ಹಿಂದು ಸಮಾಜ ಎಚ್ಚೆತ್ತುಕೊಂಡಿದೆ, ಷಡ್ಯಂತ್ರಗಳನ್ನು ಎದುರಿಸಲು ಸಮರ್ಥವಾಗಿದೆ- ಶ್ರೀ ರಾಜಶೇಖರಾನಂದ ಸ್ವಾಮೀಜಿ

ಉಪ್ಪಳ :ನಿದ್ದೆಯಲ್ಲಿದ್ದ ಹಿಂದು ಯಾವತ್ತೋ ಎದ್ದಾಗಿದೆ. ಹಿಂದು ಸಮಾಜ ಸದೃಢಗೊಂಡಿದ್ದು, ದಿನದ ೨೪ ಗಂಟೆಗಳ ಕಾಲವೂ ಎಚ್ಚೆತ್ತು ಕೊಂಡು ಕಾರ್ಯಪ್ರವೃತ್ತವಾಗಿದೆ. ಆದ್ದರಿಂದ ಅನ್ಯಮತೀಯರ ಯಾವುದೇ ಷಡ್ಯಂತ್ರಗಳನ್ನು ಸಮರ್ಥ ವಾಗಿ ಎದುರಿಸಲು ತಯಾರಿದ್ದೇವೆ ಎಂದು ಗುರುಪುರ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಜೋಡುಕಲ್ಲು ಶ್ರೀ ಗಣೇಶ ಮಂದಿರ ಸಂರಕ್ಷಣಾ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಜೋಡುಕಲ್ಲು ಜಂಕ್ಷನ್‌ನಲ್ಲಿ ನಿನ್ನೆ ಸಂಜೆ ಜರಗಿದ ಜಾಗೃತ ಹಿಂದು ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೇರಳ ಹೈಕೋರ್ಟ್ಗೆ ಈ ನಿಟ್ಟಿನಲ್ಲಿ ಸಲ್ಲಿಸಿದ ಅರ್ಜಿಯನ್ನು ಹಿಂಪಡೆದು ಈ ಪ್ರಕ ರಣವನ್ನು ಇಲ್ಲಿಗೆ ಸುಖಾಂತ್ಯಗೊಳಿ ಸಲು ಜಿಲ್ಲಾಡಳಿತ ತಯಾರಾಗ ಬೇಕೆಂದು ಅವರು ಸಲಹೆ ನೀಡಿದರು.
ಹಿಂದು ಐಕ್ಯ ವೇದಿಕೆಯ ಕೇರಳ ರಾಜ್ಯ ಉಪಾಧ್ಯಕ್ಷ ವಲ್ಸನ್ ತಿಲ್ಲಂಗೇರಿ ಮುಖ್ಯ ಭಾಷಣ ಮಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಭಾಷಣ ಮಾಡಿ, ಜೋಡುಕಲ್ಲು ಶ್ರೀ ಗಣೇಶ ಮಂದಿರದ ವಿಚಾರದಲ್ಲಿ ಮುಸ್ಲಿಂಲೀಗ್ ಷಡ್ಯಂತ್ರ ಮಾಡಿದ ಹಿನ್ನೆಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದುಗಳು ಒಂದೆಡೆ ಸೇರಲು ಸಾಧ್ಯವಾಯಿತು ಎಂದು ಅವರು ನುಡಿದರು. ಕೇರಳದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಸ್ಲಿಂಲೀಗ್ ನುಂಗಲು ಹೊರಟಿದೆ ಎಂದರು. ಜೋಡುಕಲ್ಲಿನ ಕೇವಲ ೨೭ ಸೆಂಟ್ಸ್ ಜಾಗದ ಬಗ್ಗೆ ಲೋಕೋಪಯೋಗಿ ಇಲಾಖೆಯದ್ದು ಎಂಬ ಸಬೂಬು ನೀಡಿ ತಕರಾರು ತೆಗೆಯಲಾಗಿದೆ ಎಂದ ಅವರು, ಅದೆಷ್ಟೋ ಕಡೆಗಳಲ್ಲಿ ಸರಕಾರಿ ಭೂಮಿಯಲ್ಲಿ ಮಸೀದಿ, ಮದ್ರಸಾ, ಕ್ಲಬ್‌ಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ತೆರವುಗೊಳಿಸಲು ಕೇರಳ ಸರಕಾರ ಮೊದಲ ಆದ್ಯತೆ ನೀಡಲಿ ಎಂದರು. ಸಂರಕ್ಷಣಾ ಕ್ರಿಯಾ ಸಮಿತಿಯ ಅಧ್ಯಕ್ಷ ಬೃಹಶ್ರೀ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಕಾರಣಕ್ಕೂ ಜೋಡುಕಲ್ಲು ಶ್ರೀ ಗಣೇಶ ಮಂದಿರವಿರುವ ಚಪ್ಪರವನ್ನು ತೆರವುಗೊಳಿಸಲು ಆಸ್ಪದ ನೀಡುವುದಿಲ್ಲ. ಈ ನಿಟ್ಟಿನಲ್ಲಿ ಮಾತುಕತೆ ನಡೆಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಹಿಂದು ಸಂಘಟನೆಗಳ ನಿಯೋಗವು ತೆರಳಿದ್ದಾಗ ಜಿಲ್ಲಾಧಿಕಾರಿಗಳು ಅವಮಾನಿಸಿ ಕಳುಹಿಸಿದ್ದಾರೆ. ಆದರೆ ಇಂತಹ ಅವಮಾನಕ್ಕೆ ಹಿಂದು ಸಮಾಜ ಎಂದೆAದಿಗೂ ಹೆದರುವುದಿಲ್ಲ. ಮಾತ್ರವಲ್ಲದೆ ಕೇರಳ ಹೈಕೋರ್ಟ್ನ ಆದೇಶವಿದೆ ಎಂಬ ನೆಪವೊಡ್ಡಿ ಶ್ರೀ ಗಣೇಶ ಮಂದಿರವಿರುವ ಚಪ್ಪರವನ್ನು ಮುರಿದು ತೆರವುಗೊಳಿಸಲು ಬಂದರೆ ಮುಂದಾಗುವ ಎಲ್ಲಾ ಅನಾಹುತಗಳಿಗೆ ಮುಸ್ಲಿಂಲೀಗ್ ಮತ್ತು ಜಿಲ್ಲಾಡಳಿತ ಹೊಣೆಯಾಗಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ. ಹೇಮಾವತಿ ಎನ್.ರಾವ್ ಕಾಯರ್‌ಕಟ್ಟೆ ಉಪಸ್ಥಿತರಿದ್ದರು. ಕಿಶೋರ್ ಪೆರ್ಲ ಸಂಪೂರ್ಣ ವಂದೇ ಮಾತರಂ ಹಾಡಿದರು. ಹಿಂದು ಐಕ್ಯ ವೇದಿಕೆಯ ಜಿಲ್ಲಾಧ್ಯಕ್ಷ ಎಸ್.ಪಿ. ಶಾಜಿ ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರು ಪ್ರತಿಜ್ಞೆ ಬೋಧಿಸಿದರು. ವೆಂಕಪ್ಪ ಶೆಟ್ಟಿ ಮಾಸ್ಟರ್ ಕಯ್ಯಾರು ವಂದಿಸಿದರು. ಮಂಜುನಾಥ ಸೊಂದಿ ನಿರೂಪಿಸಿದರು. ಮಾತೆಯರ ಸಹಿತ ಸಾವಿರಾರು ಮಂದಿ ಭಾಗವಹಿಸಿದರು.

RELATED NEWS

You cannot copy contents of this page