ಬಾಲಕಿಗೆ ಲೈಂಗಿಕ ಕಿರುಕುಳ: ಇಬ್ಬರ ವಿರುದ್ದ ಪೋಕ್ಸೋ ಕೇಸು

ಕಾಸರಗೋಡು: ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ 14ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಆಕೆಯ ಸಂಬಂಧಿಕ ಸೇರಿ ಇಬ್ಬರ ವಿರುದ್ಧ ಕಾಸರಗೋಡು ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಓಣಂ ಪರೀಕ್ಷೆ ಬಳಿಕ ಬಾಲಕಿಯನ್ನು ಮೈಸೂರಿಗೆ ಕರೆದೊಯ್ದು ಅಲ್ಲಿ ಸಂಬಂಧಿಕನಾದ ಓರ್ವ ಆಕೆಗೆ ಲೈಂಗಿಕ ಕಿರುಕುಳ ನೀಡಿದನೆಂದೂ, ನಂತರ ಇನ್ನೋರ್ವ ಅಕೆಯನ್ನು ಮೈಸೂರಿನಿಂದ ಮಂಗಳೂರಿಗೆ ಬರುವ ವೇಳೆ ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪರಿಚಿತ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಜೀರ್ಣಗೊಂಡ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ:  ಕಳಿಯೂರು ಅರಂತಾಡಿ ಎಂಬಲ್ಲಿ ತಿಮ್ಮಪ್ಪ ಭಟ್ ಎಂಬವರ ಕೆರೆಯಲ್ಲಿ ಅಪರಿಚಿತ ಪುರುಷನೋರ್ವರ ಮೃತದೇಹ ಪತ್ತೆಯಾಗಿದೆ. ಆ ಬಗ್ಗೆ ತಿಮ್ಮಪ್ಪ ಭಟ್ ನೀಡಿದ ದೂರಿ ನಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹದ ಮಹಜರು ನಡೆಸಿ  ಆಸ್ಪತ್ರೆಗೆ ಸಾಗಿಸಿ ದ್ದಾರೆ.  ಆ  ಬಗ್ಗೆ ಪೊಲೀಸರು ಪ್ರಕ ರಣ ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ಮೃತ ವ್ಯಕ್ತಿ ಯಾರೆಂದು ಈತನಕ ಗುರುತು ಹಚ್ಚಲು ಸಾಧ್ಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಸುಮಾರು ಐದು ದಿನದ ಹಿಂದೆಯೇ ಮೃತಪಟ್ಟಿರಬೇಕೆಂದು ಶಂಕಿಸಲಾಗುತ್ತಿದೆ. ತೋಟಕ್ಕೆ ಕೆಲಸಕ್ಕೆ ಬಂದವರು …

ಕಾಸರಗೋಡಿನಲ್ಲಿ ಭಾರೀ ಕೋಲಾಹಲವೆಬ್ಬಿಸಿದ ಪ್ರದೀಪ್ ಕುಮಾರ್ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ 36 ವರ್ಷಗಳ ಬಳಿಕ ಹೈದರಾಬಾದ್‌ನಿಂದ ಸೆರೆ

ಕಾಸರಗೋಡು: ಕಾಸರಗೋಡು ನಗರದಲ್ಲಿ ಭಾರೀ ಕೋಲಾಹಲವೆಬ್ಬಿಸಿದ ಪ್ರದೀಪ್ ಕುಮಾರ್ ಕೊಲೆ ಪ್ರಕರಣದ ಆರೋಪಿಯನ್ನು 36 ವರ್ಷಗಳ ಬಳಿಕ ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಸರಗೋಡು ತಳಂಗರೆಯ ಗಬ್ಬರ್ ಅಶ್ರಫ್ ಬಂಧಿತ ಆರೋಪಿ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಪಿ. ನಿತಿನ್ ನೇತೃತ್ವದ ನಾರ್ಕೋಟಿಕ್ ಸ್ಕ್ವಾಡ್ ತಂಡದ ಎಸ್‌ಐ ನಾರಾಯಣನ್ ನಾಯರ್, ಗ್ರೇಡ್ ಎಸ್‌ಐ ಅಬೂಬ ಕ್ಕರ್ ಕಲ್ಲಾಯಿ, ಎಎಸ್‌ಐ ಶಾಜು, ಸೀನಿಯರ್ ಸಿವಿಲ್ ಪೊಲೀಸ್ ಆಫೀ ಸರ್ ರಾಜೇಶ್ ಮಾಣಿಯಾಟ್ ಎಂಬ ವರನ್ನೊಳಗೊಂಡ ಪೊಲೀಸರ ತಂಡ ಆರೋಪಿಯನ್ನು …

