ಕಾಸರಗೋಡು: ಕೇರಳ ರಾಜ್ಯ ಲಾಟರಿಯ ಪ್ರಥಮ ಬಹುಮಾನ ಮತ್ತೆ ಕಾಸರಗೋಡಿಗೆ ಲಭಿಸಿದೆ. ನಿನ್ನೆ ನಡೆದ ವಿನ್ವಿನ್ 776ನೇ ಡ್ರಾದಲ್ಲಿ ಪ್ರಥಮ ಬಹುಮಾನವಾದ 75 ಲಕ್ಷ ರೂಪಾಯಿ ಕಾಸರಗೋಡು ನ್ಯೂ ಲಕ್ಕಿ ಸೆಂಟರ್ನಿಂದ ಮಾರಾಟಗೈದ ಡಬ್ಲ್ಯುಇ 554372 ನಂಬ್ರದ ಟಿಕೆಟ್ಗೆ ಲಭಿಸಿದೆ. ಕಳನಾಡು ನಿವಾಸಿ ರಾಜೀವನ್ ಎಂಬವರಿಗೆ ಈ ಬಹುಮಾನ ಲಭಿಸಿದೆ.







