ಪೈವಳಿಕೆ ಪರಿಸರದಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ: ಕಾಂಗ್ರೆಸ್ ಪ್ರತಿಭಟನೆಗೆ ಸಿದ್ಧತೆ

ಪೈವಳಿಕೆ: ಕಳೆದ ಒಂದು ತಿಂಗಳಿನಿAದ ಕುಬಣೂರು ಸಬ್‌ಸ್ಟೇಶನ್ ಪೈವಳಿಕೆ ಸೆಕ್ಷನ್ ವ್ಯಾಪ್ತಿಯಲ್ಲಿ ಪ್ರತಿ ದಿನ ವಿದ್ಯುತ್ ಕಣ್ಣು ಮುಚ್ಚಾಲೆ ನಡೆಸುತ್ತಿದೆ. ದಿನದಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ವಿದ್ಯುತ್ ನಿಲುಗಡೆಯಾಗುತ್ತಿದ್ದು ಇದು ಇಲಾಖೆ ಉದ್ದೇಶಪೂರ್ವಕ ಮಾಡುತ್ತಿರುವ ಲೋಡ್ ಶೆಡ್ಡಿಂಗ್ ಎಂದು ದೂರಲÁಗಿದೆ. ಇದರಿಂದ ಅಡಿಕೆ ಕೃಷಿಕರು ಹಾಗೂ ಇತರ ಎಲ್ಲಾ ಕೃಷಿಕರಿಗೂ ಯಥಾ ಸಮಯ ನೀರಾವರಿ ಕೆಲಸ ನಡೆಸಲು ಅಸಾಧ್ಯವಾಗಿದ್ದು, ಇದು ಕೃಷಿಕರಿಗೆ ನಷ್ಟ ತಂದೊಡ್ಡುವ ಸಾಧ್ಯತೆ ಇದೆ. ಈ ಬಗ್ಗೆ ಗಮನ ಹರಿಸಿ ಕೂಡಲೇ ಪರಿಹಾರ ಕಂಡುಕೊಳ್ಳಬೇಕೆAದು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಒತ್ತಾಯಿಸಿದ್ದಾರೆ. ರೈತಾಪಿ ವರ್ಗದ ಬಗ್ಗೆ ಸರಕಾರ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಇದು ಒಂದು ಉದಾಹರಣೆಯಾಗಿದೆ ಎಂದು ತಿಳಿಸಿದ ಅವರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ ಕಚೆÃರಿಯ ಮುಂದೆ ಪ್ರತಿಭಟನಾ ಮುಷ್ಕರ ನಡೆಸುವುದು ಅನಿವಾರ್ಯವಾದೀತೆಂದು ಎಚ್ಚರಿಕೆ ನೀಡಿದ್ದಾರೆ.

You cannot copy contents of this page