ಕೊಳವೆ ಯಂತ್ರ ಒಳಗೊಂಡ ಲಾರಿ ಮನೆಮೇಲೆ ಬಿದ್ದು ಇಬ್ಬರು ಕಾರ್ಮಿಕರ ದಾರುಣ ಸಾವು: ಮನೆಯವರು ಪವಾಡ ಸದೃಶ್ಯ ಪಾರು

ಕಾಸರಗೋಡು: ಕೊಳವೆ ಬಾವಿ ಯಂತ್ರ ಒಳಗೊಂಡ  ವಾಹನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದು ಕಾರ್ಮಿಕರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ವೆಸ್ಟ್ ಎಳೇರಿ ವರಕ್ಕಾಟ್‌ನಲ್ಲಿ ಇಂದು ಮುಂಜಾನೆ ನಡೆದಿದೆ. ವಾಹನದಲ್ಲಿದ್ದ ಕಾರ್ಮಿಕರಾದ ಮಧ್ಯಪ್ರದೇಶ ನಿವಾಸಿ  ದೇವೇಂದ್ರ ಮತ್ತು  ಛತ್ತೀಸ್‌ಗಡ್ ನಿವಾಸಿ ಮುನಾಸರ್  ಸಾವನ್ನಪ್ಪಿದ ದುರ್ದೈವಿಗಳು.  ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕೊಳವೆ ಯಂತ್ರ ಅಳವಡಿಸಿದ ವಾಹನ ಇಂದು ಮುಂಜಾನೆ ವೆಸ್ಟ್ ಎಳೇರಿ ವರಕ್ಕಾಟ್ ತಿರುವಿನ ಇಳಿಜಾರು ರಸ್ತೆ …

ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ: ಇಬ್ಬರ ಬಂಧನ

ಕುಂಬಳೆ:  ಕೇರಳ ನದಿದಡ ಸಂರಕ್ಷಣಾ ಕಾನೂನಿಗೆ ವಿರುದ್ಧವಾಗಿ ಪಾಚಾಣಿ ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ತೆಗೆದು ಲಾರಿಯಲ್ಲಿ ಸಾಗಿಸುತ್ತಿದ್ದ ವೇಳೆ ಕುಂಬಳೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶಿರಿಯಾ ಗ್ರಾಮದ ಶಿರಿಯಾ ಕೆ.ವಿ. ನಿಲಯದ ರಜಿನ್ ಕುಮಾರ್ (29), ಇಚ್ಲಂಗೋಡು ಗ್ರಾಮದ ವೀರನಗರ ಅಡ್ಕ ನಿವಾಸಿ ಮುಖೇಶ್ (27) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಅಲ್ಲದೆ ಹೊಯ್ಗೆ ಸಾಗಾಟಕ್ಕೆ ಬಳಸಿದ ಲಾರಿಯ ಆರ್.ಸಿ ಮಾಲಕನ ವಿರುದ್ಧವೂ ಕೇಸು ದಾಖಲಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.  ನಿನ್ನೆ ಬೆಳಿಗ್ಗೆ ೧೧.೩೦ರ ವೇಳೆ ಚೇವಾರು ಎಂಬಲ್ಲಿ …

ಸೇವಾ ಸಂಕಲ್ಪ ಅಭಿಯಾನದಂಗವಾಗಿ ಕರಂದಕ್ಕಾಡ್ ಪಾರ್ಕ್ ಶುಚೀಕರಣ

ಕಾಸರಗೋಡು: ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಗಾಂಧಿ ಜಯಂತಿ ದಿನದಂದು ಕಾಸರಗೋಡು ನಗರಸಭೆ ವ್ಯಾಪ್ತಿಯ ಕರಂದಕ್ಕಾಡ್ ರೋಟರಿ ಪಾರ್ಕ್ನ್ನು ಬಿಜೆಪಿ – ಯುವ ಮೋರ್ಚಾ ಕಾರ್ಯಕರ್ತರ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಯಿತು.ಬಿಜೆಪಿ ರಾಜ್ಯ ಸೆಲ್ ಕೋರ್ಡಿನೇಟರ್ ವಿ.ಕೆ. ಸಜೀವನ್, ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್., ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್‌ಚಂದ್ರ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್, ರಾಜ್ಯ …

ಹೊಸಂಗಡಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಶೀಘ್ರ ಆರಂಭಿಸಲು ಆಗ್ರಹಿಸಿ ವ್ಯಾಪಾರಿಗಳಿಂದ ಪ್ರತಿಭಟನೆ

ಮಂಜೇಶ್ವರ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ನೇತೃತ್ವದಲ್ಲಿ ಹೊಸಂಗಡಿ ರೈಲ್ವೆ ಮೇಲ್ಸೇತುವೆಯ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸುವಂತೆ ಆಗ್ರಹಿಸಿ ಮಂಜೇಶ್ವರ ಹೊಸಂಗಡಿ ರೈಲ್ವೆ ಸೇತುವೆ ಸಮೀಪ ಬೃಹತ್ ಪ್ರತಿಭಟನೆ ನಿನ್ನೆ ನಡೆಸಲಾಯಿತು. ನೇತಾರರಾದ ಎನ್.ಎ. ಅಬ್ದುಲ್ ಹಮೀದ್, ಸತ್ಯಜ್ಯೋತ್, ಹಸ್ಸೈನಾರ್, ಹನೀಫ್ ಪ್ರೊಸೋಟ್, ಅಬ್ಬು ಹಾಜಿ ಕಡಂಬಾರ್, ಗಾಯತ್ರಿ ಟೀಚರ್, ಇಸಾಕ್, ಹಮೀರ್, ಅಶ್ರಫ್, ಸಿದ್ದೀಕ್, ಮುಹ್ಸಿನ್, ಖಲೀಲ್, ಮೂಸ ನೇತೃತ್ವ ನೀಡಿದರು. ಈ ಸಂದರ್ಭ ಹೊಸಂಗಡಿ ರೈಲ್ವೆ ಮೇಲ್ಸೇತುವೆಯ ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ …

ಗೂಡಂಗಡಿ, ಹೋಟೆಲ್‌ಗಳಲ್ಲಿ ಆಹಾರ ಭದ್ರತಾ ಇಲಾಖೆ ಅಧಿಕಾರಿಗಳಿಂದ ದಾಳಿ, ತಪಾಸಣೆ

ಕಾಸರಗೋಡು: ಉಪಯೋ ಗಿಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಉಪಯೋಗಿಸುತ್ತಿರುವುದಾಗಿ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ಕಾಸರಗೋಡು, ಕಾಞಂಗಾಡ್ ನಗರದ ಹಲವು ಹೋಟೆಲ್ ಹಾಗೂ ಗೂಡಂಗಡಿಗಳಿಗೆ ಆಹಾರ ಭದ್ರತಾ ಇಲಾಖೆ ದಾಳಿ ನಡೆಸಿ ತಪಾಸಣೆ ನಡೆಸಿದೆ. ತಪಾಸಣೆಯಲ್ಲಿ ೧೮೦ ಲೀಟರ್ ಉಪಯೋಗಿಸಿದ ಅಡುಗೆ ಎಣ್ಣೆಯನ್ನು ಪತ್ತೆಹಚ್ಚಲಾಗಿದೆ. ಇವುಗಳನ್ನು ನಾಶಪಡಿಸಲಾಯಿತು.  ಆಹಾರ ಭದ್ರತಾ ಮಾನದಂಡಗಳನ್ನು ಪಾಲಿಸದ ೨೧ ಸಂಸ್ಥೆಗಳಿಗೆ ದಂಡ ವಸೂಲು ಮಾಡಲಿಕ್ಕಿರುವ ನೋಟೀಸ್ ನೀಡಲಾಯಿತು. ರಾಜ್ಯದೆಲ್ಲಡೆಯಾಗಿ ಆಹಾರ ಭದ್ರತಾ ಇಲಾಖೆ ಜ್ಯಾರಿಗೊಳಿಸುವ ಆಪರೇಶನ್ ‘ತೆಳಿಮ’ದ ಅಂಗವಾಗಿ ಜಿಲ್ಲೆಯಲ್ಲೂ ತಪಾಸಣೆ ನಡೆಸಲಾಗಿದೆ. …

ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಮಹಾಸಭೆ

ಬದಿಯಡ್ಕ: ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಮಹಾಸಭೆ ಮವ್ವಾರಿನಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆಯಿತು.ಬ್ಯಾಂಕ್ ಅಧ್ಯಕ್ಷ ಎಂ.ಸAಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸದಸ್ಯರಿಗೆ ಶೇ.3 ಲಾಭಾಂಶವನ್ನು ಘೋಷಿಸಲಾಯಿತು. ಬ್ಯಾಂಕ್ ಕಾರ್ಯದರ್ಶಿ ಮಾಧವ ಶರ್ಮಾ ಕುರುಮುಜ್ಜಿ ವರದಿ ವಾಚಿಸಿದರು. ಸಹ ಕಾರ್ಯದರ್ಶಿ ಲೋಕೇಶ್ ರೈ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಎಂ.ಶ್ರೀಧರ ಭಟ್ ಸ್ವಾಗತಿಸಿದರು. ನಿರ್ದೇಶಕ ಹರಿನಾರಾಯಣ ಶಿರಂತ್ತಡ್ಕ ವಂದಿಸಿದರು. ನಾರಾಯಣ ಎಂ. ಪ್ರಾರ್ಥನೆ ಹಾಡಿದರು. ನಿರ್ದೇಶಕರಾದ ಜಯಪ್ರಕಾಶ್ ಶೆಟ್ಟಿ, ಡಾ. ವೇಣುಗೋಪಾಲ ಕೆ., ರಾಮಕೃಷ್ಣ ಭಟ್ ಮವ್ವಾರು, …

ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ

ಮೀಂಜ: ಮೀಯಪದವು ಸೇವಾ ಸಹಕಾರಿ ಬ್ಯಾಂಕ್‌ನ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಪಂಚಾಯತ್ ಮಾರ್ಕೆಟ್ ಹಾಲ್‌ನಲ್ಲಿ, ಬ್ಯಾಂಕದನ ಅಧ್ಯಕ್ಷ ರಘುನಾಥ ಶೆಟ್ಟಿ ಕೊಮ್ಮಂಗಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಬ್ಯಾಂಕ್‌ನ ವಾರ್ಷಿಕ ವರದಿ, ಲೆಕ್ಕಪತ್ರಗಳು, ವ್ಯವಹಾರಗಳು ಹಾಗೂ ಪ್ರಗತಿಯ ವಿವರಗಳನ್ನು ಮಂಡಿಸಲಾಯಿತು. ಬ್ಯಾಂಕ್‌ನ ವಿವಿಧ ಚಟುವಟಿಕೆಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು. 2025-26ನೇ ಸಾಲಿನ 10ನೇ ತರಗತಿ ಹಾಗೂ ದ್ವಿತೀ ಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗ ಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಮೀಯಪದವಿನ …

ವರ್ಕಾಡಿ ಪಂಚಾಯತ್‌ನಿಂದ ರೈತರಿಗೆ ಎಮ್ಮೆಕರು ವಿತರಣೆ

ವರ್ಕಾಡಿ: ವರ್ಕಾಡಿ ಪಂಚಾ ಯತ್‌ನ 2025-26ನೇ ಸಾಲಿನ ವಾರ್ಷಿಕ ಯೋಜನೆಯಡಿ ಯಲ್ಲಿ ಕೃಷಿಕರಿಗೆ ಎಮ್ಮೆಕರು ವಿತರಣೆಯ ಎರಡನೇ ಹಂತದ ಕಾರ್ಯಕ್ರಮ ವರ್ಕಾಡಿ ಮೃಗಾಸ್ಪತ್ರೆಯ ಆವರಣದಲ್ಲಿ ಜರಗಿತು. ಪಂಚಾಯತ್ ಅಧ್ಯಕ್ಷ ಉಮ್ಮರ್ ಬೋರ್ಕಳ ಉದ್ಘಾಟನೆ ನೆರವೇರಿಸಿದರು. ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ ಅಧ್ಯಕ್ಷೆ ವಹಿಸಿದರು. ಈ ಯೋಜನೆಯಡಿಯಲ್ಲಿ ಒಟ್ಟು 32 ಮಂದಿ ಕೃಷಿಕರಿಗೆ ಎಮ್ಮೆ ಕರುಗಳನ್ನು ನೀಡುವ ಗುರಿಯನ್ನು ಹೊಂದಲಾಗಿದ್ದು, ಅದರ ಎರಡನೇ ಹಂತವಾಗಿ ೧೫ ಮಂದಿಗೆ ವಿತರಿಸಲಾಯಿತು. ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ …

