ಕೇಂದ್ರೀಯ ವಿ.ವಿ. ಉಪಕುಲಪತಿಯಾಗಿ ಪ್ರೊ. ಸಿದ್ದು ಪಿ. ಅಲ್‌ಗುರಿ ನೇಮಕ

ಕಾಸರಗೋಡು: ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಕರ್ನಾಟಕದ ಧಾರವಾಡ ನಿವಾಸಿ ಪ್ರೊ. ಸಿದ್ದು ಪಿ. ಅಲ್‌ಗುರಿ ಅವರನ್ನು ನೇಮಿಸಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅಧಿಸೂಚನೆ ಜ್ಯಾರಿಗೊಳಿಸಿದ್ದಾರೆ.

ಕರ್ನಾಟಕ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿಯಾಗಿಯೂ ಇವರು ಈ ಹಿಂದೆ ಸೇವೆಸಲ್ಲಿಸಿದ್ದರು. ಡಾ. ಝಾನ್ಸಿ ಜೇಮ್ಸ್, ಡಾ. ಜಿ. ಗೋಪಕುಮಾರ್ ಮತ್ತು ಪ್ರೊ. ಎಚ್. ವೆಂಕಟೇಶ್ವರ ಬಳಿಕ ಪೆರಿಯ ಕೇಂದ್ರೀಯ ವಿ.ವಿಯ ನೇಮಿಸಲ್ಪಟ್ಟ ನಾಲ್ಕನೇ ಉಪಕುಲಪತಿ ಯಾಗಿದ್ದಾರೆ. ಪ್ರೊ. ಸಿದ್ದು. ಕಳೆದ ಎರಡು ವರ್ಷದಿಂದ ಪ್ರೊ. ವಿನ್ಸೆಂಟ್ ಮ್ಯಾಥ್ಯುರ ವಿ.ವಿಯ ಹಂಗಾಮಿ ಉಪಕುಲಪತಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದರು. ಈಗ ಖಾಯಂ ವಿ.ವಿ.ಯನ್ನು ನೇಮಿಸಲಾಗಿದೆ.

You cannot copy contents of this page