ತೆರುವತ್ತ್‌ನಲ್ಲಿ ಯುವಕರ ಮಧ್ಯೆ ಘರ್ಷಣೆ

ಕಾಸರಗೋಡು: ನಗರದ ತೆರು ವತ್ತ್‌ನಲ್ಲಿ ಯುವಕ ಮಧ್ಯೆ ಘರ್ಷಣೆ ನಡೆದು ಓರ್ವ ಗಾಯಗೊಂಡ ಘಟನೆ ನಡೆದಿದೆ.

 ಚೆಂಗಳ ಎರಿಯಪ್ಪಾಡಿಯ ನಿಜಾಮುದ್ದೀನ್ (25) ಘರ್ಷಣೆ ಯಲ್ಲಿ ಗಾಯಗೊಂಡಿದ್ದು, ಅದರಂತೆ ಮೂವರ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಮಾರ್ಚ್ 18ರಂದು ಸಂಜೆ ಘಟನೆ ನಡೆದಿದೆ.

ಕಾರು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ನ್ನು  ತೆರವು ಗೊಳಿಸುವಂತೆ ಹೇಳಿದ ದ್ವೇಷದಿಂದ ಮೂವರ ತಂಡ ತನ್ನ ಮೇಲೆ ಹಲ್ಲೆ ನಡೆಸಿತ್ತೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಿಜಾಮುದ್ದೀನ್ ಆರೋಪಿಸಿದ್ದಾರೆ.

You cannot copy contents of this page