ನವೀಕೃತ ಬಿಂದು ಜ್ಯುವೆಲ್ಲರಿ ಶೋರೂಮ್ ಉದ್ಘಾಟನೆ

ಕಾಸರಗೋಡು: ಅಶ್ವಿನಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಬಿಂದು ಜ್ಯುವೆಲ್ಲರಿಯ ನವೀಕೃತ ಶೋರೂಮ್‌ನ ಉದ್ಘಾಟನೆಯನ್ನು ಜ್ಯುವೆಲ್ಲರಿಯ ಸ್ಥಾಪಕ ದಿ| ಕೆ.ವಿ. ಕುಂಞಿಕಣ್ಣನ್‌ರ ಪತ್ನಿ ಶೋಭನ ಪಿ. ದೀಪ ಪ್ರಜ್ವಲಿಸಿ ನಿರ್ವಹಿಸಿದರು. ಈ ವೇಳೆ ಡೈಮಂಡ್ ಸೆಕ್ಷನ್, ಗ್ರೂಪ್‌ನ ಇನ್ನೊಂದು ಉದ್ಯಮವಾದ ಎಕ್ಸ್‌ಕ್ಲೂಸಿವ್ ಹ್ಯಾಂಡ್ ಪಿಕ್‌ಡ್ ಸಿಲ್ಕ್ ಸಾರಿ ಬ್ಯೂಟಿ ‘ಸಹಸ್ರ’ ಉದ್ಘಾಟನೆಯನ್ನು ಚಲನಚಿತ್ರ ನಟಿ ಶ್ವೇತಾ ಮೆನೋನ್ ನಿರ್ವಹಿಸಿದರು. ಶೋರೂಮ್‌ನ ನವೀಕರಣೆಯಂಗವಾಗಿ ಅತ್ಯಾಕರ್ಷಕವಾದ ಆಫರ್‌ಗಳನ್ನು ಬಿಂದು ಜ್ಯುವೆಲ್ಲರಿಯಲ್ಲಿ ಗ್ರಾಹಕರಿಗಾಗಿ ಸಿದ್ಧಪಡಿಸಲಾಗಿದೆ. ಈ ತಿಂಗಳ 13ರ ವರೆಗೆ ಮಜೂರಿಯಲ್ಲಿ 35 ಶೇ. ಕಡಿತ ನೀಡಲಾಗುತ್ತಿದೆ. ಅಲ್ಲದೆ ಎಪ್ರಿಲ್ 1ರಿಂದ ಜೂನ್ 30ರ ವರೆಗೆ ವಿವಾಹ ಪರ್ಚೇಸ್ ಮಾಡುವವರಿಂದ ಆಯ್ಕೆಯಾಗುವ ಮೂರು ದಂಪತಿಯರಿಗೆ ಮಲೇಷ್ಯಾಕ್ಕೆ ಹನಿಮೂನ್ ಟ್ರಿಪ್ ಏರ್ಪಡಿಸಲಾಗಿದೆ. ಎಪ್ರಿಲ್ 30ರಂದು ಅಕ್ಷಯ ತೃತೀಯದಂಗವಾಗಿ ಮುಂಗಡ ಬುಕ್ಕಿಂಗ್ ಆರಂಭಿಸಲಾಗಿದೆಯೆಂದು ಜ್ಯುವೆಲ್ಲರಿ ಮಾಲಕರು ತಿಳಿಸಿದ್ದಾರೆ.

You cannot copy contents of this page