ವಕ್ಫ್ ಕಾನೂನು ಅಪಾಯಕಾರಿಯಾಗಿ ಪರಿವರ್ತಿಸಿರುವುದು ಯುಪಿಎ ಸರಕಾರ- ಕೆ. ಶ್ರೀಕಾಂತ್

ಕಾಸರಗೋಡು: ಡಾ. ಮನ್ ಮೋಹನ್ ಸಿಂಗ್‌ರ ನೇತೃತ್ವದಲ್ಲಿರುವ ಯು.ಪಿ.ಎ ಸರಕಾರವಾಗಿದೆ ವಕ್ಫ್ ಕಾನೂನನ್ನು ಸಾಮಾನ್ಯರ ಭೂಮಿ ಕಸಿಯುವ ರೀತಿಯಲ್ಲಿ ಅಪಾಯ ಕರವಾಗಿ ಪರಿವರ್ತಿಸಿರುವುದೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್  ಆರೋಪಿಸಿದ್ದಾರೆ. ವಕ್ಫ್ ಕಾನೂನು ತಿದ್ದುಪಡಿ ವಿರುದ್ಧ ಯುಡಿಎಫ್- ಎಲ್‌ಡಿಎಫ್‌ನ ನಿಲುವನ್ನು ಪ್ರತಿಭಟಿಸಿ ಬಿಜೆಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರ ಕ್ಯಾಂಪ್ ಕಚೇರಿಗೆ ನಡೆಸಿದ ಪ್ರತಿಭಟನಾ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡಿದರು.

ವಕ್ಫ್ ಬೋರ್ಡ್‌ಗೆ ಪರಮಾಧಿ ಕಾರ ನೀಡಿರುವುದು ಯುಪಿಎ ಸರಕಾರವಾಗಿದೆ. ಅಲಹಾಬಾದ್ ಹೈಕೋರ್ಟ್‌ಗೆ ಕೂಡಾ ವಸ್ತುವಿನ ಮೇಲಿರುವ ಹಕ್ಕು ಸ್ಥಾಪಿಸಲು ಕಾನೂನು ಹೋರಾಟ ನಡೆಸಬೇಕಾಗಿ ಬಂದಿದೆ. ಮುನಂಬದಲ್ಲಿ ನೂರಾರು ಕುಟುಂಬಗಳ ಭೂಮಿ ವಕ್ಫ್‌ನ ಅಧೀನದಲ್ಲಿ ತರಲು ಎಡ-ಬಲ ಒಕ್ಕೂಟಗಳು ಎಲ್ಲಾ ಒತ್ತಾಸೆ ನಡೆಸುತ್ತಿರುವುದಾಗಿ ಕೆ. ಶ್ರೀಕಾಂತ್ ಆರೋಪಿಸಿದರು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆಂ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್, ಕಾಞಂಗಾಡ್ ಮಂಡಲ ಅಧ್ಯಕ್ಷ ಪ್ರಶಾಂತ್ ಕಾಞಂಗಾಡ್, ಕೆ.ಕೆ. ನಾರಾಯಣನ್ ಮಾತನಾಡಿದರು. ಬಿಜೆಪಿ- ಯುವ ಮೋರ್ಚಾ ಜಿಲ್ಲಾ, ಮಂಡಲ ಪದಾಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದರು.

RELATED NEWS

You cannot copy contents of this page