ಕಾಸರಗೋಡು ನಗರಸಭಾ ನೌಕರೆ ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಸರಗೋಡು ನಗರಸಭೆಯ ನೌಕರೆ ಮನೆಯೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕಾಞಂಗಾಡ್, ಪಡನ್ನಕ್ಕಾಡ್ ಕರುವಳಂ ನಿವಾಸಿ ಹಾಗೂ ಪ್ರಸ್ತುತ ನೀಲೇಶ್ವರ ತಟ್ಟಾಚೇರಿಯಲ್ಲಿ ವಾಸಿಸುವ ರಮ್ಯ (40) ಮೃತಪಟ್ಟ ಯುವತಿ. ಇಂದು ಬೆಳಿಗ್ಗೆ ಮನೆಯ ಮೇಲ್ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರನ್ನು ಪತ್ತೆಹಚ್ಚಲಾಗಿದೆ. ಕಲ್ಲಿಕೋಟೆ ಫರೂಕ್ ನಗರಸಭಾ ಕಾರ್ಯದರ್ಶಿಯಾದ ಶ್ರೀಜಿತ್‌ರ ಪತ್ನಿಯಾಗಿದ್ದಾರೆ ಇವರು. ರಮ್ಯ ಹಾಗೂ ಮಕ್ಕಳು ಮನೆಯಲ್ಲಿ ವಾಸವಾಗಿದ್ದರು.  ಬೆಳಿಗ್ಗೆ ನೋಡಿದಾಗ ಬಾಗಿಲು ಒಳಗಿನಿಂದ ಹಾಕಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಬಳಿಕ ಪರಿಸರ ನಿವಾಸಿಗಳು …

ಜಿಲ್ಲಾ ಪಂಚಾಯತ್ ನೌಕರ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ:  ಜಿಲ್ಲಾ ಪಂಚಾಯತ್ ನೌಕರನೋರ್ವ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಯ್ಯನ್ನೂರು ಕಂಡೋತ್ ನಿವಾಸಿ ಎಂ. ವಿ. ಅನೂಪ್ (41) ಮೃತಪಟ್ಟ ವ್ಯಕ್ತಿ. ಇವರು ಕಾಸರಗೋಡು ಜಿಲ್ಲಾ ಪಂಚಾಯತ್ ಎಲ್‌ಎಸ್‌ಜಿಡಿ ಡಿವಿಶನ್ ಆಫೀಸ್‌ನ ಸೀನಿಯರ್ ಕ್ಲಾರ್ಕ್ ಆಗಿದ್ದರು. ನಿನ್ನೆ ರಾತ್ರಿ ಪಡನ್ನಕ್ಕಾಡ್ ಮೂಲಪಳ್ಳಿ ಎಂಬಲ್ಲಿ ರೈಲು ಢಿಕ್ಕಿ ಹೊಡೆದು  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾಗರಿಕರು ನೀಡಿದ ಮಾಹಿತಿಯಂತೆ ಹೊಸದುರ್ಗ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು  ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಿದ್ದಾರೆ. ಮೂಲಕೊವ್ವಲ್‌ನ ಚಂದ್ರನ್-ಮೀತಲೆ …

ಅಸೌಖ್ಯ: ಮಹಿಳೆ ನಿಧನ

ಉಪ್ಪಳ: ಕೊಂಡೆವೂರು ನಿವಾಸಿ ಮಾಧವ ತುಳಸಿ ಅವರ ಪತ್ನಿ ಚಂದ್ರಿಕ (52) ನಿಧನ ಹೊಂದಿದರು. ಇವರು ಕಳೆದ ಹಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಸಂಜೆ ಅಸೌಖ್ಯ ಉಲ್ಬಣಗೊಂಡು ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ನಿಧನ ಹೊಂದಿದರು. ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಕೊಂಡೆವೂರು ಊರ್ಯೆ ಸಮಿತಿ ಮಹಿಳಾ ಸಂಘದ ಮಾಜಿ ಅಧ್ಯಕ್ಷೆಯಾಗಿದ್ದರು. ಮೃತರು ಪತಿ, ಮಕ್ಕಳಾದ ಸುಸ್ಮಿತಾ, ಸುಮಿತ, ಸುಶಾಂ ತ್, ಅಳಿಯಂದಿರಾದ ಶ್ರೀನಿವಾಸ, ಅಶ್ವಿನ್, …

