ಅಸೌಖ್ಯ: ಗೃಹಿಣಿ ನಿಧನ

ಪೈವಳಿಕೆ: ಇಲ್ಲಿಗೆ ಸಮೀಪದ ಏದಾರು ನಿವಾಸಿ ಸರೋಜಿನಿ [48] ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಮಂಗಳೂರಿನ ಸಹೋದ ರನ ಮನೆಯಲ್ಲಿ ನಿಧನರಾದರು. ಇವರು ಸುಳ್ಯ ನಿವಾಸಿ ನವೀನ್ ಕುಮಾರ್ ರವರ ಪತ್ನಿಯಾಗಿದ್ದಾರೆ. ಮೃತರು ಪತಿ, ಮಕ್ಕಳಾದ ಶ್ರದ್ಧ, ಶರಣ್ಯ, ಸಹೋದರ, ಸಹೋದರಿಯರಾದ ಕೃಷ್ಣ ಕುಮಾರ್, ಸುರೇಶ್ ಕುಮಾರ್, ದೇವಕಿ, ಕಮಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಮುಂಡ, ತಾಯಿ ದೆಯ್ಯು, ಸಹೋದರರಾದ ಗೋಪಾಲಕೃಷ್ಣ, ಶಂಕರ, ಸಂಜೀವ ಈ ಹಿಂದೆ ನಿಧನಹೊಂದಿದ್ದಾರೆ. ಅಂತ್ಯಸAಸ್ಕಾರ ಏದಾರು ಮನೆ ಪರಿಸರದಲ್ಲಿ ಶನಿವಾರ ಸಂಜೆ ನಡೆಯಿತು. ಮೃತರ ಮನೆಗೆ ಸಿಪಿಎಂ ನೇತಾರ ಚಂದ್ರ ನಾಯ್ಕ್ , ಪಂ. ಸದಸ್ಯ ಅಬ್ದುಲ್ಲ.ಕೆ, ಪಂ. ಅಧ್ಯಕ್ಷೆ ಜಯಂತಿ.ಕೆ ಸಹಿತ ಹಲವು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ. ನಿಧನಕ್ಕೆ ಸಿಪಿಎಂ ಬಾಯಿಕಟ್ಟೆ ಬ್ರಾಂಚ್ ಸಮಿತಿಗಳು, ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ ಸಂತಾಪ ಸೂಚಿಸಿದೆ.

You cannot copy contents of this page