ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಬೆಂಬಲ ಸೂಚಿಸಿ ವಿವಿಧೆಡೆ ಕಾಂಗ್ರೆಸ್ ಪ್ರತಿಭಟನೆ

ವರ್ಕಾಡಿ: ವೇತನ ಹೆಚ್ಚಳ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ತಿರುವನಂತಪುರದಲ್ಲಿ ನಡೆಸುತ್ತಿರುವ ಹೋರಾಟವನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ಪಿಣರಾಯಿ ಸರಕಾರ ಆಶಾ ಕಾರ್ಯಕರ್ತೆಯರ ಕಣ್ಣೀರಿನ ಶಾಪವನ್ನು ಎದುರಿಸಲಿದೆ ಎಂದು ಕೆಎಸ್‌ಯು ಜಿಲ್ಲಾಧ್ಯಕ್ಷ ಜವಾದ್ ಪುತ್ತೂರು ನುಡಿದರು. ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದು ಅವರು ಘೋಷಿಸಿದರು. ವರ್ಕಾಡಿ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ವರ್ಕಾಡಿ ಪಂಚಾಯತ್ ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.

ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಮಾತನಾಡಿದರು. ವರ್ಕಾಡಿ ಮಂಡಲ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಅರಿಬೈಲು ಅಧ್ಯಕ್ಷತೆ ವಹಿಸಿದರು. ನೇತಾರರಾದ ಉಮ್ಮರ್ ಬೋರ್ಕಳ, ಮುಹಮ್ಮದ್ ಮಜಾಲ್, ಫ್ರಾನ್ಸಿಸ್ ಡಿಸೋಜ, ಎಸ್. ಅಬ್ದುಲ್ ಖಾದರ್ ಹಾಜಿ, ಸದಾಶಿವ ಕೆ, ರಾಬಿಯಾ, ಎ.ಎಂ. ಅಶ್ರಫ್, ಗಣೇಶ್ ಪಾವೂರು, ಮೂಸಾ ಡಿ.ಕೆ, ಅಲಿ ಧರ್ಮನಗರ, ಅಶ್ರಫ್ ಕೆ.ಕೆ., ಉಮ್ಮರ್ ಪಾಲೆಂಗ್ರಿ, ಕಮಲಾಕ್ಷ, ಎಲಿಯಾಸ್ ಡಿಸೋಜಾ, ಅಬೂಬಕ್ಕರ್ ಕಿನ್ಯಜೆ ಉಪಸ್ಥಿತರಿದ್ದರು.

ಪೈವಳಿಕೆ: ತಿರುವನಂತಪುರದಲ್ಲಿ ಮುಷ್ಕರನಿರತರಾಗಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸಿ ಪೈವಳಿಕೆ ಪಂಚಾಯತ್ ಮಟ್ಟದ ಕಾಂಗ್ರೆಸ್ ಪ್ರತಿಭಟನೆಯನ್ನು ರಾಜ್ಯ ಕೃಷಿ ಕಾರ್ಮಿಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಾಸುದೇವನ್ ನಾಯರ್ ಉದ್ಘಾಟಿಸಿದರು. ಅವರು ಮಾತನಾಡಿ, ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು ಮುಷ್ಕರ ಹೂಡಲು ಸರಕಾರದ ನಿಲುವು ಕಾರಣ ಎಂದು ದೂರಿದರು.

ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳಾದ ನಾರಾಯಣ ಏದಾರ್, ರಾಘವೇಂದ್ರ ಭಟ್, ಮಂಡಲ ಸಮಿತಿ ಸದಸ್ಯರಾದ ಗಂಗಾಧರ ನಾಯ್ಕ್, ಮುಸ್ತಫ, ಸುಬ್ರಾಯ ಸಾಯ, ಮುಹಮ್ಮದಲಿ ಚೇವಾರ್, ಗಣೇಶ್ ಏದಾರ್, ನವಾಜ್ ಮುಂಡೋಳು ನೇತೃತ್ವ ವಹಿಸಿದರು. ನೌಶಾದ್ ಕಯ್ಯಾರು ಸ್ವಾಗತಿಸಿ, ಶಿವರಾಮ ಶೆಟ್ಟಿ ವಂದಿಸಿದರು.

You cannot copy contents of this page