ಆಪರೇಶನ್ ಸೌಂದರ್ಯ ಕಾರ್ಯಾಚರಣೆ : ಎರಡು ಲಕ್ಷದಷ್ಟು ಉತ್ಪನ್ನಗಳ ವಶ; ಸಾಮಾಜಿಕ ಜಾಲತಾಣದ ಇಫ್ಲುವೆನ್ಸರ್‌ಗಳ ಮೇಲೆ ತೀವ್ರ ಪೊಲೀಸ್ ನಿಗಾ

ಕಾಸರಗೋಡು:  ನಕಲಿ ಸೌಂದ ರ್ಯವರ್ಧಕ ಸಾಮಾಗ್ರಿಗಳ ಪತ್ತೆಗಾಗಿ ರಾಜ್ಯ ಡ್ರಗ್ಸ್ ಕಂಟ್ರೋಲ್ ಇಲಾಖೆ ಪೊಲೀಸರ ಸಹಾಯದೊಂ ದಿಗೆ ಆಪರೇಶನ್ ಸೌಂದರ್ಯ ಎಂಬ ಹೆಸರಲ್ಲಿ ರಾಜ್ಯಾದ್ಯಂತ ವ್ಯಾಪಕ ಕಾರ್ಯಾಚರಣೆ ಆರಂಭಿಸಿದೆ. ಇದರಂತೆ ಈತನಕ ನಡೆಸಿದ ಕಾರ್ಯಾಚರಣೆಯಲ್ಲಿ ಎರಡು ಲಕ್ಷದಷ್ಟು ನಕಲಿ ಸೌಂದರ್ಯ ವರ್ಧಕ ಸಾಮಗ್ರಿಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಪಾಕಿಸ್ತಾನ ನಿರ್ಮಿತ ಎಂಬ ಹೆಸರು ನಮೂದಿಸಲಾಗಿದ್ದ  ಗೋರಿ ಫೇಸ್ ಕ್ರೀಮ್‌ನ್ನು ಈ ಕಾರ್ಯಾ ಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಲಾಗಿದೆ. ಈ ಫೇಸ್ ಕ್ರೀಮ್‌ನ ಪ್ಯಾಕೆಟ್‌ನ ಮೇಲೆ ಪುನಿಯಾ ಬ್ರದರ್ಸ್ ಪಾಕಿಸ್ತಾನ ಎಂಬ …

ಕುಂಬಳೆಯಲ್ಲಿ ಬಸ್ ನಿಲುಗಡೆ ವಿಷಯದಲ್ಲಿ ಮತ್ತೆ ಸಮಸ್ಯೆ: ಮರ್ಚೆಂಟ್ಸ್ ಯೂತ್ ವಿಂಗ್-ಬಸ್ ನೌಕರರ ಮಧ್ಯೆ ಘರ್ಷಣೆ; ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳದಿದ್ದಲ್ಲಿ ಬಸ್ ನೌಕರರಿಂದ ಮುಷ್ಕರದ ಮುನ್ನೆಚ್ಚರಿಕೆ 

ಕುಂಬಳೆ:  ಕುಂಬಳೆ ಪೇಟೆಯ ಬಸ್ ನಿಲ್ದಾಣ ಸಮಸ್ಯೆ ತೀವ್ರಗೊಂಡು ಘರ್ಷಣೆಯತ್ತ ಸಾಗುತ್ತಿದೆ. ಪಂಚಾಯತ್ ಅಧಿಕಾರಿಗಳು ಹಾಗೂ ಪೊಲೀಸರು ಕೈಗೊಳ್ಳುತ್ತಿರುವ  ನಿರ್ಲಕ್ಷ್ಯ ಕ್ರಮವೇ ಘರ್ಷಣೆಯನ್ನು ನಿಯಂತ್ರಿಸಲು  ಸಾಧ್ಯವಾಗದ ಸ್ಥಿತಿಗೆ ಕಾರಣವೆಂದು ಪ್ರಯಾಣಿಕರು ಸಹಿತ ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ. ಘರ್ಷಣೆ ನಿರತರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ನಾಳೆ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದೆಂದು ಬಸ್ ನೌಕರರು ಮುನ್ನೆಚ್ಚರಿಕೆ ನೀಡಿದ್ದಾರೆ. ಕುಂಬಳೆ ಪೇಟೆಯಲ್ಲಿ ಸುಮಾರು ೪೦ ಲಕ್ಷ ರೂಪಾಯಿಗಳನ್ನು ಪಂಚಾಯತ್ ಫಂಡ್‌ನಿಂದ ತೆಗೆದು ನಿರ್ಮಿಸಿದ ಬಸ್ ವೈಟಿಂಗ್ ಶೆಡ್‌ನ ಮುಂದೆ ಪ್ರಯಾಣಿಕರನ್ನು ಇಳಿಸಕೂಡದೆಂದೂ ಎಲ್ಲಾ …

