ಕೊಯಿಪ್ಪಾಡಿ ಕಡಪ್ಪುರದ ಮನೆಯಿಂದ ಕಳವು: ತನಿಖೆ ತೀವ್ರ

ಕುಂಬಳೆ: ಕೊಯಿಪ್ಪಾಡಿ ಕಡಪ್ಪುರದ ಮನೆಯಿಂದ ಚಿನ್ನಾಭರಣ ಸಹಿತ ವಿವಿಧ ಸೊತ್ತು ಕಳವಿಗೀಡಾದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕೊಯಿಪ್ಪಾಡಿ ಕಡಪ್ಪುರದ ಅರುಣ ಎಂಬವರ ಮನೆಯಿಂದ 2 ಪವನ್ ಚಿನ್ನಾಭರಣ, ಒಂದು ಹೊಸ ಮೊಬೈಲ್ ಫೋನ್, 1 ಟಾರ್ಚ್ ಮೊದಲಾದವುಗಳು ಕಳವಿಗೀಡಾಗಿವೆ. ಅರುಣ ಹಾಗೂ ಕುಟುಂಬ ಸದಸ್ಯರು ಸಂಬಂಧಿಕರೊಬ್ಬರ ಮರಣಾನಂತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲೆಂದು ಶುಕ್ರವಾರದಂದು ತೆರಳಿದ್ದರು. ಶನಿವಾರ ಮಧ್ಯಾಹ್ನ ಅರುಣರ ಸಹೋದರಿ ಪ್ರಮೀಳಾ ಎಂಬವರು ಈ ಮನೆಗೆ ತಲುಪಿದಾಗ ಅಡುಗೆಕೋಣೆ ಭಾಗದ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಇದರಿಂದ ಅವರು ನೀಡಿದ ಮಾಹಿತಿಯಂತೆ ಅರುಣ ಮನೆಗೆ ತಲುಪಿ ನೋಡಿದಾಗ ಮೂರು ಕೊಠಡಿಗಳಲ್ಲಿದ್ದ ಕಪಾಟು ಗಳನ್ನು ತೆರೆದು ಚೆಲ್ಲಾಪಿಲ್ಲಿಗೊಳಿಸಿರುವುದು ಕಂಡು ಬಂದಿದೆ. ಬಳಿಕ ನಡೆಸಿದ ಶೋಧ ವೇಳೆ ಚಿನ್ನಾಭರಣ ಸಹಿತ ವಿವಿಧ ಸೊತ್ತುಗಳು ಕಳವಿಗೀಡಾದ ಬಗ್ಗೆ ತಿಳಿದು ಬಂದಿದೆ. ಇದರಂತೆ ಅರುಣ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

RELATED NEWS

You cannot copy contents of this page