ಎಕೆಪಿಎ ಪ್ರಜಾಪ್ರಭುತ್ವ ದಿನಾಚರಣೆ : ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇ ಶನ್ ವೆಸ್ಟ್ ಯೂನಿಟ್ ಇದರ ವತಿಯಿಂದ ಪ್ರಜಾಪ್ರಭುತ್ವ ದಿನಾಚರಣೆ ಯಂಗವಾಗಿ ಎಕೆಪಿಎ ಕಾಸರಗೋಡು ವಲಯ ಸದಸ್ಯರಿಗೆ ನಡೆಸಿದ ಆನ್‌ಲೈನ್ ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಸ್ಪರ್ಧೆಯಲ್ಲಿ ನಂದಲಕ್ಷ್ಮಿ ರಾಜೇಂದ್ರನ್ ಪ್ರಥಮ, ಅನ್ವಿತ್ ದೀಪ್ತಿಕುಮಾರ್ ದ್ವಿತೀಯ, ಆಶೃತ್ ಗಣೇಶ್ ರೈ ತೃತೀಯ ಸ್ಥಾನ ಗಳಿಸಿದರು. ಕಾಸರಗೋಡು ವಲಯ ಅಧ್ಯಕ್ಷ ಸನ್ನಿ ಜೇಕಬ್ ಬಹುಮಾನ ವಿತರಿಸಿದರು. ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆ ಅಧ್ಯಕ್ಷತೆ ವಹಿಸಿದರು. ರತೀಶ್, ಮನು, ವಾಸು ಎ, ಶಾಲಿನಿ ರಾಜೇಂದ್ರನ್, ಚಂದ್ರಶೇಖರ, ಮೈಂದಪ್ಪ ಕೆ.ಎಂ, ಅಭಿಷೇಕ್ ಸಿ, ರತೀಶ್ ಬಿ.ಕೆ., ದೀಪ್ತ್ ಕುಮಾರ್, ವಿಶಾಖ್, ಗಣೇಶ್ ರೈ ಭಾಗವಹಿಸಿದರು.

RELATED NEWS

You cannot copy contents of this page