ರೇಶನ್ ಅಂಗಡಿಗಳಿಗೆ ತಲುಪುವ ಸಾಮಗ್ರಿಗಳ ತೂಕ ಖಚಿತಪಡಿಸಲು ಒತ್ತಾಯ

ಮಂಜೇಶ್ವರ: ರೇಶನ್ ಅಂಗಡಿಗಳಿಗೆ ತಲುಪಿಸುವ ರೇಶನ್ ಸಾಮಗ್ರಿಗಳ ತೂಕದಲ್ಲಿ ಉಂಟಾಗುತ್ತಿರುವ ಕಡಿತವನ್ನು ಕೊನೆಗೊಳಿಸಬೇಕೆಂದು ಅಲ್‌ಕೇರಳ ರೀಟೈಲ್ ರೇಶನ್ ಡೀಲರ್ಸ್ ಅಸೋಸಿಯೇಶನ್ ಮಂಜೇಶ್ವರ ತಾಲೂಕು ಸಮಿತಿ ಸಭೆ ಒತ್ತಾಯಿಸಿದೆ. ರೇಶನ್ ಅಂಗಡಿಗಳಿಗೆ ತಲುಪುವ ಅಕ್ಕಿ ಸಹಿತ ಸಾಮಗ್ರಿಗಳ ತೂಕದಲ್ಲಿ ಭಾರೀ ವಂಚನೆಯೆಸಗಲಾಗುತ್ತಿದೆ. ಈ ಬಗ್ಗೆ ದೂರು ನೀಡಿದರೆ ರೇಶನ್ ವ್ಯಾಪಾರಿಗಳಿಗೆ ಬೆದರಿಕೆಯೊಡ್ಡುವ ಕೃತ್ಯ ಕೆಲವರಿಂದ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಲ್ ಕೇರಳ ರೀಟೈಲ್ ರೇಶನ್ ಡೀಲರ್ಸ್ ಅಸೋಸಿಯೇಶನ್ ಮಂಜೇಶ್ವರ ತಾಲೂಕು ಸಮಿತಿ ಸಭೆ ಒತ್ತಾಯಿಸಿದೆ. ಸಭೆಯನ್ನು ರಾಜ್ಯ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರಹಿಮಾನ್ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಬಲ್ಲಾಳ್, ನೇಮಿರಾಜ ಮೊದಲಾದವರು ಮಾತನಾಡಿದರು.

RELATED NEWS

You cannot copy contents of this page