ಬಂದ್ಯೋಡಿನ ವ್ಯಾಪಾರಿಯ ಅಪಹರಣ ಯತ್ನ : ಜನರು ಸೇರಿದಾಗ ತಂಡ ಕಾರು ಉಪೇಕ್ಷಿಸಿ ಪರಾರಿ

ಕುಂಬಳೆ: ಬಂದ್ಯೋಡು ಪೇಟೆಯಲ್ಲಿ ವ್ಯಾಪಾರಿಯಾಗಿರುವ ಯುವಕನನ್ನು ತಂಡವೊಂದು ಅಪಹರಿಸಲು ಯತ್ನ ನಡೆಸಿದೆ. ಬೊಬ್ಬೆ ಕೇಳಿ ಜನರು ಅಲ್ಲಿಗೆ ತಲುಪುತ್ತಿದ್ದಂತೆ ತಂಡ ಕಾರು ಉಪೇಕ್ಷಿಸಿ ಪರಾರಿಯಾದ ಘಟನೆ ನಡೆದಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ. ಬಂದ್ಯೋಡು ಪೇಟೆಯಲ್ಲಿ ವ್ಯಾಪಾರಿಯಾಗಿರುವ ಇರ್ಶಾದ್ ಎಂಬವರನ್ನು ಅಪಹರಿಸಲು ಯತ್ನ ನಡೆದಿದೆ. ಕರ್ನಾಟಕ ನೋಂದಾಯಿತ ಕಾರಿನಲ್ಲಿ ತಲುಪಿದ ಐದು ಮಂದಿ ಅಂಗಡಿಗೆ ನುಗ್ಗಿ ಇರ್ಶಾದ್‌ರೊಂದಿಗೆ ವಾಗ್ವಾದ ನಡೆಸಿದೆ. ಬಳಿಕ ಇರ್ಶಾದ್‌ರನ್ನು ಹೊರಕ್ಕೆಳೆಯಲು ಯತ್ನ ನಡೆಸಿದ್ದು ಈ ವೇಳೆ ಬೊಬ್ಬೆ ಕೇಳಿ ಪರಿಸರದಲ್ಲಿದ್ದವರು ಅಲ್ಲಿಗೆ ತಲುಪಿದ್ದಾರೆ. ಜನರು ಸೇರುತ್ತಿದ್ದಂತೆ ತಂಡ ಅಲ್ಲಿಂದ ಓಡಿ ಪರಾರಿಯಾಗಿದೆ. ವಿಷಯ ತಿಳಿದು ಪೊಲೀಸರು ತಲುಪಿ ವಿವಿಧೆಡೆ ಹುಡುಕಾಡಿದರೂ ಅಪಹರಣಕ್ಕೆ ಯತ್ನಿಸಿದ ತಂಡವನ್ನು ಪತ್ತೆಹಚ್ಚಲಾಗಿಲ್ಲ. ತಂಡ ಉಪೇಕ್ಷಿಸಿದ ಕಾರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಅದರ ಆರ್.ಸಿ. ಮಾಲಕನನ್ನು ಸಂಪರ್ಕಿಸಿ ಠಾಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

ಸಾಮಗ್ರಿಗಳನ್ನು ಖರೀದಿಸಿದ ವತಿಯಿಂದ ಮಂಗಳೂರಿನ ಕಂಪೆನಿಯೊಂದಕ್ಕೆ ಇರ್ಶಾದ್ ಹಣ ನೀಡಲು ಬಾಕಿಯಿದೆಯೆಂದು ಹೇಳಲಾಗುತ್ತಿದೆ. ಇದೇ ಕಾರಣದಿಂದ ತಂಡ ತಲುಪಿ ಇರ್ಶಾದ್‌ರನ್ನು ಅಪಹರಿಸಲು ಯತ್ನಿಸಿದೆ ಎಂದೂ ಹೇಳಲಾಗುತ್ತಿದೆ.

You cannot copy contents of this page