ಉರ್ಮಿ ಸೇತುವೆ ಕಂ ವಿಸಿಬಿ ನಿರ್ಮಾಣಕ್ಕೆ ಮೊತ್ತ ಮಂಜೂರು: ರಾಜ್ಯಸರಕಾರಕ್ಕೆ ಸಿಪಿಎಂ ಲೋಕಲ್ ಸಮಿತಿ  ಅಭಿನಂದನೆ

ಪೈವಳಿಕೆ: ಪೈವಳಿಕೆ ಪಂ. ವ್ಯಾಪ್ತಿಯ ಉರ್ಮಿಯಲ್ಲಿ ಸೇತುವೆ ಕಂ ವಿಸಿಬಿ ಪುನರ್ ನಿರ್ಮಿಸಲು ೧.೨೩ ಕೋಟಿ ರೂ. ಮಂಜೂರು ಮಾಡಿದ ರಾಜ್ಯ ಸರಕಾರಕ್ಕೆ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ, ಉರ್ಮಿ ಬ್ರಾಂಚ್ ಸಮಿತಿ ಅಭಿನಂದನೆ ಸಲ್ಲಿಸಿದೆ. ಈ ಸೇತುವೆ ಕುಸಿದು ಬಿದ್ದ ಕಾರಣ ಕುರುಡಪದವು, ಕೊಮ್ಮಂಗಳ, ಬಲ್ಲಂಗುಡೇಲು, ಕೊಳಚಪ್ಪು, ಬೋಳಂಗಳ ಮೊದಲಾದ ಪ್ರದೇಶಗಳ ನಾಗರಿಕರು, ಕೃಷಿಕರು ಸಂಕಷ್ಟಪಡುತ್ತಿದ್ದಾರೆ. ವಾಹನ ಸಂಚಾರಕ್ಕೂ ಸಮಸ್ಯೆ ಯಾಗಿದೆ. ವಿದ್ಯಾರ್ಥಿಗಳಿಗೆ ಶಾಲೆಗೆ ತಲುಪಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ  ಉರ್ಮಿ ಸಂಕ ಮತ್ತು ವಿಸಿಬಿ ಪುನರ್ ನಿರ್ಮಿಸಲು ಒತ್ತಾಯಿಸಿ ಮನವಿ ಸಲ್ಲಿಸಿತ್ತು ಎಂದು ಸಿಪಿಎಂ ಪೈವಳಿಕೆ ಲೋಕಲ್ ಕಾರ್ಯದರ್ಶಿ ಚಂದ್ರನಾಯ್ಕ್ ಮಾನಿಪ್ಪಾಡಿ ತಿಳಿಸಿದ್ದಾರೆ.

RELATED NEWS

You cannot copy contents of this page