ಬೆಳ್ಳೂರು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಬಜೆಟ್ ಪಾಲು ಕೂಡಾ ನೀಡದೆ ಫಂಡ್ ಕಡಿತಗೊಳಿಸಿದ ಎಡರಂಗ ಸರಕಾರದ ನಿಲುವನ್ನು ಪ್ರತಿಭಟಿಸಿ ಐಕ್ಯರಂಗದ ನೇತೃತ್ವದಲ್ಲಿ ನಡೆದ ಅಹೋರಾತ್ರಿ ಪ್ರತಿಭಟನೆ ಯಂಗವಾಗಿ ಬೆಳ್ಳೂರು ಪಂ. ಸಮಿತಿ ನೇತೃತ್ವದಲ್ಲಿ ನಡೆದ ಧರಣಿಯನ್ನು ಕಾಸರಗೋಡು ಐಕ್ಯರಂಗ ಮಂಡಲ ಸಂಚಾಲಕ ಕೆ. ಖಾಲಿದ್ ಉದ್ಘಾಟಿಸಿದರು. ಎಸ್.ಕೆ. ಅಬ್ಬ ಸಲಿ ಅಧ್ಯಕ್ಷತೆ ವಹಿಸಿದರು. ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂಠನ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಕುಂಞಂಬು ನಂಬ್ಯಾರ್, ಯೂತ್ ಲೀಗ್ ಪ್ರಧಾನ ಕಾರ್ಯದರ್ಶಿ ನೂರುದ್ದೀನ್ ಬೆಳಿಂಜ, ಪಂ. ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಮುಹಮ್ಮದ್, ಪಿ.ಕೆ. ಶೆಟ್ಟಿ, ಶಂಸುದ್ದೀನ್ ಕಿನ್ನಿಂಗಾರ್, ಕುಂಞಿವಿದ್ಯಾನಗರ, ಐತ್ತಪ್ಪ ರೈ, ರಂಜಿತ್ ಬೆಳೇರಿ, ರಾಧಾಕೃಷ್ಣನ್ ನಾಕೂರು, ನಾರಾಯಣ ಬೆಳೇರಿ ಸಹಿತ ಹಲವರು ಭಾಗವಹಿಸಿದರು.






