ಕೇಂದ್ರ, ಕೇರಳ ಸರಕಾರಗಳಿಂದ ಪಿಂಚಣಿದಾರರಿಗೆ ವಂಚನೆ- ನೀಲಕಂಠನ್

ಕಾಸರಗೋಡು: ಕೇಂದ್ರ, ಕೇರಳ ಸರಕಾರಗಳು ಪಿಂಚಣಿದಾರರೊಂದಿಗೆ ತೋರುವ ವಂಚನೆ ಕೊನೆಗೊಳಿಸಬೇ ಕೆಂದು ಕೆಪಿಸಿಸಿ ಕಾರ್ಯದರ್ಶಿ ನೀಲಕಂಠನ್ ಆಗ್ರಹಿಸಿದ್ದಾರೆ. ಕೆಎಸ್‌ಎಸ್‌ಪಿಎ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿಯ ನೇತೃತ್ವದಲ್ಲಿ ಹಕ್ಕು ನಿಷೇಧ ವಿರುದ್ಧ ಕಾಸರಗೋಡು ಸಬ್ ಟ್ರಷರಿ ಕಚೇರಿ ಮುಂಭಾಗ ನಡೆಸಿದ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.  ವಿಧಾನಸಭಾ ಮಂಡಲ ಅಧ್ಯಕ್ಷ ಎಂ.ಕೆ.ಸಿ. ನಾಯರ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ಪಿ.ಪಿ. ಬಾಲಚಂದ್ರನ್ ಕುರಿಕ್ಕಳ್ ಪ್ರಧಾನ ಭಾಷಣ ಮಾಡಿದರು. ಕೆ.ಪಿ. ಬಾಲರಾಮನ್ ನಾಯರ್, ಪುರುಷೋತ್ತಮನ್ ಕಾರಡ್ಕ, ವಿ.ವಿ. ಜಯಲಕ್ಷ್ಮಿ, ಟಿ.ಕೆ. ಶ್ರೀಧರನ್, ಶೋಭನಾ ಶ್ರೀಧರನ್ ಸಹಿತ ಹಲವರು ಮಾತನಾಡಿದರು. ಸೀತಾಮರಾಮ ಮಲ್ಲ ಸ್ವಾಗತಿಸಿ, ಪುರುಷೋತ್ತಮನ್ ವಂದಿಸಿದರು.

RELATED NEWS

You cannot copy contents of this page