ಹಿಂದು ಸಮಾಜ ಎಚ್ಚೆತ್ತುಕೊಂಡಿದೆ, ಷಡ್ಯಂತ್ರಗಳನ್ನು ಎದುರಿಸಲು ಸಮರ್ಥವಾಗಿದೆ- ಶ್ರೀ ರಾಜಶೇಖರಾನಂದ ಸ್ವಾಮೀಜಿ
ಉಪ್ಪಳ :ನಿದ್ದೆಯಲ್ಲಿದ್ದ ಹಿಂದು ಯಾವತ್ತೋ ಎದ್ದಾಗಿದೆ. ಹಿಂದು ಸಮಾಜ ಸದೃಢಗೊಂಡಿದ್ದು, ದಿನದ ೨೪ ಗಂಟೆಗಳ ಕಾಲವೂ ಎಚ್ಚೆತ್ತು ಕೊಂಡು ಕಾರ್ಯಪ್ರವೃತ್ತವಾಗಿದೆ. ಆದ್ದರಿಂದ ಅನ್ಯಮತೀಯರ ಯಾವುದೇ ಷಡ್ಯಂತ್ರಗಳನ್ನು ಸಮರ್ಥ ವಾಗಿ ಎದುರಿಸಲು ತಯಾರಿದ್ದೇವೆ ಎಂದು ಗುರುಪುರ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಜೋಡುಕಲ್ಲು ಶ್ರೀ ಗಣೇಶ ಮಂದಿರ ಸಂರಕ್ಷಣಾ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಜೋಡುಕಲ್ಲು ಜಂಕ್ಷನ್‌ನಲ್ಲಿ ನಿನ್ನೆ ಸಂಜೆ ಜರಗಿದ ಜಾಗೃತ ಹಿಂದು ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೇರಳ ಹೈಕೋರ್ಟ್ಗೆ ಈ ನಿಟ್ಟಿನಲ್ಲಿ …