ವಿ.ಹಿಂ.ಪ ದುರ್ಗಾವಾಹಿನಿ ಶೌರ್ಯ ಶಿಕ್ಷಣ ವರ್ಗಕ್ಕೆ ಚಾಲನೆ

ಬದಿಯಡ್ಕ: ವಿಶ್ವಹಿಂದೂ ಪರಿಷತ್ ದುರ್ಗಾವಾಹಿನಿ ಕೇರಳ ಪ್ರಾಂತ ಶೌರ್ಯ ಶಿಕ್ಷಣವರ್ಗಕ್ಕೆ ನಿನ್ನೆ ಬೆಳಗ್ಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಚಾಲನೆ ನೀಡಲಾಯಿತು. ಕಾಸರಗೋಡು ಚಿನ್ಮಯ ಮಿಶನ್‌ನ ಬ್ರಹ್ಮಚಾರಿಣಿ ದಿಶಾ ಚೈತನ್ಯ ಸ್ವಾಮಿನಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಮಾತೆಯರೂ ಬಲಿಷ್ಠರಾಗಿ ಎಲ್ಲಾ ಕಾರ್ಯಗಳನ್ನೂ ಅಚ್ಚುಕಟ್ಟಾಗಿ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿರಬೇಕು.
ನಮ್ಮ ಸಮಾಜ, ಮಕ್ಕಳ ರಕ್ಷಣೆ ನಮ್ಮ ಹೊಣೆಯಾಗಿದೆ ಎಂದರು. ವಿಶ್ವಹಿಂದೂ ಪರಿಷತ್ ಕೇರಳ ರಾಜ್ಯ ಕಾರ್ಯದರ್ಶಿ ವಿ.ಆರ್.ರಾಜಶೇಖರ್ ಬೌದ್ಧಿಕ್ ನಡೆಸಿಕೊಟ್ಟರು. ಕಿಶೋರಿ ತಾಯಿಜಿ ಉಪಸ್ಥಿತರಿದ್ದರು. ಜಿಲ್ಲಾ ಸಂಘ ಚಾಲಕ್ ಪ್ರಭಾಕರ ನಾಯಕ್, ಕಣ್ಣೂರು ವಿಭಾಗ ಮಾತೃಶಕ್ತಿ ಸಂಯೋಜಕಿ ಮೀರಾ ಆಳ್ವ ಉಪಸ್ಥಿತರಿದ್ದರು. ಶಿಬಿರಾದಿsಕಾರಿ ಕೇರಳ ದುರ್ಗಾವಾಹಿನಿ ಸಹಸಂಯೋಜಕಿ ನೀತು ಸ್ವಾಗತಿಸಿದರು. ಲಕ್ಷಿö್ಮÃ ವೈಯಕ್ತಿಕ ಗೀತೆ ಹಾಡಿದರು. ಶಿಕ್ಷಕಿ ಮಂಜುಳಾ ನಿರೂಪಿಸಿದರು.

RELATED NEWS

You cannot copy contents of this page