕೊಠಡಿಯಲ್ಲಿ ಮಲಗಿದ್ದ ಇವರು ನಂತರ ನಾಪತ್ತೆಯಾಗಿದ್ದರು. ಅವರಿಗಾಗಿ ಮನೆಯವರು ಊರವರು ಹಾಗೂ ಕಾಸರಗೋಡು ಅಗ್ನಿಶಾಮಕ ದಳದವರು ಅಲ್ಲೇ ಪಕ್ಕದಕೆರೆಗಳಲ್ಲಿ ವ್ಯಾಪಕ ಶೋಧ ನಡೆಸಿದ್ದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆ ಬಳಿಕ ಅಲ್ಲೇ ಪಕ್ಕದ ಕಂಗಿನ ತೋಟದಲ್ಲಿರುವ ಬಾವಿಯಲ್ಲಿ ನಿನ್ನೆ ಸಂಜೆ ಹುಡುಕಾಟ …

ಜೋಡುಕಲ್ಲಿನಲ್ಲಿ ಲೋಕೋಪಯೋಗಿ ಇಲಾಖೆಯ ಸ್ಥಳದಲ್ಲಿ ಸೇವಾ ಭಾರತಿಯ ಆಡಿಟೋರಿಯಂ-ಯೂತ್ ಲೀಗ್ ಆರೋಪ

ಉಪ್ಪಳ: ಜೋಡುಕಲ್ಲಿನಲ್ಲಿ  ಲೋ ಕೋಪಯೋಗಿ  ಹಾಗೂ ಕಂದಾಯ ಇಲಾಖೆಯ ಸ್ಥಳವನ್ನು ಅತಿಕ್ರಮಿಸಿ ಸೇವಾ ಭಾರತಿ ಟ್ರಸ್ಟ್ ನ ಹೆಸರಲ್ಲಿ ಆಡಿಟೋರಿಯಂ ನಿರ್ಮಿಸಿರುವುದಾಗಿ ಯೂತ್ ಲೀಗ್ ಆರೋಪಿಸಿದೆ. ಯೂತ್ ಲೀಗ್ ನೇತಾರನೂ ಜಿಲ್ಲಾ ಪಂಚಾಯತ್ ಸದಸ್ಯನಾದ ಅಸೀಸ್ ಕಳತ್ತೂರು,  ಸಿದ್ದಿಕ್ ದಂಡೆಗೋಳಿ, ಮಜೀದ್ ಪಚ್ಚಂಬಳ ಎಂಬಿವರು ಈ ಆರೋಪಹೊರಿಸಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಜೋಡುಕಲ್ಲಿನಲ್ಲಿ ಸರಕಾರಿ ಸ್ಥಳವನ್ನು ಅತಿಕ್ರಮಿಸಿ ಆಡಿಟೋರಿಯಂ ನಿರ್ಮಿಸಿರುವುದಾಗಿ ದೂರಲಾಗಿದೆ. ೨೦,೦೦೦ ಚದರ ಅಡಿ ವಿಸ್ತೀ ರ್ಣದ ಕಟ್ಟಡವನ್ನು ನಿರ್ಮಿಸಿರುವುದಾಗಿ ಯೂತ್ ಲೀಗ್ ನೇತಾರರು …

ಎಲ್‌ಐಸಿಯ 70ನೇ ವಾರ್ಷಿಕ ವಾರಾಚರಣೆಗೆ ಕಾಸರಗೋಡು ಬ್ರಾಂಚ್‌ನಲ್ಲಿ ಚಾಲನೆ

ಕಾಸರಗೋಡು: ಲೈಫ್ ಇನ್ಶೂರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯದ ೭೦ನೇ ವಾರ್ಷಿಕಾಚರಣೆಯಂಗವಾಗಿ  ಕಾಸರಗೋಡು ಬ್ರಾಂಚ್‌ನಲ್ಲಿ ಆಯೋಜಿಸುವ ಒಂದು ವಾರ ಕಾಲ ನಡೆಯುವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಕಾಸರಗೋಡು ಎಲ್‌ಐಸಿ ಬ್ರಾಂಚ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಡೆವಲಪ್‌ಮೆಂಟ್ ಪ್ಯಾಕೇಜ್ ಸ್ಪೆಷಲ್ ಆಫೀಸರ್ ಚಂದ್ರನ್ ವಿ. ಉದ್ಘಾಟಿಸಿದರು. ಸೀನಿಯರ್ ಬ್ರಾಂಚ್ ಮೆನೇಜರ್ ಎಂ.ವಿ. ಶ್ರೀಜಿತ್ ಅಧ್ಯಕ್ಷತೆ ವಹಿಸಿದರು. ವಿಮೆಯ ಪ್ರಾಮುಖ್ಯತೆ ಬಗ್ಗೆ, ಸಾಮಾಜಿಕ ಪ್ರಸ್ತುತತೆಯ ಬಗ್ಗೆ ಹೊಸ ತಲೆಮಾರಿಗೂ ಮಾಹಿತಿ ತಲುಪಿಸುವುದಕ್ಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಪ್ರೀತಪ್ರೇಮನ್ ಸ್ವಾಗತಿಸಿದರು. ಮತಿಯರಸು …

ಐಲ ಕ್ಷೇತ್ರ ರಸ್ತೆ ಪುನರ್ ನಿರ್ಮಾಣಕ್ಕೆ ಪಂಚಾಯತ್ ಅಧ್ಯಕ್ಷರಿಗೆ ಮನವಿ

ಉಪ್ಪಳ: ಐಲ ಕ್ಷೇತ್ರಕ್ಕೆ ಸಂಚರಿಸುವ ಮಂಗಲ್ಪಾಡಿ ಪಂಚಾಯತ್‌ನ ಎದುರಲ್ಲೇ ಇರುವ ರಸ್ತೆಯ ಶೋಚನೀಯಾವಸ್ಥೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿ ವೀರಪ್ಪ ಅಂಬಾರ್ ನೇತೃತ್ವದಲ್ಲಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್‌ರಿಗೆ ಮನವಿ ಸಲ್ಲಿಸಲಾಯಿತು. ಐಲ ಕ್ಷೇತ್ರ, ಪೆರಿಂಗಡಿ ಮಸೀದಿ, ಅಂಗನವಾಡಿ, ಪಾರೆಕಟ್ಟೆ ಮಾರ್ಗವನ್ನು ಸಂಪರ್ಕಿಸಲು ಇದೇ ರಸ್ತೆಯನ್ನು ಉಪಯೋಗಿಸಬೇಕಾಗಿದ್ದು, ಈ ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿ ಕೆಸರು ತುಂಬಿಕೊಂಡು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಮನವಿಗೆ ಸ್ಪಂದಿಸಿದ ಅಧ್ಯಕ್ಷರು ಸೂಕ್ತ ಪರಿಹಾರ ಭರವಸೆ ನೀಡಿದ್ದಾರೆ. ಪಂಚಾಯತ್ ಸದಸ್ಯರಾದ ವಸಂತ ಕುಮಾರ್ ಮಯ್ಯ, ಪ್ರೇಮ್ …