ವ್ಯಾಪಾರದ ಮರೆಯಲ್ಲಿ ಹಲವರಿಂದ ಕೋಟಿಗಟ್ಟಲೆ ರೂ. ಪಡೆದು ಪಂಗನಾಮ: ತಲೆಮರೆಸಿಕೊಂಡಿದ್ದ ಮಹಿಳೆ ಕೊಲ್ಲಂನಿಂದ ಸೆರೆ

ಕಾಸರಗೋಡು: ಸಿದ್ದ ಉಡುಪುಗಳಲ್ಲಿ ಜವುಳಿ ಇತ್ಯಾದಿ ಸಾಮಗ್ರಿಗಳ ವ್ಯಾಪಾರದ ಹೆಸರಲ್ಲಿ ಹಲವರಿಂದ ಕೋಟಿಗಟ್ಟಲೆ ರೂಪಾಯಿ ಪಡೆದ ಬಳಿಕ ಪ್ರಕರಣದ ಆರೋಪಿಯಾಗಿದ್ದು ನಂತರ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ಕೊಲ್ಲಂನಿಂದ ಪೊಲೀಸರು ಸೆರೆ ಹಿಡಿದಿದ್ದಾರೆ. ಹೊಸದುರ್ಗ ನೆಲ್ಲಿಕಾಟ್‌ನಲ್ಲಿ ವಾಸಿಸುತ್ತಿದ್ದ ನಫೀಸಾ (62) ಬಂಧಿತಳಾದ ಆರೋಪಿ. ಬಟ್ಟೆ ವ್ಯಾಪಾರದ ಹೆಸರಲ್ಲಿ ಈಕೆ ಹಲವರಿಂದಾಗಿ ಕೋಟಿಗಟ್ಟಲೆ ರೂಪಾಯಿ ಪಡೆದು ವಂಚಿಸಿದ ಪ್ರಕರಣದ ಆರೋಪಿ ಮಾತ್ರವಲ್ಲದೆ ಈಕೆಯ ವಿರುದ್ಧ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹತ್ತರಷ್ಟು ಅಮಾನ್ಯ ಬ್ಯಾಂಕ್ ಚೆಕ್ ಪ್ರಕರಣಗಳೂ ಇವೆ. ನಂತರ …

ಅಭಿಭಾಷಕ ಪರಿಷತ್‌ನಿಂದ ರಾಷ್ಟ್ರೀಯ ಕಾನೂನು ದಿನಾಚರಣೆ

ಕಾಸರಗೋಡು: ಭಾರತೀಯ ಅಭಿಭಾಷಕ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ದಿನಾಚರಣೆ ನಡೆಸಲಾಯಿತು. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಎಂಬ ವಿಷಯದಲ್ಲಿ ನಡೆದ ಕಾರ್ಯಕ್ರಮವನ್ನು ನಿವೃತ್ತ ವಿಜಿಲೆನ್ಸ್ ನ್ಯಾಯಾಧೀಶ ಎಂ.ವಿ. ರಾಜಕುಮಾರ್ ಉದ್ಘಾಟಿಸಿದರು. ಭಾರತೀಯ ಅಭಿಭಾಷಕ ಪರಿಷತ್ ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಬಿ. ರವೀಂದ್ರನ್,  ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ಕೆ.ಜಿ. ಅನಿಲ್, ಹೊಸದುರ್ಗ ಘಟಕ ಅಧ್ಯಕ್ಷ ನ್ಯಾಯವಾದಿ ಮಣಿಕಂಠನ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ನವೀನ್‌ರಾಜ್ …