ಕೋಳಿಅಂಕ ಕೇಂದ್ರಕ್ಕೆ ದಾಳಿ: ಐದು  ಕೋಳಿ, ನಗದು ವಶ; ಆರು ಮಂದಿ ಸೆರೆ

ಬದಿಯಡ್ಕ: ನೀರ್ಚಾಲು ಗೋಳಿಯಡ್ಕ ಶಾಂತಿಪಳ್ಳ ಎಂಬಲ್ಲಿ  ಕೋಳಿ ಅಂಕ ಕೇಂದ್ರಕ್ಕೆ ಬದಿಯಡ್ಕ ಪೊಲೀಸರು ನಿನ್ನೆ ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಸೆರೆಹಿಡಿದು ಐದು ಕೋಳಿ ಮತ್ತು 1620 ರೂ. ನಗದು ವಶಪಡಿಸಿಕೊಂಡಿದ್ದಾರೆ.  ಕಾಸರಗೋಡು ಕರಂದಕ್ಕಾಡಿನ ದಿನೇಶ (26), ನೀರ್ಚಾಲು ಮಕ್ಕಿಕ್ಕರದ ಈಶ್ವರ (62), ಬಂದ್ಯೋಡು ಮುಣ್ಚಿಯತ್ತಡ್ಕದ ಬಾಲಕೃಷ್ಣ ರೈ (46), ನೀರ್ಚಾಲು ಕೋಡಿಯಡ್ಕದ ಸರವು ರೈ (42), ಕೂಡ್ಲಿನ  ಜಯಂತ (48) ಮತ್ತು ನೀರ್ಚಾಲು ಪಡಿಯಡ್ಕದ ಅಶೋಕನ್(55) ಎಂಬವರನ್ನು ಪೊಲೀಸರು ಸೆರೆಹಿಡಿದು ಪ್ರಕರಣ …

ಸಂಚಾರಿ ಬಾರ್: ಕಾರಿನಲ್ಲಿ ಸಾಗಿಸುತ್ತಿದ್ದ 20.5 ಲೀಟರ್ ಮದ್ಯ ಸಹಿತ ಯುವಕ ಸೆರೆ

ಹೊಸದುರ್ಗ: ಕಾರಿನಲ್ಲಿ ಸಾಗಿಸುತ್ತಿದ್ದ 41 ಬಾಟ್ಲಿ ಭಾರತ ನಿರ್ಮಿತ ವಿದೇಶ ಮದ್ಯ ಸಹಿತ ಯುವಕ ಸೆರೆಯಾಗಿದ್ದಾನೆ. ಚೆರುವತ್ತೂರು, ತುರುತ್ತಿ, ಕೈದಕ್ಕಾಡ್ ಪುದಿಯ ಪುರದಲ್ಲಿನ ನಿವಾಸಿ ಪಿ.ಪಿ. ಶಶಿ (46)ನನ್ನು ಜಿಲ್ಲಾ ನಾರ್ಕೋಟಿಕ್ ಸೆಲ್‌ನ ಅಧೀನದಲ್ಲಿರುವ ಡಾನ್ಸಾಪ್ ತಂಡ ಸೆರೆ ಹಿಡಿದು ಚಂದೇರ ಪೊಲೀಸರಿಗೆ ಹಸ್ತಾಂತರಿಸಿದೆ. ನಿನ್ನೆ ರಾತ್ರಿ ಕೈದಕ್ಕಾಡ್ ಕುಳಂಙೋಟ್‌ಮಲ ಎಂಬಲ್ಲಿ ನಿಲ್ಲಿಸಿದ್ದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದೆ. ಈ ಸಮಯದಲ್ಲಿ ಈ ದಾರಿಯಾಗಿ ಪೊಲೀಸ್ ತಂಡ ಸಂಚರಿಸಿದ್ದು, ಕಾರಿನೊಳಗೆ ತಪಾಸಣೆ ನಡೆಸಿದಾಗ 500 ಮಿಲ್ಲಿ ಲೀಟರ್‌ನ 41 …

