ಬಲ್ಲಂಗುಡೇಲು ಭಗವತಿ ಕ್ಷೇತ್ರ ಕಾರ್ನವರ್ ನಿಧನ

ಉಪ್ಪಳ:  ಪಟ್ಟತ್ತೂರು ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರದ ಹಿರಿಯ ಕಾರ್ನವರಾದ ಕೇಶವ (85) ನಿಧನ ಹೊಂದಿದರು. ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಕಾರ್ನವ ರಾಗಿದ್ದರು. ಅಸೌಖ್ಯ ನಿಮಿತ್ತ ಮಂಗ ಳೂರಿನ ಚಿಲಿಂಬಿಯಲ್ಲಿ ವಿಶ್ರಾಂತಿ ಯಲ್ಲಿದ್ದರು. ಮೃತರು ಪತ್ನಿ ರೇವತಿ, ಮಕ್ಕಳಾದ ವಿನೋದ್, ಮಮತಾ, ದಿವ್ಯಾ, ರಾಜೇಶ್, ಸುಜಾತ, ಕವಿತ, ರೇಖಾ,  ಅಳಿಯಂದಿರಾದ ಸತೀಶ್ ಕುಮಾರ್ (ಪತ್ರಕರ್ತ), ಬಿಜು, ಕೇಶವ, ಪ್ರಸನ್ನ, ರಾಜೇಶ್, ಸೊಸೆ ಸರಿತ, ಸಹೋದರಿ ಗೀತಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರದ ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ, ಸೇವಾ ಸಮಿತಿ, ಮಹಿಳಾ ಸಂಘ ತೀಯ ಸಮಿತಿ ಸಂತಾಪ ಸೂಚಿಸಿದೆ.

RELATED NEWS

You cannot copy contents of this page