ಮಿಂಚಿಪದವು ಶ್ರೀ ಕಾವೇರಮ್ಮ ಕ್ಷೇತ್ರ ಜೀರ್ಣೋದ್ಧಾರ ಲಕ್ಕಿ ಕೂಪನ್ ಬಿಡುಗಡೆ

ಮಿಂಚಿಪದವು: ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದಂಗವಾಗಿ ಬ್ರಹ್ಮಕಲಶ ನಿಧಿ ಸಂಗ್ರಹಾರ್ಥ ಲಕ್ಕಿಕೂಪನ್ ಬಿಡುಗಡೆ ನಿನ್ನೆ ಕ್ಷೇತ್ರ ಸಭಾಂಗಣದಲ್ಲಿ ಜರಗಿತು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ದಾಮೋದರ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಬ್ರಹ್ಮಶ್ರೀ ಕಂಟಾರು ವಾಸುದೇವ ತಂತ್ರಿ ದೀಪ ಪ್ರಜ್ವಲಿಸಿದರು. ಸಂತೋಷ್ ರೈ ಸಬ್ರುಕಜೆ ಕೂಪನ್ ಬಿಡುಗಡೆಗೊ ಳಿಸಿದರು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ,

ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಮುಳಿಯಾರು ಕ್ಷೇತ್ರದ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ, ದಾಮೋದರ ಕುಳ, ಮನಮೋಹನ ರೈ ಪಿಂಡಗ, ಪಿ.ಕೆ. ಶೆಟ್ಟಿ, ಅಶೋಕ್ ನಾಯ್ಕ್ ಪಾಂಡಿ, ಸುಭಾಶ್ಚಂದ್ರ ಕರ್ನೂರು, ರಾಮಚಂದ್ರ ಎನ್, ರಾಘವ ಎಂ.ಎನ್., ಚಂದ್ರಶೇಖರ ಎಂ.ಎನ್, ಸೇವಾ ಸಮಿತಿ ಅಧ್ಯಕ್ಷ ಸದಾನಂದ ಅಡ್ಕ ಶುಭ ಕೋರಿದರು. ಸಮಿತಿ ಕಾರ್ಯದರ್ಶಿ ಜಯಕರ ಎಂ. ಸ್ವಾಗತಿಸಿ, ಕೋಶಾಧಿಕಾರಿ ನಾರಾಯಣ ಕೇಕಡ್ಕ ವಂದಿಸಿದರು. ವೈಷ್ಣವಿ ಶರಣ್ಯ ಪ್ರಾರ್ಥನೆ ಹಾಡಿದರು. ಕಾವೇರಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಮಿಂಚಿಪದವು ಸಹಿತ ವಿವಿಧ ಕ್ಲಬ್‌ಗಳಿಗೆ ಕೂಪನ್ ಹಸ್ತಾಂತರಿಸಲಾಯಿತು.

RELATED NEWS

You cannot copy contents of this page