ಲೋಕಸಭಾ ಚುನಾವಣೆ: ಕಾಸರಗೋಡಿನಲ್ಲಿ ಎಂ.ವಿ. ಬಾಲಕೃಷ್ಣನ್ ಎಡರಂಗ ಅಭ್ಯರ್ಥಿ

ಕಾಸರಗೋಡು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕೇರಳದಲ್ಲಿ ಇತರ ರಾಜಕೀಯ ಒಕ್ಕೂಟಗಳಿಗೆ ಮುಂಚಿತವಾಗಿಯೇ ಎಡರಂಗ ತನ್ನ ಅಭ್ಯರ್ಥಿಗಳ ಯಾದಿ ಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಇದರಂತೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ, ಚೆರುವತ್ತೂರು ಕೊವ್ವಚ್ಚಾಲ್ ಎ.ಯು.ಪಿ. ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದು ಬಳಿಕ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳಿಕ ಸಕ್ರಿಯ ರಾಜಕೀಯ ಸೇವೆಗೆ ಧುಮುಕಿದ್ದ ಎಂ.ವಿ. ಬಾಲಕೃಷ್ಣನ್‌ರನ್ನು ತಮ್ಮ ಉಮೇದ್ವಾರರನ್ನಾಗಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಘೋಷಿಸಿದ್ದಾರೆ.

ಎಂ.ವಿ. ಬಾಲಕೃಷ್ಣನ್ ಈ ಹಿಂದೆ ಕಯ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ, ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ, ಕಣ್ಣೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಮಾತ್ರವಲ್ಲ ಖಾದಿ ಮಂಡಳಿ ಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

You cannot copy content of this page