ಕುಂಬಳೆ: ಆರಿಕ್ಕಾಡಿ ಕಡವತ್ ಮಖಾಂನಲ್ಲಿ ಶಹೀದ್ ಅರಬಿ ವಲಿಯು ಲ್ಲಾಹಿ ಅವರ ಹೆಸರಲ್ಲಿ ನಡೆಸಲಾಗು ತ್ತಿರುವ ಉರೂಸ್ ಹರಕೆ ಹಾಗೂ ಧಾರ್ಮಿಕ ಪ್ರವಚನ ಈ ತಿಂಗಳ 10ರಿಂದ 20ರ ವರೆಗೆ ನಡೆಯಲಿದೆ ಯೆಂದು ಪದಾಧಿಕಾರಿಗಳು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಮುಖ ಸಾದಾತ್ಗಳು, ಉಲಮಾಗಳು, ಉಮಾರಗಳು, ಸಾಮಾಜಿಕ, ಸಾಂಸ್ಕೃತಿಕ ವಲಯದ ಪ್ರಮುಖರು ಭಾಗವಹಿಸು ವರು. 10ರಂದು ಬೆಳಿಗ್ಗೆ 10 ಗಂಟೆಗೆ ಅತ್ತಾವುಲ್ಲ ತಂಙಳ್ ಉದ್ಯಾವರ ಧ್ವಜಾರೋಹಣಗೈಯ್ಯುವರು. ರಾತ್ರಿ 8.30ಕ್ಕೆ ಕೆ.ಎಸ್. ಆಟ್ಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸು ವರು. ಪ್ರೋ. ಕೆ. ಆಲಿಕುಟ್ಟಿ ಮುಸ್ಲಿ ಯಾರ್ ಅಧ್ಯಕ್ಷತೆ ವಹಿಸುವರು. ಹಲವರು ಪ್ರವಚನ ನೀಡುವರು. ಶಾಸಕ ಎ.ಕೆ.ಎಂ. ಅಶ್ರಫ್, ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಮಾತನಾಡುವರು. 11ರಂದು ಪಾಣಕ್ಕಾಡ್ ಮುನವ್ವರಲಿ ಶಿಹಾಬ್ ತಂಙಳ್ ಪ್ರಾರ್ಥನೆ ನಡೆಸುವರು. 12ರಿಂದ 18ರ ವರೆಗೆ ವಿವಿಧ ಪಂಡಿತರು ಧಾರ್ಮಿಕ ಪ್ರವಚನ ನೀಡುವರು. 19ರಂದು ನಡೆಯುವ ಸಮಾರೋಪ ಸಮಾರಂಭವನ್ನು ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸುವರು. ಪಾಣಕ್ಕಾಡ್ ಬಷೀರ್ ಅಲಿ ಶಿಹಾಬ್ ತಂಙಳ್ ಪ್ರಾರ್ಥನೆ ನಡೆಸುವರು. ನೌಫಲ್ ಸಖಾಪಿ ಕಳಸ ಪ್ರವಾಚನ ನೀಡುವರು. ಹಲವು ಗಣ್ಯರು ಭಾಗವಹಿಸಿದರು. ಈ ಬಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಖತೀಬ್ ಅಬ್ದುಲ್ ಮಜೀದ್, ಜಮಾಯತ್ ಅಧ್ಯಕ್ಷ ಬಿ. ಮುಹಮ್ಮದ್ ಕುಂuಟಿಜeಜಿiಟಿeಜ ಹಾಜಿ, ಪ್ರಧಾನ ಕಾರ್ಯದರ್ಶಿ ಮೊದೀನ್ಕುಂuಟಿಜeಜಿiಟಿeಜ ಹಾಜಿ, ಉಪಾಧ್ಯಕ್ಷ ಅಬ್ದುಲ್ ಖಾದರ್, ಉರೂಸ್ ಸಮಿತಿ ಅಧ್ಯಕ್ಷ ಎಫ್.ಎಂ. ಮುಹಮ್ಮದ್ ಕುಂuಟಿಜeಜಿiಟಿeಜ, ಸಂಚಾಲಕ ಖಾತೀಮ್ ಎ.ಕೆ., ಕೋಶಾಧಿಕಾರಿ ಮುಹಮ್ಮದ್ಕುಂuಟಿಜeಜಿiಟಿeಜ ಎಂ.ಕೆ ಭಾಗವಹಿಸಿದರು.