ಕೇರಳ-ಕರ್ನಾಟಕ ಉತ್ಸವ: ಜಿಲ್ಲೆಗೆ ಗಣ್ಯರ ದಂಡು

ಕಾಸರಗೋಡು: ಕನ್ನಡ ಗ್ರಾಮದಲ್ಲಿ ನಾಳೆ, 29ರಂದು ನಡೆಯುವ ಕೇರಳ ರಾಜ್ಯ ೮ನೇ ಕನ್ನಡ ಸಮ್ಮೇಳನ, ಕೇರಳ-ಕರ್ನಾಟಕ ಉತ್ಸವ, ಮಕ್ಕಳ ಸಾಹಿತ್ಯ ಉತ್ಸವ, ಕೇರಳ- ಕರ್ನಾಟಕ ಭವನದ ಭೂಮಿಪೂಜೆ ಶಿಲಾನ್ಯಾಸ, ಕಾಸರಗೋಡು ಗೋಕುಟೀರದ ಪ್ರವೇಶೋತ್ಸವ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರ್ನಾಟಕದ ಗಣ್ಯರಾದ ವೀರಪ್ಪ ಮೊಯ್ಲಿ, ವಾಟಾಳ್ ನಾಗರಾಜ್, ಸಚಿವ ಯು.ಟಿ. ಖಾದರ್, ಡಾ. ಶಿವಾನಂದ ಕೆಳಗಿನಮನೆ ಜಿಲ್ಲೆಗೆ ವಿವಿಧ ದಿನಗಳಲ್ಲಾಗಿ ತಲುಪಲಿದ್ದಾರೆ. ನಾಳೆ ನಡೆಯುವ ಕೇರಳ-ಕರ್ನಾಟಕ ಉತ್ಸವ ಉದ್ಘಾಟನೆ ಕಾರ್ಯಕ್ರಮ ದಲ್ಲಿ ವಾಟಾಳ್ ನಾಗರಾಜ್, ಯು.ಟಿ. ಖಾದರ್, ಜೆ. …

ಪೈಂಟಿಂಗ್ ಕಾರ್ಮಿಕ ನಿಧನ

 ಮೊಗ್ರಾಲ್ ಪುತ್ತೂರು: ಇಲ್ಲಿನ ಆಜಾದ್ ನಗರ ನಿವಾಸಿಯೂ ಕಂಬಾರ್‌ನಲ್ಲಿ ವಾಸವಾಗಿದ್ದ ಅಬ್ದುಲ್ ಗಫೂರ್ (55) ನಿಧನ ಹೊಂದಿದರು. ಪೈಂಟಿಂಗ್ ಕಾರ್ಮಿಕನಾಗಿದ್ದರು. ದಿ| ಚೌಕಿ ಬಡುವನ್ ಕುಂಞಿಯವರ ಪುತ್ರ ನಾದ ಮೃತರು ಪತ್ನಿ ಆಯಿಶ, ಮಕ್ಕಳಾದ ಕಮರುದ್ದೀನ್, ಶಾನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕೊರಗಪ್ಪ ನಿಧನ

 ಬದಿಯಡ್ಕ: ಗೋಳಿಯಡ್ಕ ಪರಿಶಿಷ್ಟ ಜಾತಿ ಉನ್ನತಿಯ ಕೊರಗಪ್ಪ (56) ನಿಧನಹೊಂದಿದರು. ಮೃತರು ಪತ್ನಿ ಭಾಗ್ಯಲಕ್ಷ್ಮಿ, ಮಕ್ಕಳಾದ ಅವಿನಾಶ್, ಅಶ್ವತಿ, ಅಜೇಶ್, ಅಘ್ನೇಶ್, ಅಖಿಲೇಶ್, ಅನುಸ್ಮಿತ, ಅಳಿಯ ರತೀಶ್, ಸಹೋದರಿ ಶಂಕರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರರಾದ ರಾಧಾಕೃಷ್ಣ, ಚನಿಯಪ್ಪ ಈ ಹಿಂದೆ ನಿಧನಹೊಂದಿದ್ದಾರೆ.