ಬೈಕ್ ಅಪಘಾತದಲ್ಲಿ ಗಾಯಗೊಂಡ ಯುವಕ ಮೃತ್ಯು

ಕಾಸರಗೋಡು: ಬೈಕ್ ಅಪಘಾತ ದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಗರದ ತಳಂಗರೆ ಬಾಂಗೋಡ್ ಸಿ.ಎಚ್. ಮುಹಮ್ಮದ್ ಕೋಯಾ ರಸ್ತೆ ಬಳಿಯ ಅಹಮ್ಮದ್ ಕಬೀರ್ (26) ಸಾವನ್ನಪ್ಪಿದ ಯುವಕ.

ಅಕ್ಟೋಬರ್ 13ರಂದು ಮುಂ ಜಾನೆ 3 ಗಂಟೆಗೆ ತಳಂಗರೆ ಪಳ್ಳಿಕಾಲ್ ನಲ್ಲಿ ಅಹಮ್ಮದ್ ಕಬೀರ್ ಚಲಾಯಿ ಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಅವರು ಗಂಭೀರ ಗಾಯ ಗೊಂಡಿದ್ದರು. ಅವರನ್ನು ಮೊದಲು ಕಾಸರಗೋಡಿನ ಆಸ್ಪತ್ರೆಯಲ್ಲೂ ಬಳಿಕ ಕಣ್ಣೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತು. ಬಳಿಕ ಅಲ್ಲಿಂದ ಅವರನ್ನು ಕಲ್ಲಿಕೋಟೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ  ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿ ಯಾಗದೆ ನಿನ್ನೆ ಸಂಜೆ ಅವರು ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಕಲ್ಲಿಕೋಟೆ ಯಿಂದ ಇಂದು ಮನೆಗೆ ತರಲಾಗು ವುದು. ಡ್ಯಾನಿ ಅಬ್ದುಲ್ಲ- ಜಮೀಲಾ ದಂಪತಿ ಪುತ್ರನಾಗಿರುವ ಮೃತರು ಸಹೋದರಿಯರಾದ ಬಲ್ಕೀಸ್, ರುಮೈಸಾ, ರಂಸೀನಾ, ಅಮೀರಾ, ಸಮೀರಾ, ಸಕೀರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page