ಪ್ರಯಾಣಿಕರ ಕಣ್ಮುಂದೆ ವ್ಯಕ್ತಿ ರೈಲು ಗಾಡಿ ಮುಂದೆ ಹಾರಿ ಸಾವು

ಕಾಸರಗೋಡು: ರೈಲು ನಿಲ್ದಾಣ ದಲ್ಲಿ ಪ್ರಯಾಣಿಕರ ಕಣ್ಮುಂದೆಯೇ ಮಧ್ಯವಯಸ್ಕನೋರ್ವ ರೈಲು ಗಾಡಿ ಮುಂದೆ ಜಿಗಿದು ಸಾವಿಗೀಡಾದ  ಘಟನೆ ನಡೆದಿದೆ.

ಕಣ್ಣೂರು ಇರಿಟ್ಟಿ ನಿವಾಸಿಯೂ ಪುಣೆ ವಿಜಯನ್ ನಗರದಲ್ಲಿ ವಾಸಿಸುವ ಜೋಳಿ ಥೋಮಸ್ (68) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ 5.30ರ ವೇಳೆ ಘಟನೆ ನಡೆದಿದೆ. ಮಂಗಳೂರು ಭಾಗದಿಂದ ಕಣ್ಣೂರು ಭಾಗಕ್ಕೆ ಹೋಗುತ್ತಿದ್ದ ಗೂಡ್ಸ್ ರೈಲಿನಡಿಗೆ ಜೋಳಿ ಥೋಮಸ್  ಹಾರಿ  ಸಾವಿಗೀಡಾಗಿದ್ದಾರೆ. ರೈಲು ಬರುತ್ತಿದ್ದಂತೆ ಇವರು ಹಳಿಗೆ ಹಾರಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಳಿಕ ರೈಲ್ವೇ ಪೊಲೀಸರು ತಲುಪಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ತಲುಪಿಸಿದರು.

You cannot copy contents of this page