ಟೈಲ್ಸ್ ಕೆಲಸಕ್ಕೆ ತಲುಪಿದ ವ್ಯಕ್ತಿ ರೈಲಿನಲ್ಲಿ ಮೊಬೈಲ್‌ಫೋನ್ ಕಳವುಗೈದು ಸೆರೆ

ಕಾಸರಗೋಡು: ರೈಲು ಪ್ರಯಾಣಿಕನ 3೦,೦೦೦ ರೂ. ಮೌಲ್ಯದ ಮೊಬೈಲ್ ಫೋನ್ ಅಪಹರಿಸಿ ಪರಾರಿಯಾದ 19ರ ಹರೆಯದ ಯುವಕ ಸೆರೆಯಾಗಿದ್ದಾನೆ. ಬಿಹಾರ್ ಬಸ್ಗರ ನಿವಾಸಿ ಚಂದ್ರಕುಮಾರ್ (19)ನನ್ನು ಕಾಸರಗೋಡು ರೈಲ್ವೇ ಪೊಲೀಸರು ಸೆರೆ ಹಿಡಿದಿದ್ದಾರೆ. ಮಲಪ್ಪುರಂ ಅಙಾಡಿಪುರಂ ನಿವಾಸಿ ಅಬ್ದುಲ್ ಮಜೀದ್ (64)ರ ಮೊಬೈಲ್ ಫೋನ್ ಈತ ಅಪಹರಿಸಿದ್ದನು. ಕಳೆದ ಆಗಸ್ಟ್ ೨೮ರಂದು ಪ್ರಕರಣ ನಡೆದಿದೆ. ಕಾಸರಗೋಡಿನಿಂದ ತಲಶ್ಶೇರಿಗೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಮಜೀದ್ ಪ್ರಯಾಣಿಸುತ್ತಿದ್ದರು. ರೈಲು ಕಾಞಂಗಾಡ್‌ನಿಂದ ಹೊರಟಾಗ ಜನರಲ್ ಕಂಪಾರ್ಟ್‌ಮೆಂಟ್‌ನ ಕಿಟಿಕಿಯ ಸಮೀಪದ ಸೀಟ್‌ನಲ್ಲಿ ಕುಳಿತಿದ್ದ ಮಜೀದ್‌ರ …

ವಿದ್ಯಾರ್ಥಿನಿ ನಾಪತ್ತೆ

ಮಂಜೇಶ್ವರ: 19ರ ಹರೆಯದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಯಾಗಿದ್ದು ಮನೆಯವರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ಕೊಂಡಿ ದ್ದಾರೆ. ಕೋಳ್ಯೂರು ಮದರಿಕ್ಕಾಡ್ ನಿವಾಸಿ ರಕ್ಷಿತ (19) ನಾಪತ್ತೆಯಾದ ವಿದ್ಯಾರ್ಥಿನಿ.  ನಿನ್ನೆ ಬೆಳಿಗ್ಗೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ  ಹೋದ ನಂತರ ಮನೆಗೆ ಹಿಂತಿರುಗಿಲ್ಲವೆಂದು ಆಕೆಯ ತಂದೆ  ಅಬ್ಬಣ್ಣು ಕೆ  ದೂರು ನೀಡಿದ್ದು ಅದರಂತೆ  ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ: ಐದು ಮಂದಿ ಸೆರೆ

