ಅಂಗಡಿಮೊಗರು ನಿವಾಸಿ ಜಿದ್ದಾದಲ್ಲಿ ಕುಸಿದುಬಿದ್ದು ಮೃತ್ಯು

ಕುಂಬಳೆ: ಅಂಗಡಿಮೊಗರು ಕಮ್ಮಂದಳ ಎಂಬಲ್ಲಿನ ಕೆ.ಎಸ್. ಸೂಫಿ (50) ಎಂಬವರು ಜಿದ್ದಾದಲ್ಲಿ ಕುಸಿದುಬಿದ್ದು ಮೃತಪಟ್ಟರು. ಕಳೆದ ಮಂಗಳವಾರ ಅಲ್ಲಿನ ವಾಸಸ್ಥಳದಲ್ಲಿ ನಮಾಜು ನಡೆಸಲು ಸಿದ್ಧತೆಯಲ್ಲಿದ್ದ ವೇಳೆ ಕುಸಿದುಬಿದ್ದು ಮೃತಪಟ್ಟಿರುವು ದಾಗಿ ತಿಳಿದುಬಂದಿದೆ. ಕಳೆದ ೩೦ ವರ್ಷಗಳಿಂದ ಜಿದ್ದಾದ ಸೂಪರ್ ಮಾರ್ಕೆಟ್‌ನಲ್ಲಿ ಇವರು ಕೆಲಸ ನಿರ್ವಹಿಸುತ್ತಿದ್ದರು. ಮೂರು ವರ್ಷಗಳ ಹಿಂದೆ ಊರಿಗೆ ಬಂದು ಮರಳಿದ್ದರು. ಇವರ ನಿಧನ ಸುದ್ದಿ ತಿಳಿದು ಯು.ಕೆ ಯಲ್ಲಿರುವ ಪುತ್ರ ಸುಹೈಲ್ ಜಿದ್ದಾಕ್ಕೆ ತಲುಪಿದ್ದಾರೆ.  ಮೃತದೇಹದ ಅಂತ್ಯ ಸಂಸ್ಕಾರ ಇಂದು ಮುಂಜಾನೆ ಜಿದ್ದಾದ ಹಯಲ್ ಎಂಬಲ್ಲಿ ನಡೆಸಲಾ ಯಿತು.  ಮೃತರು ಪತ್ನಿ ತಾಹಿರಾ, ಇತರ ಮಕ್ಕಳಾದ  ಸಾಹಿಬ, ಸೌರತ್, ಸಮಹ, ಸುಮೈ ಲ್, ಸಹೋದರ-ಸಹೋದರಿಯ ರಾದ ಮುಹಮ್ಮದ್, ಬೀವಿ, ಆಯಿಶ, ಮರಿಯಾಂಬಿ, ನಫೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ಇನ್ನೋರ್ವ ಸಹೋದರ ಬಾವ ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page