ಕಾಪಾ ಕಾನೂನು ಉಲ್ಲಂಘಿಸಿದ ಯುವಕನ ಸೆರೆ

ಕಾಸರಗೋಡು: ಕಾಪಾ ಹೇರಲ್ಪಟ್ಟು ಜಿಲ್ಲೆಯಿಂದ ಗಡಿಪಾರು ಮಾಡಲ್ಪಟ್ಟು ಆ ನಿಬಂಧನೆಯನ್ನು ಉಲ್ಲಂಘಿಸಿ  ಮತ್ತೆ ಜಿಲ್ಲೆಗೆ ಪ್ರವೇಶಿ ಸಿದ  ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.  ಕೂಡ್ಲು ರಾಮದಾಸನಗರದ ಕೌಶಿಕ್ (25) ಎಂಬಾತ ಬಂಧಿತ ಯುವಕ. ಆತನನ್ನು ಮತ್ತೆ ಜೈಲಿಗೆ ಕಳುಹಿಸಿಕೊಡಲಾಗಿದೆ. ಹಲವು ಪ್ರಕರಣಗಳ ಆರೋಪಿ ಯಾಗಿರುವ  ಈತನ ವಿರುದ್ಧ ಪೊಲೀಸರು ಕಾಪಾ ಕಾನೂನು ಹೇರಿ ನಿಗದಿತ ಸಮಯದ ತನಕಜಿಲ್ಲೆಗೆ ಪ್ರವೇಶಿಸದಂತೆ ಗಡಿಪಾರು ಮಾಡಿದ್ದರು. ಆ ನಿಬಂಧನೆಯನ್ನು  ಉಲ್ಲಂಘಿಸಿ ಜಿಲ್ಲೆಗೆ ಪ್ರವೇಶಿಸಿದುದಕ್ಕೆ  ಆತನನ್ನು ಪೊಲೀಸರು ಈಗ ಬಂಧಿಸಿದ್ದಾರೆ.

RELATED NEWS

You cannot copy contents of this page