ಕಾಸರಗೋಡು: ೧೪ರ ಹರಯದ ಬಾಲಕನಿಗೆ ಸಲಿಂಗರತಿ  ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಐದು ಮಂದಿ ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಮೊಗ್ರಾಲ್ ಪುತ್ತೂರು ಕುನ್ನಿಲ್ ಮತ್ತು ಪರಿಸರ ನಿವಾಸಿಗಳಾದ ಮೊಹಮ್ಮದ್ ರಿಯಾಸ್ (38), ಅಬ್ದುಲ್ಲ (55), ಬಶೀರ್ (47), ಸುಲೈಮಾನ್ (40) ಮತ್ತು ಸಲಾವುದ್ದೀನ್ (50) ಎಂಬವರು ಬಂಧಿತ ಆರೋಪಿಗಳು. ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ೯ನೇ ತರಗತಿ ವಿದ್ಯಾರ್ಥಿಯಾಗಿರುವ ಬಾಲಕನನ್ನು ಕಳೆದ ಒಂದು ತಿಂಗಳಲ್ಲಿ ವಿವಿಧ  ದಿನಗಳಲ್ಲಾಗಿ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ …

ಸ್ನಾನದ ಕೊಠಡಿಯಲ್ಲಿ ಗೃಹಿಣಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಪೊಸೋಟ್‌ನ ಮನೆಯೊಂದರ ಸ್ನಾನದ ಕೊಠಡಿಯಲ್ಲಿ ಗೃಹಿಣಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಬ್ದುಲ್ ರಜಾಕ್‌ರ ಪತ್ನಿ ಆಸ್ಮ (48) ಮೃತಪಟ್ಟವರು. ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ ಮನೆಯ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರನ್ನು ಮನೆ ಮಂದಿ ಪತ್ತೆಹಚ್ಚಿದ್ದಾರೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹದ  ಮರಣೋತ್ತರ ಪರೀಕ್ಷೆ  ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಗಿದೆ. ಮೃತರು ಪತಿ, ಮಕ್ಕಳಾದ ರಾಶಿದ್, ಮೊಹಮ್ಮದ್ ರಾಫಿ, ಸಲ್ಮ, ಮೂಸ ಹಾಗೂ …

ಉದ್ಯೋಗ ವಿಸಾಕ್ಕೆ 9,00,000 ರೂ. ಪಡೆದು ವಂಚನೆಗೈದ ಬಗ್ಗೆ ದೂರು: ಪ್ರಕರಣ ದಾಖಲು

ಕುಂಬಳೆ: ಮಾಲ್ಡಾದಲ್ಲಿ ಉದ್ಯೋಗ ವಿಸಾ ನೀಡುವುದಾಗಿ ನಂಬಿಸಿ ಬ್ಯಾಂಕ್‌ನ ವಿವಿಧ ಖಾತೆಗಳ ಮೂಲಕ 9,00,000 ರೂ. ಪಡೆದು ಬಳಿಕ ವಿಸಾವನ್ನಾಗಲೀ, ನೀಡಿದ ಹಣವನ್ನಾ ಗಲೀ ಹಿಂತಿರುಗಿಸದೆ ವಂಚನೆಗೈದಿರುವು ದಾಗಿ ಆರೋಪಿಸಿ ನೀಡಲಾದ ದೂರಿನಂತೆ ತೃಶೂರು ಸಿಟಿ ಪರಕ್ಕಾಡಿ ವೇಲತ್ತೂರು ಬಾವಿಲಿಲ್ ನಿವಾಸಿ ಅಲ್‌ಬಿನ್ ಥೋಮಸ್ (47)ನ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಕುಂಬಳೆ ಕೃಷ್ಣನಗರದ ಪವನ್ ಡಾನ್ಸಿಲ್ ಡಿ’ಸೋಜಾ (31) ಎಂಬವರು  ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಲ್ಡಾದ ಉದ್ಯೋಗ ವಿಸಾ ನೀಡುವುದಾಗಿ ನಂಬಿಸಿ …