ಮಾದಕದ್ರವ್ಯ ಹ್ಯಾಶಿಶ್ ಪತ್ತೆ: ಯುವಕ ಸೆರೆ

ಕಾಸರಗೋಡು: ತಳಂಗರೆ ಮಾಲಿಕ್ ದೀನಾರ್ ಮಸೀದಿಗೆ ಹೋಗುವ ಕಮಾನಿನ ಬಳಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚ ರಣೆಯಲ್ಲಿ ಮಾದಕದ್ರವ್ಯವಾದ ೫ ಗ್ರಾಂ ಹ್ಯಾಶಿಶ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಅದನ್ನು ಕೈವಶವಿರಿಸಿಕೊಂಡಿದ್ದ ಆರೋಪದಂತೆ ತಳಂಗರೆ ಕುನ್ನಿಲ್‌ನ ಅಬ್ದುಲ್ ರಿಯಾಸ್ (40) ಎಂಬಾತ ನನ್ನು ಅಬಕಾರಿ ತಂಡ ಬಂಧಿಸಿ ಎನ್‌ಡಿಪಿ ಎಸ್  ಕಾನೂನುಪ್ರಕಾರ ಕೇಸು ದಾಖಲಿ ಸಿಕೊಂಡಿದೆ. ಕಾಸರಗೋಡಿನ ಅಬಕಾರಿ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್‌ಸ್ಪೆ ಕ್ಟರ್ ಪ್ರಶೋಬ್ ಕೆ.ಎಸ್ ನೇತೃತ್ವದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್)ಗಳಾದ ಪ್ರಮೋದ್ ಕುಮಾರ್, ಸುರೇಶ್ ಕೆ.ವಿ, ಗ್ರೇಡ್ ಪ್ರಿವೆಂಟೀವ್ ಆಫೀಸರ್ ನೌಶಾದ್, ಸಿವಿಲ್ ಎಕ್ಸೈಸ್ ಆಫೀಸ ರ್‌ಗಳಾದ ಸೋನು ಸೆಬಾಸ್ಟಿನ್ ಮತ್ತು ಅಶ್ವತಿ ಎಂಬಿವರನ್ನೊಳಗೊಂಡ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ.

RELATED NEWS

You cannot copy contents of this page