ಫರ್ದಾ ಧರಿಸಿ ಜ್ಯುವೆಲ್ಲರಿಗೆ ಬಂದ ಮಹಿಳೆ ಒಂದು ಪವನ್ ಬ್ರೇಸ್‌ಲೆಟ್ ಕಳವುಗೈದು ಪರಾರಿ

ಕುಂಬಳೆ:  ಚಿನ್ನಾಭರಣ ಖರೀದಿ ನೆಪದಲ್ಲಿ ಜ್ಯುವೆಲ್ಲರಿಗೆ ಬಂದ  ಮಹಿಳೆ ಒಂದು ಪವನ್ ತೂಕದ ಬ್ರೇಸ್ ಲೆಟ್ ಕಳವುಗೈದು ಪರಾರಿಯಾದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಕುಂಬಳೆಯ ರಾಜಧಾನಿ ಜ್ಯುವೆಲ್ಲರಿ ಮಾಲಕ ಹಮೀದ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ನಿನ್ನೆ ಮಧ್ಯಾಹ್ನ 2.50ರ ವೇಳೆ  ರಾಜಧಾನಿ ಜ್ಯುವೆಲ್ಲರಿಗೆ ಫರ್ದಾ ಧರಿಸಿ ಮಹಿಳೆಯೋರ್ವೆ ಬಂದಿದ್ದಳು. ಚಿನ್ನಾ ಭರಣ ಖರೀದಿಗಾಗಿ ಬಂದಿರುವುದಾಗಿ ತಿಳಿಸಿದ್ದ ಈಕೆ ಹಲವು ಬ್ರೇಸ್ ಲೆಟ್‌ಗಳನ್ನು  ಪರಿಶೀಲಿಸಿದ್ದಳು. ಕೊನೆಗೆ 3.40ರ ಹೊತ್ತಿಗೆ  ಕೈಯಲ್ಲಿ ಅಗತ್ಯದಷ್ಟು ಹಣವಿಲ್ಲವೆಂದೂ, ಮತ್ತೆ ಬರುವುದಾಗಿ ತಿಳಿಸಿ ಆಕೆ ಅಲ್ಲಿಂದ ಮರಳಿದ್ದಾಳೆ.  ರಾತ್ರಿ ಜ್ಯುವೆಲ್ಲರಿ ನೌಕರರು ಚಿನ್ನಾಭರಣಗಳನ್ನು ಪರಿಶೀಲಿಸುವ ವೇಳೆ ಒಂದು ಪವನ್ ತೂಕದ ಬ್ರೇಸ್ ಲೆಟ್   ನಾಪತ್ತೆಯಾಗಿರುವುದು ತಿಳಿದುಬಂದಿದೆ. ಬಳಿಕ ಸಿಸಿ ಕ್ಯಾಮರಾ ಪರಿಶೀಲಿಸಿದಾಗ  ಫರ್ದಾಧಾರಿ ಮಹಿಳೆ ಬ್ರೇಸ್ ಲೆಟ್ ಕಳವುಗೈದಿರುವುದು  ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page