ಕಾಸರಗೋಡು ಜಿಲ್ಲಾ ಕುಲಾಲ ಸಂಘದ ನೂತನ ಕಚೇರಿ ಕಟ್ಟಡ ಉದ್ಘಾಟನೆ 26ರಂದು

ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘಕ್ಕೆ ಮಂಜೇಶ್ವರ ತೂಮಿನಾಡಿನಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟಡದಲ್ಲಿ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಮೇ.26ರಂದು ಬೆಳಿಗ್ಗೆ 10.30ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಂಗಳೂರು ಕುಲಶೇಖರ ಶ್ರೀ ವೀರನಾರಾಯಣ ಕ್ಷೇತ್ರದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಉದ್ಘಾಟಿಸುವರು. ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ, ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸುವರು. ಮಂಗಳೂರು ಉದ್ಯಮಿ ವಿಠಲ ಕುಲಾಲ್, ಕುಲಾಲ್ ಸಂಘದ ಮುಡಿಪು ಘಟಕದ ಅಧ್ಯಕ್ಷ ಪುಂಡರೀಕಾಕ್ಷ ಕೈರಂಗಳ, ಮಂಗಳೂರು ಉದ್ಯಮಿ ನರಸಿಂಹ ಕುಲಾಲ್ ಕಡಂಬಾರು, ಕುಂಜತ್ತೂರು ಅಡ್ಕ ಕುಲಾಲ ಬಂಗೇರ ಮೂಲಸ್ಥಾನದ ಮೂಲ್ಯಣ್ಣ ಹರೀಶ್ ಬಂಗೇರ, ಲೀಲಾವತಿ ಟೀಚರ್ ಉಪಸ್ಥಿತರಿರುವರು. ಬೆಳಿಗ್ಗೆ ಭಜನೆ, ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಲಿದೆ.

You cannot copy contents of this page