ಕುಂಬಳೆ ಶಾಲೆಯಲ್ಲಿ ರ‍್ಯಾಗಿಂಗ್ ವಿರುದ್ಧ ಕಾರ್ಯಾಗಾರ

ಕುಂಬಳೆ: ರ‍್ಯಾಗಿಂಗ್ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ಎಂಬ ಉದ್ದೇಶದೊಂದಿಗೆ ಮೊಗ್ರಾಲ್ ದೇಶಿಯವೇದಿ ನಡೆಸುವ ಜಿಲ್ಲಾಮಟ್ಟದ ರ‍್ಯಾಗಿಂಗ್ ವಿರುದ್ಧ ಕಾರ್ಯಾಗಾರದ ದ್ವಿತೀಯ ಹಂತದ ತಿಳುವಳಿಕಾ ತರಬೇತಿ ಕುಂಬಳ ಜಿಎಚ್‌ಎಸ್‌ಎಸ್‌ನಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ಅಸೀಸ್ ಕಳತ್ತೂರು ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷ ಮೊದೀನ್ ಅಸೀಸ್ ಅಧ್ಯಕ್ಷತೆ ವಹಿಸಿದರು. ರ‍್ಯಾಗಿಂಗ್‌ನ ಗಂಭೀರ ಆಘಾತಗಳು ಹಾಗೂ ಕಾನೂನು ಕ್ರಮಗಳ ಬಗ್ಗೆ ಕುಂಬಳೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅನೂಪ್ ಸ್ಟೀಫನ್ ವಿದ್ಯಾರ್ಥಿಗಳಿಗೆ ವಿವರಿಸಿದರು. ರ‍್ಯಾಗಿಂಗ್ ಗಮನಕ್ಕೆ ಬಂದರೆ …

ಬಿಎಸ್‌ಎನ್‌ಎಲ್ ಕೇಬಲ್ ಕತ್ತರಿಸಿ ಸಾಗಿಸಲೆತ್ನ: ಇಬ್ಬರು ಅಸ್ಸಾಂ ನಿವಾಸಿಗಳ ಸೆರೆ

ಕಾಸರಗೋಡು: ಬಿಎಸ್‌ಎನ್ ಎಲ್‌ನ ಕೇಬಲ್‌ನ್ನು ಕತ್ತರಿಸಿ ಸಾಗಿಸಲೆತ್ನಿಸಿದ ಆರೋಪದಂತೆ ಅಸ್ಸಾಂ ನಿವಾಸಿಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ನಿವಾಸಿಗಳಾದ ಶಾಹಿರುಲ್ ಇಸ್ಲಾಂ (29) ಮತ್ತು ಅಮೀರುಲ್ ಇಸ್ಲಾಂ (3೦) ಬಂಧಿತ ಆರೋಪಿಗಳು, ಭೀಮ ನಡಿ ಸೇತುವೆ ಬಳಿ ಚಿತ್ತಾರಿಕ್ಕಲ್ ಪೊಲೀಸರು ವಾಹನದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಆ ಸೇತುವೆ ಬಳಿ ಆರೋಪಿ ಗಳಿಬ್ಬರು ಕೇಬಲ್ ಕತ್ತರಿಸುತ್ತಿರುವುದನ್ನು ಕಂಡು ತಕ್ಷಣ ಅವರಿಬ್ಬರನ್ನು ಸೆರೆಹಿಡಿದು  ಪ್ರಕರಣ ದಾಖಲಿಸಿಕೊಂಡರು.