ಪ್ರತಾಪನಗರ ಪರಿಸರದಲ್ಲಿ ಬೀದಿ ನಾಯಿ ಕಾಟ: 20ರಷ್ಟು ಕೋಳಿಗಳು ನಾಪತ್ತೆ

ಮಂಗಲ್ಪಾಡಿ:  ಪಂಚಾಯತ್‌ನ ಪ್ರತಾಪನಗರ, ಪುಳಿಕುತ್ತಿ ಪರಿಸರಗಳಲ್ಲಿ  ಬೀದಿ ನಾಯಿಗಳ ಕಾಟ ವ್ಯಾಪಕ ಗೊಂಡಿರುವುದಾಗಿ ದೂರಲಾಗಿದೆ. ಕೋಳಿ ಗೂಡಿನಿಂದ 20ರಷ್ಟು ಕೋಳಿಗಳನ್ನು ಬೀದಿ ನಾಯಿಗಳು ಕೊಂಡೊಯ್ದಿರುವುದಾಗಿ ಸ್ಥಳೀಯರು ದೂರುತ್ತಾರೆ.

ರಾತ್ರಿ ಹೊತ್ತಿನಲ್ಲಿ  ಗೂಡಿನ ನೆಟ್ ತುಂಡುಮಾಡಿ ಕೋಳಿಗಳನ್ನು ಕೊಂಡೊಯ್ಯುತ್ತಿರು ವುದಾಗಿ ಸ್ಥಳೀಯರು ತಿಳಿಸುತ್ತಿದ್ದು, ಇಲ್ಲಿನ ಸೋಮನಾಥ ಶೆಟ್ಟಿ, ರಮೇಶ್ ಕಾರ್ನವರ್, ಲಕ್ಷ್ಮಣ್‌ದಾಸ್, ಕೃಷ್ಣ ಶೆಟ್ಟಿಗಾರ್, ಸುಂದರಿ ಪುಳಿಕುತ್ತಿ ಇವರ ಕೋಳಿಗಳನ್ನು ಬೀದಿನಾಯಿಗಳು ಕೊಂಡೊಯ್ದಿವೆ ಎಂದಿದ್ದಾರೆ. ಹಗಲು ರಾತ್ರಿ ಹಿಂಡುಹಿಂಡಾಗಿ ನಾಯಿಗಳು ಈ ಪ್ರದೇಶದಲ್ಲಿ ಸುತ್ತಾಡುತ್ತಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ.

You cannot copy contents of this page