ಸಿಪಿಎಂ ಸ್ಥಳೀಯ ನೇತಾರ ನಿಧನ

ನೀರ್ಚಾಲು: ಸಿಪಿಎಂ ನೇತಾರ ನಾದ ಏಳ್ಕಾನ ನಿವಾಸಿ ನಾರಾಯಣ ಶೆಟ್ಟಿ (87) ನಿಧನಹೊಂದಿದರು. ಈ ಹಿಂದೆ ಟೈಲರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಹಿರಿಯ ಕೃಷಿಕನೂ ಆಗಿದ್ದರು. ಸಿಪಿಎಂ ಮಾಜಿ ಏರಿಯಾ ಕಮಿಟಿ ಸದಸ್ಯನೂ, ಪ್ರಸ್ತುತ ಸಿಪಿಎಂ ಏಳ್ಕಾನ ಬ್ರಾಂಚ್ ಸಮಿತಿ ಸದಸ್ಯರಾಗಿದ್ದರು. ಅಲ್ಲ್ಲದೆ ಕರ್ಷಕ ಸಂಘದಲ್ಲೂ ಸಕ್ರಿಯರಾಗಿದ್ದರು.

ಮೃತರು ಪತ್ನಿ ಜಯಂತಿ, ಮಕ್ಕಳಾದ ದಿವಾಕರ, ವಸಂತ, ಪ್ರೇಮಾವತಿ, ಸುನಿತ, ಚಂದ್ರಿಕ, ಹರೀಶ್, ಅಳಿಯ-ಸೊಸೆಯಂದಿರಾದ ಹರಿಣಾಕ್ಷಿ, ಮುಕ್ತ, ವಿಜಯ ಕುಮಾರ್, ನಾಗೇಶ್, ಮಾಧವ (ಅಡೂರು ದೇಲಂಪಾಡಿ), ದೀಪ (ದೇರಳಕಟ್ಟೆ), ಸಹೋದರಿ ಕಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರರಾದ ಬಾಬು ರೈ, ದೇರಣ್ಣ ರೈ ಎಂಬವರು ಈ ಹಿಂದೆ ನಿಧನಹೊಂದಿದ್ದಾರೆ.

You cannot copy contents of this page