ಹಿಂದುಳಿದ ವಿಭಾಗ ಆಯೋಗದ ಸಿಟ್ಟಿಂಗ್

ಕಾಸರಗೋಡು: ರಾಜ್ಯ ಹಿಂದುಳಿದ ವಿಭಾಗ ಆಯೋಗದ 571ನೇ ಸಿಟ್ಟಿಂಗ್ ಕಾಸರಗೋಡು ಅತಿಥಿ ಮಂದಿರದಲ್ಲಿ ಜರಗಿತು. ನಾಲ್ಕು ದೂರುಗಳಲ್ಲಿ ಆಯೋಗದ ಅಧ್ಯಕ್ಷ ನ್ಯಾಯಾಧೀಶ ಜಿ. ಶಶಿಧರನ್, ಆಯೋಗದ ಸದಸ್ಯೆ ಡಾ. ಎ.ವಿ. ಜೋರ್ಜ್ ಹೇಳಿಕೆ ದಾಖಲಿಸಿದರು. ಸತತವಾಗಿ ಆಯೋ ಗದ ನಿರ್ದೇಶಗಳನ್ನು ಅವಗಣಿಸಿ ಸಿಟ್ಟಿಂಗ್‌ಗೆ ಹಾಜರಾಗದ ಕಿರ್ತಾಡ್ಸ್ ನಿರ್ದೇಶಕ ಡಾ. ಎಸ್. ಬಿಂದುರನ್ನು ಸಿಟ್ಟಿಂಗ್‌ಗೆ ಕರೆದು ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಲಾಯಿತು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಸಿಟ್ಟಿಂಗ್‌ಗಳನ್ನು ಆಯೋಜಿಸಲಾಗುವು ದೆಂದು ಆಯೋಗ ತಿಳಿಸಿದೆ.

You cannot copy contents of this page