ಡಿವೈಎಫ್‌ಐ ಮಂಜೇಶ್ವರ ಬ್ಲೋಕ್ ಸಮಾವೇಶ

ಉಪ್ಪಳ: ಡಿವೈಎಫ್‌ಐ ಮಂಜೇ ಶ್ವರ ಬ್ಲೋಕ್ ಮಟ್ಟದ ಕಾರ್ಯಕರ್ತರ ಸಭೆ ಮೀಯಪದವು ಮಾರ್ಕೆಟ್ ಹಾಲ್‌ನಲ್ಲಿ ನಡೆಯಿತು. ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಲ್ಲಾಟ್ ಉದ್ಘಾಟಿಸಿದರು.
ಬ್ಲೋಕ್ ಅಧ್ಯಕ್ಷ ವಿನಯ್ ಕುಮಾರ್ ಬಾಯಾರು ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್‌ಐ ರಾಜ್ಯ ಮಾಜಿ ಕೋಶಾಧಿಕಾರಿ ವಿ.ವಿ ರಮೇಶನ್, ಜಿಲ್ಲಾ ಜತೆ ಕಾರ್ಯದರ್ಶಿ ಸಾದಿಕ್ ಚೇರುಗೋಳಿ ಮಾತನಾಡಿ ದರು. ಬ್ಲೋಕ್ ಸಮಿತಿ ಕಾರ್ಯದರ್ಶಿ ಹಾರಿಸ್ ಪೈವಳಿಕೆ ಸ್ವಾಗತಿಸಿದರು.
ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕರಾಗಿ ಆಕಾಶ್ ಕೋರಿಕ್ಕಾರ್, ಉಪಾಧÀ್ಯಕ್ಷ ರಾಗಿ ಅಕ್ಷಯ್ ಕುಮಾರ್, ಪದ್ಮಜಾ ಕೂಳೂರು, ಕಾರ್ಯದರ್ಶಿಯಾಗಿ ವಿನಯ್ ಕುಮಾರ್ ಬಾಯಾರು, ಜತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಹನೀಫ, ಉದಯ ಸಿ ಎಚ್, ಕೋಶಾಧಿಕಾರಿಯಾಗಿ ಮುಹಮ್ಮದ್ ಸಭೀರ್Àರನ್ನು ಆಯ್ಕೆ ಮಾಡಲಾಯಿತು.

You cannot copy contents of this page