ಸ್ಥಳದ ಮಾಲಕನ ಬೆದರಿಕೆ: ಇಲಿವಿಷ ಸೇವಿಸಿದ ಯುವತಿ ಗಂಭೀರ

ಕಾಸರಗೋಡು: ಸ್ಥಳದ ಮಾಲಕನ ಬೆದರಿಕೆ ಹಿನ್ನೆಲೆಯಲ್ಲಿ ಇಲಿವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ ಗಂಭೀರ ಸ್ಥಿತಿಯಲ್ಲಿದ್ದಾರೆ.  ಬಂದಡ್ಕದ ವೆಲ್ಡಿಂಗ್ ಕಾರ್ಮಿಕ,  ಪಡ್ಪುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ  ಜಯರಾಮರ ಪತ್ನಿ ರೇಶ್ಮಾ (35)ರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆಯಲ್ಲಿದ್ದಾರೆ.  ಬಂದಡ್ಕ ಏಣಿ ಯಾಡಿಯಲ್ಲಿ ಓರ್ವರಿಂದ 2020ರಲ್ಲಿ ಜಯರಾಮನ್ ೫ ಸೆಂಟ್ಸ್ ಸ್ಥಳ ಖರೀದಿಸಿ ಕಟ್ಟಡ ನಿರ್ಮಿಸಿದ್ದರು. ಸ್ಥಳದ ಮಾಲಕ ಇತ್ತೀಚೆಗೆ ಮೃತಪಟ್ಟರು. ಸ್ಥಳವನ್ನು ನೀಡುವ ಸಮಯದಲ್ಲಿ ಕೊಲ್ಲಿಯಲ್ಲಿದ್ದ ಮಾಲಕನ ಪುತ್ರ ಊರಿಗೆ ಹಿಂತಿರುಗಿದ ಬಳಿಕ ಜಯರಾಮರಲ್ಲಿ ಹೆಚ್ಚುವರಿ ಹಣ ಆಗ್ರಹಿಸಿದರೆನ್ನಲಾಗಿದೆ.  ಹಣ ನೀಡದ ಹಿನ್ನೆಲೆಯಲ್ಲಿ  ಬೆದರಿಸಿದ್ದg ನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿ ಇತ್ತೀಚೆಗೆ ಸ್ಥಳದ ಮಾಲಕನ ಪುತ್ರ ಹಾಗೂ 20ರಷ್ಟು ಮಂದಿ ಜಯರಾಮರ ವಾಸಸ್ಥಳಕ್ಕೆ ತಲುಪಿ ಕೊಲೆಗೈಯ್ಯು ವುದಾಗಿ ಬೆದರಿಕೆಯೊಡ್ಡಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪತ್ರ ಬರೆದಿಟ್ಟು ರೇಶ್ಮಾ ಇಲಿವಿಷ ಸೇವಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page